You are currently viewing ಮುದಗಲ್ಲ:- ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ಭಾಗಿ…

ಮುದಗಲ್ಲ:- ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ಭಾಗಿ…

ಮುದಗಲ್ಲ ವರದಿ…

ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಡಿಸಿಎಂ ಡಿಕೆಶಿ ಸೇರಿ ‘ಕೈ’ ನಾಯಕರ ಭಾಗಿ…

ಮುದಗಲ್ಲ :- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುದಗಲ್ ಪಟ್ಟಣಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅವರು ಲಿಂಗಸೂಗೂರು ಮಾಜಿ ಶಾಸಕರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಚಿವರು ಹಾಗೂ ಶಾಸಕರ ದಂಡೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ರಾಯಚೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಇಂದು ಡಿಕೆ ಶಿವಕುಮಾರ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಲಿದ್ದಾರೆ.
ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿರುವ ಡಿ.ಕೆ. ಶಿವಕುಮಾರ್ ಅವರು, ಇಂದು ಬೆಳಿಗ್ಗೆ ಸರಿಯಾಗಿ 1.:30 ಗಂಟೆಗೆ ಮುದಗಲ್ ಪಟ್ಟಣಕ್ಕೆ ಬಂದಿಳಿಯಲಿದ್ದಾರೆ.
ಲಿಂಗಸೂಗೂರು ಕ್ಷೇತ್ರದ ಮಾಜಿ ಶಾಸಕರ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ. ಈ ಶುಭ ಸಮಾರಂಭದಲ್ಲಿ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಲು ಡಿಸಿಎಂ ಆಗಮಿಸುತ್ತಿದ್ದಾರೆ.
ಸಚಿವ-ಶಾಸಕರ ದಂಡು.‌
ಡಿಕೆ ಶಿವಕುಮಾರ್ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಸಾಥ್ ನೀಡುತ್ತಿರುವುದು ವಿಶೇಷ. ಇನ್ನು

ಯತಿಂದ್ರ ಸಿದ್ದರಾಮಯ್ಯ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು , ಹಾಗೂ  ಜಿ. ಕುಮಾರ್ ನಾಯಕ್, ಸೇರಿದಂತೆ ಹತ್ತಾರು ಶಾಸಕರು ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಅದ್ದೂರಿ ಮದುವೆಯಲ್ಲಿ ಸ್ಥಳೀಯ ರಾಜಕಾರಣಿಗಳು, ಮುಖಂಡರು ಮತ್ತು ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.

 ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!