You are currently viewing LOCAL NEWS : ದಶಕಗಳ ಕನಸು ನನಸು: ಗ್ರಾಮಸ್ಥರ ಮನೆಗಳಿಗೆ ಅಧಿಕೃತ ‘ಹಕ್ಕು ಪತ್ರ’ ವಿತರಣೆ!

LOCAL NEWS : ದಶಕಗಳ ಕನಸು ನನಸು: ಗ್ರಾಮಸ್ಥರ ಮನೆಗಳಿಗೆ ಅಧಿಕೃತ ‘ಹಕ್ಕು ಪತ್ರ’ ವಿತರಣೆ!

LOCAL NEWS : ದಶಕಗಳ ಕನಸು ನನಸು: ಗ್ರಾಮಸ್ಥರ ಮನೆಗಳಿಗೆ ಅಧಿಕೃತ ‘ಹಕ್ಕು ಪತ್ರ’ ವಿತರಣೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು (ಕಕ್ಕಿಹಳ್ಳಿ ತಾಂಡಾ) ಏ. 26 : “ಸ್ವಂತ ಮನೆಯಿದ್ದರೂ ದಾಖಲೆಗಳಿಲ್ಲದ ಕಾರಣ ನಾವಿಷ್ಟು ದಿನ ನಮ್ಮದೇ ಮನೆಯಲ್ಲಿ ಬಾಡಿಗೆದಾರರಂತೆ ಬದುಕುತ್ತಿದ್ದೆವು. ಇಂದು ನಮ್ಮ ಕೈ ಸೇರಿರುವ ಈ ಹಕ್ಕು ಪತ್ರ ಕೇವಲ ಕಾಗದವಲ್ಲ, ಅದು ನಮ್ಮ ಬದುಕಿನ ಭದ್ರತೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಯಮನೂರಪ್ಪ ಕಟ್ಟಿಮನಿ ಸಂತಸ ವ್ಯಕ್ತಪಡಿಸಿದರು.

​ಏಪ್ರಿಲ್ 24 (ಶುಕ್ರವಾರ) ರಂದು ಕಕ್ಕಿಹಳ್ಳಿ ಗ್ರಾಮದಲ್ಲಿ ನಡೆದ “ಹಕ್ಕುಪತ್ರ ವಿತರಣಾ ಕಾರ್ಯಕ್ರಮ” ನಡೆಯಿತು. ಕಳೆದ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮದ ನಿವಾಸಿಗಳ ಹಕ್ಕು ಪತ್ರದ ಬೇಡಿಕೆ ಕೊನೆಗೂ ಈಡೇರಿದೆ. ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ 130 ಕುಟುಂಬಗಳಿಗೆ ಅಧಿಕೃತ ವಾಸದ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ದಶಕಗಳ ಆತಂಕಕ್ಕೆ ತೆರೆ ಎಳೆಯಲಾಯಿತು.

​ಈ ಗ್ರಾಮದ ನಿವಾಸಿಗಳು ತಲೆತಲಾಂತರಗಳಿಂದ ಇಲ್ಲಿ ವಾಸಿಸುತ್ತಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಹಾಗೂ ಭೂ ದಾಖಲೆಗಳ ಲೋಪದೋಷಗಳಿಂದಾಗಿ ಮನೆಗಳ ಹಕ್ಕು ಪತ್ರ ಸಿಕ್ಕಿರಲಿಲ್ಲ. ಇದರಿಂದಾಗಿ ಬ್ಯಾಂಕ್ ಸಾಲ ಪಡೆಯಲು, ಮನೆಯ ನವೀಕರಣಕ್ಕೆ ಅಥವಾ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಗ್ರಾಮಸ್ಥರು ಹರಸಾಹಸ ಪಡಬೇಕಾಗಿತ್ತು.

ಈ ಕುರಿತು ಗ್ರಾಮಸ್ಥರು ಹತ್ತಾರು ಬಾರಿ ಪ್ರತಿಭಟನೆ ಹಾಗೂ ಮನವಿಗಳನ್ನು ಸಲ್ಲಿಸಿದ್ದರು. ಸರ್ಕಾರದ ಇತ್ತೀಚಿನ ವಿಶೇಷ ಅಭಿಯಾನದ ಅಡಿಯಲ್ಲಿ ಸರ್ವೆ ಕಾರ್ಯ ನಡೆಸಿ, ಈಗ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಗ್ರಾಮಸ್ಥರ ಮನೆ ಬಾಗಿಲಿಗೆ ಹಕ್ಕುಪತ್ರಗಳನ್ನು ತಲುಪಿಸಿದು ವಿಶೇಷವಾಗಿತ್ತು.

“ದಶಕಗಳ ಕಾಲದ ಕಾನೂನು ಹೋರಾಟ ಮತ್ತು ಕಾಯುವಿಕೆಗೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಆಡಳಿತ ಯಂತ್ರ ಮನಸ್ಸು ಮಾಡಿದರೆ ಜನಸಾಮಾನ್ಯರ ಬದುಕಿನಲ್ಲಿ ಎಂತಹ ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಇದೇ ಸಾಕ್ಷಿ.”

 – ಮೇಘರಾಜ್ ಬಳಿಗೇರಿ, ಗ್ರಾಮದ ಮುಖಂಡರು. 

 

“ಇಂದಿನಿಂದ ನೀವು ನಿಮ್ಮ ಮನೆಯ ಕಾನೂನುಬದ್ಧ ಮಾಲೀಕರು. ಯಾವುದೇ ಆತಂಕವಿಲ್ಲದೆ ನೀವು ನಿಮ್ಮ ಆಸ್ತಿಯನ್ನು ಅಭಿವೃದ್ಧಿಪಡಿಸಬಹುದು.”

 – ಬಸವರಾಜ್ ಬಣ್ಣೆಶಿರೂರು, ತಹಶೀಲ್ದಾರರು ಕುಕನೂರು.

 ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ವಿ. ಕುರ್ತಕೋಟಿ ಕಂದಾಯ ಇಲಾಖೆಯ ಶ್ರೀ ಸುರೇಶ್ ಬಾಳೆಹೊಸುರು, ಪಿಡಿಓ ಮಹೇಶಗೌಡ, ಸುರೇಶ್ ಕ್ಯಾದಗುಂಪಿ ಹಾಗೂ ಸಿಬ್ಬಂದಿ ವರ್ಗ ಮುಖಂಡರಾದ ಮೇಘರಾಜ ಬಳಗೇರಿ, ಹಂಪಣ್ಣ ಕಟ್ಟೀಮನಿ, ವಿರುಪಾಕ್ಷಯ್ಯ ಕುರ್ತಕೋಟಿ, ವಾಲೇಪ್ಪ ತಲ್ಲೂರ, ಯಲ್ಲಪ್ಪ ಕಾರಭಾರಿ, ವೇಂಕಟೇಶ ರಾಟಿಮನಿ, ಶ್ರೀಕಾಂತ ಕಟ್ಟೀಮನಿ, ಪ್ರಕಾಶ ಬಳಗೇರಿ, ಯಮನೂರಪ್ಪ ಭಾನಾಪೂರ ಹಾಗೂ ಊರಿನ ಗುರು ಹಿರಿಯರು ಯುವಕ ಮಿತ್ರರು ಹಾಜರಿದ್ದರು.

Leave a Reply

error: Content is protected !!