You are currently viewing FLASH NEWS : ನಾಲ್ಕನೇ ಪರಸ್ಪರ ಕಲಿಕಾ ತರಬೇತಿ ಆರಂಭ ಸಮುದಾಯವಾರು 3 ತಿಂಗಳ ವರದಿ ಪ್ರಸ್ತುತಿ : ನಾಯಕತ್ವ ವೃದ್ಧಿಗೆ ಒತ್ತು!

FLASH NEWS : ನಾಲ್ಕನೇ ಪರಸ್ಪರ ಕಲಿಕಾ ತರಬೇತಿ ಆರಂಭ ಸಮುದಾಯವಾರು 3 ತಿಂಗಳ ವರದಿ ಪ್ರಸ್ತುತಿ : ನಾಯಕತ್ವ ವೃದ್ಧಿಗೆ ಒತ್ತು!

FLASH NEWS : ನಾಲ್ಕನೇ ಪರಸ್ಪರ ಕಲಿಕಾ ತರಬೇತಿ ಆರಂಭ ಸಮುದಾಯವಾರು 3 ತಿಂಗಳ ವರದಿ ಪ್ರಸ್ತುತಿ : ನಾಯಕತ್ವ ವೃದ್ಧಿಗೆ ಒತ್ತು!

PRAJAVIKSHANE DIGITAL NEWS : 

ಬೆಂಗಳೂರು, ಏ.22: ಇಲ್ಲಿನ ಕೆಂಗೇರಿಯ ಶಾಂತಿ ಸಾಧನ ಟ್ರಸ್ಟ್ ಸಭಾಂಗಣದಲ್ಲಿ ಮಂಗಳವಾರ ಐದು ದಿನಗಳ ನಾಲ್ಕನೇ ಪರಸ್ಪರ ಕಲಿಕಾ ತರಬೇತಿ ಆರಂಭಿಸಲಾಯಿತು.

ಬಳ್ಳಾರಿ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳ 30 ಸಂವಿಧಾನ ಸಂಗಾತಿಗಳಿಗೆ ಎಚ್‌.ಐ.ಡಿ. ಫೋರಂ ವತಿಯಿಂದ ಸಿಇಒ ಜಾನ್ ನೇತೃತ್ವದಲ್ಲಿ 5 ದಿನಗಳ ಕಾಲ ಪರಸ್ಪರ ಕಲಿಕಾ ತರಬೇತಿ ನೀಡಲಾಗುತ್ತಿದೆ. ಆರಂಭದಲ್ಲಿ ಸಂಗಾತಿಗಳು ಹೋರಾಟ ಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸೃಜನಶೀಲ ಚಟುವಟಿಕೆಗಳೊಂದಿಗೆ ಮುಕ್ತ ಚರ್ಚೆಗಳು ನಡೆದವು.

ಮೊದಲ ಅಧಿವೇಶನದಲ್ಲಿ ಸಂಯೋಜಕಿ ಅಸ್ಮಾ ಅವರು ತರಬೇತಿ ಸ್ಥಳದ ಕುರಿತು ಸೂಚನೆಗಳನ್ನು ನೀಡಿದರು. ಬಳಿಕ ‘ನನ್ನ ಪಯಣದ ಹಿನ್ನೋಟ’ (ಫೆಬ್ರುವರಿ–ಏಪ್ರಿಲ್) ಶೀರ್ಷಿಕೆಯಡಿ 3 ತಿಂಗಳ ಕಾರ್ಯಚಟುವಟಿಕೆಗಳ ವರದಿ ಮಂಡಿಸಲಾಯಿತು. ಸಂಗಾತಿಗಳನ್ನು ಸಮುದಾಯವಾರು ಗುಂಪುಗಳಾಗಿ ವಿಭಜಿಸಿ, ಡ್ರಾಯಿಂಗ್ ಶೀಟ್‌ಗಳ ಮೂಲಕ ವರದಿ ತಯಾರಿಸಿ ಪ್ರಸ್ತುತಪಡಿಸಲಾಯಿತು. ಯುವ, ಮಕ್ಕಳ, ಮುಸ್ಲಿಂ, ಮಹಿಳಾ ಸಮುದಾಯಗಳ ಜೊತೆಗೆ ಅಲೆಮಾರಿ, ದೇವದಾಸಿ ಹಾಗೂ ದಲಿತ ಮಹಿಳೆಯರೊಂದಿಗೆ ಕೈಗೊಂಡ ಜಾಗೃತಿ, ತರಬೇತಿ ಹಾಗೂ ಜಯಂತಿ ಕಾರ್ಯಕ್ರಮಗಳ ವಿವರ ಹಂಚಿಕೊಳ್ಳಲಾಯಿತು.

ಎರಡನೇ ಅಧಿವೇಶನವು ಸಹ ಕಾರ್ಯಕ್ರಮದ ಸಂಯೋಜಕಿ ಅಸ್ಮಾ ಅವರು ತಮ್ಮ ಸಮುದಾಯಗಳಲ್ಲಿ ಕಂಡ ಯಶಸ್ಸಿನ ಕಥೆಗಳು, ಅಂತರಗಳು ಹಾಗೂ ಸವಾಲುಗಳ ಕುರಿತು ಚರ್ಚೆ ನಡೆಸಿ, ಅವನ್ನು ‘ಡ್ರಾಯಿಂಗ್ ಸೀಟ್’ನಲ್ಲಿ ಗುಂಪಿನಲ್ಲಿ ಬರೆದು ವೇದಿಕೆಯಲ್ಲಿ ಮಂಡಿಸಿದರು.

ಮೂರನೇ ಅಧಿವೇಶನದಲ್ಲಿ ಸಂಯೋಜಕ ಧರಣಪ್ಪ ಅವರು ನಡೆಸಿ ವ್ಯಕ್ತಿಗತ, ಗುಂಪು ಹಾಗೂ ಸಾಮುದಾಯಿಕ ನಾಯಕತ್ವ ಬೆಳವಣಿಗೆ ಕುರಿತು ಚಟುವಟಿಕೆಗಳ ಮೂಲಕ ವಿವರಿಸಿದರು. ಸಂಗಾತಿಗಳನ್ನು ಮೂರು ತಂಡಗಳಾಗಿ ವಿಭಜಿಸಿ, ಗುಂಪು ಚರ್ಚೆ ನಡೆಸಿಸಿ, ಡ್ರಾಯಿಂಗ್ ಶೀಟ್‌ಗಳ ಮೇಲೆ ದಾಖಲಿಸಿ ಪ್ರಸ್ತುತಪಡಿಸಲು ಮಾರ್ಗದರ್ಶನ ನೀಡಿದರು.


ದಿನದ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸಲು ಸಂಗಾತಿಗಳನ್ನು ನಾಲ್ಕು ತಂಡಗಳಾಗಿ ವಿಭಜಿಸಲಾಯಿತು. ವರದಿ ತಂಡ, ಕಲಿಕಾ ಕೇಂದ್ರ ನಿರ್ವಹಣೆ, ಊಟ–ವಸತಿ ಹಾಗೂ ಸಮಯ ಪಾಲನೆ, ಮತ್ತು ಪೋಸ್ಟರ್ ತಯಾರಿ ತಂಡಗಳನ್ನು ರಚಿಸಿ ದಿನದ ಕಾರ್ಯಚಟುವಟಿಕೆಗಳ ನಿರ್ವಹಣೆಯನ್ನು ವಹಿಸಲಾಯಿತು.
ಬಳಿಕ ಬೇಸ್‌ ಗ್ರೂಪ್ ಸಭೆಗಳು ನಡೆದವು. ದಿನಪೂರ್ತಿ ನಡೆದ ಚಟುವಟಿಕೆಗಳ ಕುರಿತು ಸಂಗಾತಿಗಳು ಅನುಭವ ಹಂಚಿಕೊಂಡರು. ದಿನದ ಕಾರ್ಯಕ್ರಮ ಊಟದೊಂದಿಗೆ ಮುಕ್ತಾಯವಾಯಿತು.

ಈ ಸಂದರ್ಭದಲ್ಲಿ ಧರಣಪ್ಪ ಹಾಗೂ ಅಸ್ಮಾ ಮಾತನಾಡಿ, ಸಾಮಾಜಿಕ ಬದ್ಧತೆ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸುವುದೇ ತರಬೇತಿಯ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೆಂಟರ್‌ಗಳಾದ ಡಾ. ಭುವನೇಶ್ವರಿ ಕಾಂಬ್ಳೆ, ಸುರೇಖಾ ಬೀದರ, ಮಲ್ಲು ಕುಂಬಾರ, ಗಿರೀಶ್ ಹಾಗೂ ಮಂಜುಳಾ ಉಪಸ್ಥಿತರಿದ್ದರು.

 

“ಸಂವಿಧಾನಿಕ ಮೌಲ್ಯಗಳ ಅರಿವು ಹಾಗೂ ಸಮುದಾಯದೊಳಗಿನ ನಾಯಕತ್ವ ಬೆಳೆಸುವ ತರಬೇತಿಗಳು ಶಾಶ್ವತ ಬದಲಾವಣೆಗೆ ದಾರಿ ಮಾಡಿಕೊಡುತ್ತವೆ. ಕಲಿತುದನ್ನು ಸಮುದಾಯದಲ್ಲಿ ಅನುಷ್ಠಾನಗೊಳಿಸಿದಾಗಲೇ ನಾಯಕತ್ವ ವೃದ್ಧಿಯಾಗುತ್ತದೆ”


—ಶಾಂತಕುಮಾರ್ ಜಾನ್, ಸಿಇಒ, ಎಚ್‌.ಐ.ಡಿ. ಫೋರಂ, ಬೆಂಗಳೂರು

 

ವರದಿ ತಂಡ : ರಿಯಾಜ್, ಭೀಮಾಶಂಕರ, ರಮಾ, ರವಿ, ಸಲ್ಮಾ ಜಾನ್, ಶರಣಬಸವ, ಶಿವನಾಥ, ಬೀರಲಿಂಗ.

Leave a Reply

error: Content is protected !!