You are currently viewing LOCAL BREAKING : ಗಂಗಾವತಿ ನಗರಸಭೆ ಪೌರಾಯುಕ್ತರ ಮೊಬೈಲ್ ಹ್ಯಾಕ್: ಹಣಕ್ಕಾಗಿ ಕಿಡಿಗೇಡಿಗಳಿಂದ ಬೇಡಿಕೆ!

LOCAL BREAKING : ಗಂಗಾವತಿ ನಗರಸಭೆ ಪೌರಾಯುಕ್ತರ ಮೊಬೈಲ್ ಹ್ಯಾಕ್: ಹಣಕ್ಕಾಗಿ ಕಿಡಿಗೇಡಿಗಳಿಂದ ಬೇಡಿಕೆ!

LOCAL BREAKING : ಗಂಗಾವತಿ ನಗರಸಭೆ ಪೌರಾಯುಕ್ತರ ಮೊಬೈಲ್ ಹ್ಯಾಕ್: ಹಣಕ್ಕಾಗಿ ಕಿಡಿಗೇಡಿಗಳಿಂದ ಬೇಡಿಕೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಗಂಗಾವತಿ, ಮೇ.07: ಸೈಬರ್ ಅಪರಾಧಗಳ ಜಾಲ ಈಗ ಉನ್ನತ ಅಧಿಕಾರಿಗಳಿಗೂ ಬಲೆ ಬೀಸುತ್ತಿದ್ದು, ಗಂಗಾವತಿ ನಗರಸಭೆ ಪೌರಾಯುಕ್ತರ ಮೊಬೈಲ್ ಫೋನ್ ಹ್ಯಾಕ್ ಮಾಡುವ ಮೂಲಕ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ನಗರಸಭೆಯ ಕಮೀಷನ‌ರ್ ಅರ್. ವಿರೂಪಾಕ್ಷ ಮೂರ್ತಿ ಅವರ ಮೊಬೈಲ್‌ಹ್ಯಾಕ್ ಮಾಡಿರುವ ಸೈಬರ್ ವಂಚಕರು, ಕಮೀಷನರ್ ಮೊಬೈಲ್ ನಲ್ಲಿರುವ ಸ್ನೇಹಿತರು, ಆಪ್ತರಿಗೆ ಅಂತರಾಷ್ಟ್ರೀಯ ಸಂಖ್ಯೆಯ ಮೊಬೈಲ್ ಸಂಖ್ಯೆಯ ಮೂಲಕ ಮೆಸೇಜ್ ಕಳಿಸುತ್ತಿದ್ದಾರೆ.

ಇದು ಗಮನಕ್ಕೆ ಬರುತ್ತಿದ್ದಂತೆಯೆ ಎಚ್ಚೆತ್ತ ಕಮೀಷನರ್, ತಮ್ಮ ಮೊಬೈಲ್ ಸ್ಟೇಟಸ್ ಮೂಲಕ ‘ಇಂತಹ ನಂಬರ್ ಮೂಲಕ ಏನಾದರೂ ಮೆಸೇಜ್, ಹಣಕ್ಕೆ ಬೇಡಿಕೆ, ಸಂದೇಶ ಬಂದರೆ ಕಡೆಗಣಿಸಿ, ನೇರ ನನ್ನ ರೆಗ್ಯೂಲರ್ ನಂಬರ್ ಗೆ ಸಂಪರ್ಕಿಸಿ’ ಎಂದು ಮನವಿ ಮಾಡಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!