ಮುದಗಲ್ಲ ವರದಿ…
ಮುದಗಲ್ಲ :-ಸಿದ್ರ ಕಿಡ್ಸ್ ನಿಂದ ಕಿಡ್.ಝೀ ಪ್ರೀ-ಸ್ಕೂಲ್ ಪ್ರಾರಂಭ..
ಮುದಗಲ್ಲ :-ಅಂಜುಮನ್ – ಏ – ಇಸ್ಲಾಂ ಸಂಸ್ಥೆಯ ಹಾಗೂ ಸಿದ್ರ ಕಿಡ್ಸ್ ಪೌಂಡೇಶನ್ ನೇತೃತ್ವದಲ್ಲಿ ಪುರಸಭೆ ರಂಗಮಂದಿರದಲ್ಲಿ ಬೃಹತ್ ವೇದಿಕೆ ಕಾಯ೯ಕ್ರಮಕ್ಕೆ ಸಸಿಗೆ ನೀರು ಹನಿಸುವ ಮೂಲಕ ವೇದಿಕೆ ಕಾಯ೯ಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು
ಎಚ್ ಕೆ. ಖುರೇಷಿ ಕಾಲೋನಿ APMC ಮುದಗಲ್ಲ ನಲ್ಲಿ ಕಟ್ಟಡದಲ್ಲಿ ಸುರಕ್ಷಿತ ಮತ್ತು ಮನೆಯಂತಿರುವ ವಾತಾವರ ಣದಲ್ಲಿ ಪ್ರೀ-ಸ್ಕೂಲ್ ಆರಂಭಿಸ ಲಾಗುತ್ತಿದೆ. ಮಕ್ಕಳಲ್ಲಿ ಕುತೂಹಲ ಮತ್ತು ಆತ್ಮ ವಿಶ್ವಾಸವನ್ನು ಉತ್ತೇಜಿಸುವ ಸ್ನೇಹಪೂರ್ಣ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ಉದ್ಘಾಟನೆ ಸಂದರ್ಭದಲ್ಲಿ ಮಾಡುವಾಗ ಮಹಮ್ಮದ್ ಶಮೀರ್ ನೂರಾನಿ ಅವರು ತಿಳಿಸಿದ್ದರು. ಟ್ರಸ್ಟ್ ಇದೀಗ ಸಿದ್ರ ಕಿಡ್ಸ್ ನಿಂದ ಕಿಡ್.ಝೀ ಪ್ರೀ-ಸ್ಕೂಲ್ ಐತಿಹಾಸಿಕ ಮುದಗಲ್ಲ ಪಟ್ಟಣದಲ್ಲಿ ಅಂಜುಮನ್ – ಏ – ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರೌಫ್ ಖುರೇಷಿ ಅವರು ವೈಭವ ದಿಂದ Laptop ನಲ್ಲಿ button ಒತ್ತುವ ಮೂಲಕ ಸಿದ್ರ ಕಿಡ್ಸ್ ನಿಂದ ಕಿಡ್.ಝೀ ಪ್ರೀ-ಸ್ಕೂಲ್ ಚಾಲನೆ ನೀಡಿದರು 1.5 ರಿಂದ 4 ವರ್ಷದ ಮಕ್ಕಳಿಗಾಗಿ ರೂಪಿಸಲಾಗಿರುವ ಈ ಪ್ರೀ-ಸ್ಕೂಲ್, ಮಕ್ಕಳಿಗೆ ಸಂತೋಷ ಮತ್ತು ಆಸಕ್ತಿದಾಯಕ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಆಟದ ಮೂಲಕ ಕಲಿಯುವ, ಒಟ್ಟಿಗೆ ಬೆಳೆಯುವ, ಸ್ನೇಹದ ವಾತಾವರಣದ ಜೊತೆಗೆ ಜೀವನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪಠ್ಯಕ್ರಮವನ್ನು ರೂಪಿಸಲಾಗಿದೆ.

ಕಟ್ಟಡದಲ್ಲಿ ಸುರಕ್ಷಿತ ಮತ್ತು ಮನೆಯಂತಿರುವ ವಾತಾವರಣದಲ್ಲಿ ಪ್ರೀ-ಸ್ಕೂಲ್ ಆರಂಭಿಸ ಲಾಗುತ್ತಿದೆ. ಮಕ್ಕಳಲ್ಲಿ ಕುತೂಹಲ ಮತ್ತು ಆತ್ಮ ವಿಶ್ವಾಸವನ್ನು ಉತ್ತೇಜಿಸುವ ಸ್ನೇಹಪೂರ್ಣ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗಿದೆ ಎಂದು ಫಾರೂಕ್ ಅಹ್ಮದ್ ನೂರಾನಿ ತಿಳಿಸಿದ್ದಾರೆ..

ಪ್ರತಿಯೊಬ್ಬ ಮಗುವನ್ನೂ “ಚಿಕ್ಕ ಮಿನುಗುವ ನಕ್ಷತ್ರ”ವಾಗಿ ಭವಿಷ್ಯದ ಸೂಪರ್ ಸ್ಟಾರ್”ಗಳಾಗಿ ರೂಪಿಸುತ್ತದೆ. ಸಿದ್ರ ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಶಿಕ್ಷಣವು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗಿಲ್ಲ. “ಜೀವನ” ಎಂಬ ಮಹತ್ವದ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತದೆ.

ಆಟದ ಮೂಲಕ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮೌಲ್ಯಾಧಾರಿತ ಶಿಕ್ಷಣ, ಒಂದೇ ಸಂಸ್ಥೆಯಲ್ಲಿ ನಿರಂತರ ಶಿಕ್ಷಣ. ಸೃಜನಶೀಲತೆ, ಸಂವಹನ ಮತ್ತು ಆತ್ಮವಿಶ್ವಾಸ ಅಭಿವೃದ್ಧಿ, ಶೈಕ್ಷಣಿಕ ಪರಂಪರೆ, ಸಿದ್ರ ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ನಾವು ಕೇವಲ ಶಿಕ್ಷಣ ನೀಡುವುದಲ್ಲ – ನಾವು ಮಕ್ಕಳನ್ನು ಪ್ರೇರೇಪಿಸುತ್ತೇವೆ, ಅವರ ವ್ಯಕ್ತಿತ್ವವನ್ನು ರೂಪಿಸುತ್ತೇವೆ ಮತ್ತು ಭವಿಷ್ಯದ ನಾಯಕರನ್ನು ನಿರ್ಮಿಸುತ್ತೇವೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9113270285 ಹಾಗೂ 8618881339ಎಂದು ತಿಳಿಸಿದ್ದಾರೆ.

ನಮ್ಮ ಹೆಮ್ಮೆಯ ಸಿದ್ರ ಕಿಡ್ಸ್ ಪ್ರಿ ಸ್ಕೂಲ್ ಅಲವಾರ ಸೌಲಭ್ಯ ಗಳು ಇವೆ 3 ರಿಂದ 4 ವಷ೯ದ ಮಕ್ಕಳಿಗೆ ,ಪ್ರವೇಶ, ತರಬೇತಿ ಹೊಂದಿದೆ ಹಾಗೂ ನುರಿತ ಅಧ್ಯಾಪಕರಿಂದ ಬೋಧನೆ. ಇಂಗ್ಲಿಷ್ ,ಹಿಂದಿ ,ಆರಬಿ ,ಗಣಿತ ಮತ್ತು EVS ಬಳಗೊಂಡು ಸಮಗ್ರ ಪಠ್ಯಕ್ರಮ , ಥೀಮ್ ಆಧಾರಿತ ಮತ್ತು ಪ್ಲೇ ವೇ ವಿಧಾನದಲ್ಲಿ ಕಲಿಕೆ, ದಿನನಿತ್ಯದ ದುಆ, ದರೂದ್ ,ದಿಕ್ ರ್ ಗಳನ್ನೂಳಗೊಂಡ, ಪ್ರಾಕ್ಟಿಕಲ್ ಇಸ್ಲಾಮಿಕ್ ಲೈಫ್ ಸ್ಟೈಲ್ ಪರಿಶೀಲನೆ , ಪ್ರೀ -ರೈಟಿಂಗ್ ಸ್ಕೂಲ್ ,ಗಳ ಅಭಿವೃದ್ಧಿ ಗಾಗಿ ವಿಶೇಷ ವ್ಯಾಯಾಮ ಗಳು,ಮೂರು ವಷ೯ದ ಅವಧಿಯಲ್ಲಿ ತಜ್ ವೀದ್ ನಿಯಮ ಪಕಾರ ಖುರ್ ಆನ್ ಓದವಿಕೆ ಮುತ್ತು ನಿಗದಿತ ಸೂರಾಗಳ ಕಂಠಪಾಠ , ಆಕಷ೯ಕ ಸೇಪ್ ಮುತ್ತು ಸ್ಮಾರ್ಟ್ ಶಿಶು ಸ್ನೇಹಿ Ac ತರಗತಿ ಕೊಠಡಿಗಳು ಪೋಷಕರಿಗಾಗಿ ವಿಶೇಷ ಪೇರಂಟಿಂಗ್ ತರಬೇತಿ ನೀಡಲಾಗುತ್ತದೆ ಎಂದು ಉದ್ಘಾಟನೆ ಸಮಾರಂಭದಲ್ಲಿ ಹೇಳಿದರು

ಈ ಸಂದರ್ಭದಲ್ಲಿ what is Next ಕರಿಯರ್ ಗೈಡೆನ್ಸ್ ಕ್ಯಾಂಪ್ ನ್ನು ಮುಹಮ್ಮದ್ ನಾಸಿರ್ ಮಂಗಳೂರು ವಿವರವಾಗಿ ಮಾಹಿತಿ ನೀಡಿದರು ಹೌದು, ಈ ಕರಿಯರ್ ಗೈಡೆನ್ಸ್ ಎಂದರೇನು? ಎನ್ನುವ ಪ್ರಶ್ನೆಯೇ ಹಲವರಿಗೆ ಇದೆ. ಇದಕ್ಕೆ ಉತ್ತರವನ್ನು ಹಾಗೂ ಅದರ ಅನುಕೂಲಗಳನ್ನು ನಾನು ಹೇಳುತ್ತೇನೆ ಪ್ರತಿ ವಿದ್ಯಾರ್ಥಿಯ ಕರಿಯರ್ / ಪ್ರೊಫೇಶನಲ್ ಜರ್ನಿ ಯಾವುದಾಗಿರಬೇಕು, ಹೇಗಿರಬೇಕು ಎಂದು ಮೊದಲೇ ಯೋಜನೆ ರೂಪಿಸಿಕೊಳ್ಳುವುದು. ಅಷ್ಟು ಮಾತ್ರವಲ್ಲ ನಾನು ಎಷ್ಟನೇ ವಯಸ್ಸಿಗೆ ಉದ್ಯೋಗ ಆರಂಭಿಸಬೇಕು. ಆ ಕ್ಷೇತ್ರದ ಹುದ್ದೆಗಳಲ್ಲಿ ಎಷ್ಟು ವರ್ಷಕ್ಕೆ ಎಷ್ಟನೇ ಹಂತದಲ್ಲಿ ಇರಬೇಕು, ಅಥವಾ ಆಸಕ್ತ ಉದ್ಯೋಗಕ್ಕೆ ಹೇಗೆಲ್ಲಾ ಸಿದ್ಧತೆ ಮಾಡಿಕೊಂಡು, ಯಾವೆಲ್ಲ ಕೋರ್ಸ್ ಓದಿಕೊಂಡು ರೆಡಿ ಆಗಬೇಕು. ಯಾವ ಕೋರ್ಸ್ ಓದಿದರೆ ಯಾವ ಕೆಲಸಕ್ಕೆ ಅನುಕೂಲ, ಯಾವ ಹುದ್ದೆಗೆ ಏನು ಓದಬೇಕು ಇದೆಲ್ಲವನ್ನು ತಿಳಿಸುವುದೇ ಕರಿಯರ್ ಗೈಡೆನ್ಸ್ ಅಥವಾ ಕರಿಯರ್ ಕೌನ್ಸಿಲಿಂಗ್.ಪ್ರೇರಣೆ, ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನದಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿತು. ಎಷ್ಟು ಮಾಹಿತಿಯುಕ್ತ ಮತ್ತು ಪ್ರಬುದ್ಧವಾಗಿತ್ತು ಎಂದರೆ ವಿದ್ಯಾರ್ಥಿಗಳು ತಮ್ಮ ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ವೃತ್ತಿ ಆಯ್ಕೆಗಳನ್ನು ಗುರುತಿಸಲು ಮತ್ತು ಕಾರ್ಯಕ್ರಮದ ಮುಖ್ಯ ಗುರಿಯಾಗಿದ್ದ ನಿಖರವಾದ ಸ್ವಯಂ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳಲು, ವಿಶ್ಲೇಷಿಸಲು, ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸಲು ಅಗತ್ಯವಾದ ಜ್ಞಾನ, ಮಾಹಿತಿ ಮತ್ತು ಕೌಶಲ್ಯಗಳನ್ನು ಪಡೆಯಲು ಸಾಧ್ಯವಾಯಿತು ಎಂದರು.

ಮುಹಮ್ಮದ್ ನಾಸಿರ್ ಮಂಗಳೂರು ,ಫಾರೂಕ್ ಅಹ್ಮದ್ ನೂರಾನಿ ,ಹಾಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಪತ್ರಕರ್ತರ ಸಂಘದ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಪಡೆದ ಮುದಗಲ್ಲಿನ ವಿಜಯವಾಣಿ ವರದಿಗಾರ ಶಿವರಾಜ್ ಸುಂಕದ್ ಅವರಿಗೆ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯಮುದಗಲ್ಲ ನ ಕಾರ್ಯದರ್ಶಿಯಾದ ಶ್ರೀ ರಜ್ಜಬ್ ಅಲಿ ಟಿಂಗ್ರಿ ಹಾಗೂ ಸದಸ್ಯರು ಹಾಗೂ ಮುಹಮ್ಮದ್ ನಾಸಿರ್ ಮಂಗಳೂರು ,ಫಾರೂಕ್ ಅಹ್ಮದ್ ನೂರಾನಿ , ಮಹಮ್ಮದ್ ಶಮೀರ್ ನೂರಾನಿ ,ಮುಸ್ಲಿಂ ಸಮುದಾಯದ ಧಮ೯ ಗುರು ಗಳು ಗಣ್ಯರು ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ
