LOCAL NEWS : ”ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಂಘಟನೆ ಶ್ರಮಿಸಲಿ: ಸಂಗಮೇಶ್ ಗುತ್ತಿ ಆಶಯ”
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಜೂನ್ 15: ‘ ಸರ್ಕಾರದ ಸೌಲಭ್ಯ ಪಡೆಯಲು ಸಂಘಟನೆ ಅವಶ್ಯವಾಗಿದ್ದು, ಬಣಜಿಗ ಸಮಾಜ ಬಾಂಧವರು ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ಗ್ರಾಮ ಮಟ್ಟದಿಂದ ಸಮಾಜದ ಸಂಘಟನೆಗೆ ಒತ್ತು ನೀಡಬೇಕು’ ಎಂದು ಸಮಾಜದ ಯುವ ಮುಖಂಡ ಸಂಗಮೇಶ್ ಗುತ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಮಾಜದ ಸಭೆಯಲ್ಲಿ ನೂತನ ನಗರ ಘಟಕಡದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು.
‘ಬಣಜಿಗ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆ ಸಂಘಟನೆ ಶ್ರಮಿಸಬೇಕು. ಯುವಪೀಳಿಗೆಯಲ್ಲಿ ಸಂಘಟನಾತ್ಮಕ ಶಕ್ತಿ ವೃದ್ಧಿಸುವುದಕ್ಕೆ ನೂತನ ಪದಾಧಿಕಾರಿಗಳು ಮುತುವರ್ಜಿವಹಿಸಬೇಕು’ ಎಂದು ಹೇಳಿದರು.ನೂತನ ಅಧ್ಯಕ್ಷ ರವಿ ನಾಲ್ವಾಡ ಮಾತನಾಡಿ, ‘ಸಮಾಜ ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತೇನೆ, ಹಿರಿಯರ ಮಾರ್ಗದರ್ಶನ, ಯುವಕರ ಸಲಹೆಗಳೊಂದಿಗೆ ಸಮಾಜದಲ್ಲಿ ಬಣಜಿಗ ಸಮುದಾಯದ ಗೌರವ ಹೆಚ್ಚಿಸಲು ಪ್ರಯತ್ನ ನಡೆಸುತ್ತೇನೆ’ ಎಂದರು.
ಪದಾಧಿಕಾರಿಗಳ ಆಯ್ಕೆ: ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರವಿ ನಾಲ್ವಾಡ (ಅಧ್ಯಕ್ಷ), ನಂದೀಶಪ್ಪ ಗುತ್ತಿ (ಗೌರವಾಧ್ಯಕ್ಷ), ರವಿ ಗದಗ್ (ಉಪಾಧ್ಯಕ್ಷ), ಮಾಂತೇಶ್ ಜೋಳದ (ಪ್ರಧಾನ ಕಾರ್ಯದರ್ಶಿ), ವೀರೇಶ್ ವಾರದ ( ಸಂಘಟನಾ ಕಾರ್ಯದರ್ಶಿ), ವೀರೇಶ್ ಯಕ್ಲಾಸ್ಪುರ್ (ಖಜಾಂಚಿ).