You are currently viewing ಮುದಗಲ್ಲ :- ಬಿಜೆಪಿ ಗೆಲುವಿಗೆ ಭರ್ಜರಿ ಸಂಭ್ರಮಾಚರಣೆ..

ಮುದಗಲ್ಲ :- ಬಿಜೆಪಿ ಗೆಲುವಿಗೆ ಭರ್ಜರಿ ಸಂಭ್ರಮಾಚರಣೆ..

ಮುದಗಲ್ಲ ವರದಿ..

ಮುದಗಲ್ಲ :- ಬಿಜೆಪಿ ಗೆಲುವಿಗೆ ಭರ್ಜರಿ ಸಂಭ್ರಮಾಚರಣೆ..

ಮುದಗಲ್ಲ :- ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ
ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ
ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಮುದಗಲ್ಲನ ಬಿಜೆಪಿ ಘಟಕದಿಂದ ಭರ್ಜರಿ ಸಂಭ್ರಮ ಆಚರಣೆ ನಡೆಸಲಾಯಿತು.

ಭಾರತೀಯ ಜನತಾ ಪಾರ್ಟಿ ಮುದಗಲ್ಲ ನಗರ ಘಟಕದ ಅಧ್ಯಕ್ಷ ರಾದ ಕರಿಯಪ್ಪ ಯಾದವ್ ನೇತೃತ್ವದಲ್ಲಿ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಬಿಜೆಪಿ ಪಕ್ಷದ ಅನೇಕ ಮುಖಂಡರು ಭಾಗವಹಿಸಿ ಮೊದಲಿಗೆ ಅಂಬೇಡ್ಕರ್ ನಾಮಫಲಕಕ್ಕೆ
ಮಾಲಾರ್ಪಣೆ ಮಾಡಿ ನಂತರ ಪಟಾಕಿ ಸಿಡಿಸಿ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ
ಭಾರತೀಯ ಜನತಾ ಪಾರ್ಟಿ ಮುದಗಲ್ಲ ನಗರ ಘಟಕದ ಅಧ್ಯಕ್ಷ ರಾದ ಕರಿಯಪ್ಪ ಯಾದವ್, ಬಿಜೆಪಿ ಪಕ್ಷ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪಶ್ಚಿಮ
ಬಂಗಾಳ ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಭರ್ಜರಿ ಗೆಲುವನ್ನು ಸಾಧಿಸಿ ಸರ್ಕಾರ ರಚನೆ ಮಾಡಿದೆ. ಎಲ್ಲ ಕಡೆಯೂ
ಕೂಡ ಕಾಂಗ್ರೆಸ್ ಧೂಳಿ ಪಟವಾಗಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಅದಕ್ಕಾಗಿ ಈ ಚುನಾವಣೆಗಳು ಕೂಡ ರಾಜ್ಯದ ಬಿಜೆಪಿಗೆ ಶಕ್ತಿ ತುಂಬಲಿವೆ ನಾವೆಲ್ಲರೂ ಕೂಡ ಹರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗೋಣ ಎಂದರು.

ನಂತರ ಎಲ್ಲರೂ ಪರಸ್ಪರ ಸಿಹಿ ಹಂಚಿ ಗೆಲುವಿನ ನಗೆ ಬೀರಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಸಣ್ಣ ಸಿದ್ದಯ್ಯ ಮೆಗಳಪೇಟೆ , ಉದಯ ಕುಮಾರ್ ಕಂಬಾರ, ಸಂತೋಷ ಸುರುಪುರ ,ಮಲ್ಲಪ್ಪ ಮಾಟೂರ್,ವೆಂಕಟೇಶ್ ಹಿರೇಮನಿ ,ಮಂಜುನಾಥ  ನಂದವಾಡಗಿ ,ನಾಗರಾಜ ತಳವಾರ,ಶರಣಪ್ಪ ಹಂಚನಾಳ,ರವಿ ಕಟ್ಟಿಮನಿ, ಹಾಗೂ ನೂರಾರು ಕಾಯ೯ಕತ೯ರು ಉಪಸ್ಥಿತರಿದ್ದರು…

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!