ಕುಕನೂರು : ವಿಧಾನ ಸಭಾ ಚುನಾವಣೆ ಪ್ರಚಾರ ನಿಮಿತ್ತ ಇಂದು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪರ ಅವರು ಮಗಳು ಮಮತಾ ಹಾಗೂ ಅಳಿಯ ರತನ್ ಭಾತೆ ಮನೆ ಮನೆಗೂ ಭೇಟಿ ನೀಡಿ ತಂದೆಯ ಪರ ಪ್ರಚಾರ ಮಾಡಿ ಮತ ನೀಡುವಂತೆ ಕೋರಿದರು.
ಈ ಮೊದಲು ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.