LOCAL NEWS : ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಹೆಸರು ಬೀಜ ವಿತರಣೆಗೆ ದಸ್ತಾನು : ರೈತ ಮುಖಂಡರ ಆರೋಪ!

PV ನ್ಯೂಸ್ ಡಿಜಿಟಲ್ :
ಕುಕನೂರು, ಮೇ 21 : ಮುಂಗಾರು ಹಂಗಾಮು ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಇಲ್ಲಿನ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ (RSK) ರೈತರಿಗೆ ವಿತರಿಸಲು ಕಳಪೆ ಗುಣಮಟ್ಟದ ಹೆಸರು ಬೀಜಗಳನ್ನು ದಾಸ್ತಾನು ಮಾಡಿರುವುದನ್ನು ಖಂಡಿಸಿ ಸ್ಥಳೀಯ ರೈತ ಮುಖಂಡ ದೇವಪ್ಪ ಸೋಬಾನಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಈ ಬಗ್ಗೆ ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಮುಂಗಾರು ಗಳ ಹೆಸರು ಮತ್ತು ತೊಗರೆಯನ್ನ ವಿತರಣೆ ಮಾಡುವುದಕ್ಕಾಗಿ ಸಂಗ್ರಹಣೆ ಮಾಡಿದ್ದ 2,400 ಕೆಜಿ ಹೆಸರು ಬೀಜಗಳು ಕಳಪೆ ಗುಣಮಟ್ಟದಾಗಿದೆ ಎಂದು ಕುಕನೂರು ತಾಲೂಕಿನ ರೈತ ಮುಖಂಡರು ಖಂಡಿಸಿ ಪ್ರತಿರೋಧ ವ್ಯಕ್ತಪಡಿಸಿದರು.

ಕೀಟಬಾಧೆ, ಧೂಳು ಮಿಶ್ರಿತ ಬೀಜಗಳು!
ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ನೂರಾರು ಚೀಲ ಹೆಸರು ಬೀಜಗಳು ಪೂರೈಕೆಯಾಗಿವೆ. ಆದರೆ, ವಿತರಣೆಗೆ ಮುನ್ನ ಬೀಜಗಳ ಗುಣಮಟ್ಟವನ್ನು ಪರಿಶೀಲಿಸಿದ ರೈತರಿಗೆ ತೀವ್ರ ನಿರಾಶೆಯಾಗಿದೆ ಎಂದು ಹೇಳಬಹುದು.
”ಈ ಬೀಜಗಳನ್ನು ಬಿತ್ತಿದರೆ ಮೊಳಕೆಯೊಡೆಯುವ ಗ್ಯಾರಂಟಿ ಇಲ್ಲ. ಒಂದು ವೇಳೆ ಮೊಳಕೆ ಬಂದರೂ ರೋಗಬಾಧೆ ಗ್ಯಾರಂಟಿ. ಕಷ್ಟಪಟ್ಟು ಭೂಮಿ ಹದಗೊಳಿಸಿದ ನಮಗೆ ಅಧಿಕಾರಿಗಳು ಇಂತಹ ಕಳಪೆ ಬೀಜ ನೀಡಿ ಕೈತೊಳೆದುಕೊಳ್ಳಲು ನೋಡುತ್ತಿದ್ದಾರೆ.”
— ಶರಣಪ್ಪ ಚಂಡೂರ, ಸ್ಥಳೀಯ ಪ್ರಗತಿಪರ ರೈತ.
“ಬೀಜಗಳ ಗುಣಮಟ್ಟದ ಕುರಿತು ರೈತರು ಆಕ್ಷೇಪ ಎತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು, ಬೀಜಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ರೈತರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ, ಶೀಘ್ರದಲ್ಲೇ ಪರ್ಯಾಯ ಗುಣಮಟ್ಟದ ಬೀಜಗಳನ್ನು ವ್ಯವಸ್ಥೆ ಮಾಡಲಾಗುವುದು”
:- ಪ್ರಮೋದ್ ಕುಮಾರ್ ತುಂಬಳ್, ಸಹಾಯಕ ನಿರ್ದೇಶಕ,
ಕೃಷಿ ಇಲಾಖೆ ಯಲಬುರ್ಗಾ.
