You are currently viewing PV ROUND NEWS : ‘ಸೌಜನ್ಯದ ಭೇಟಿಯನ್ನು ರಾಜಕೀಯವಾಗಿ ಬಿಂಬಿಸಬೇಡಿ’: ಸಮಾಜ ಸೇವಕ ಕಳಕಪ್ಪ ಕಂಬಳಿ ಸ್ಪಷ್ಟನೆ! 

PV ROUND NEWS : ‘ಸೌಜನ್ಯದ ಭೇಟಿಯನ್ನು ರಾಜಕೀಯವಾಗಿ ಬಿಂಬಿಸಬೇಡಿ’: ಸಮಾಜ ಸೇವಕ ಕಳಕಪ್ಪ ಕಂಬಳಿ ಸ್ಪಷ್ಟನೆ! 

PV ROUND NEWS : ‘ಸೌಜನ್ಯದ ಭೇಟಿಯನ್ನು ರಾಜಕೀಯವಾಗಿ ಬಿಂಬಿಸಬೇಡಿ’: ಸಮಾಜ ಸೇವಕ ಕಳಕಪ್ಪ ಕಂಬಳಿ ಸ್ಪಷ್ಟನೆ! 

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು, ಜೂನ್ 16 : ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಈರಪ್ಪ ಕುಡಗುಂಟಿ ಹಾಗೂ ಸಮಾಜ ಸೇವಕ, ಸ್ವತಂತ್ರ ಅಭ್ಯರ್ಥಿಯಂತೆ ಗುರುತಿಸಿಕೊಂಡಿರುವ ಕಳಕಪ್ಪ ಕಂಬಳಿಯವರು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರನ್ನ ಭೇಟಿಯಾದ ವಿಷಯಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಲ್ಚಲ್ ಎಬ್ಬಿಸಿತ್ತು, ಇದಕ್ಕೆ ಸ್ಪಷ್ಟನೆಂತೆ ಇಂದು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ಸಮಾಜಸೇವಕ ಕಳಕಪ್ಪ ಕಂಬಳಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

  “ಇತ್ತೀಚೆಗೆ ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಅದೊಂದು ಕೇವಲ ಸೌಜನ್ಯದ ಮತ್ತು ಹಿತೈಷಿಗಳ ಭೇಟಿಯಾಗಿದ್ದು, ನಾನು ಯಾವುದೇ ಪಕ್ಷ ಸೇರುತ್ತಿಲ್ಲ ಎಂದರು.

ಇಬ್ಬರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪತ್ರಿಕಾ ಪ್ರಕಟಣೆಯ ಪತ್ರ

 ​”ಬಿ.ಕೆ. ಹರಿಪ್ರಸಾದ್ ಅವರು ಹಿಂದುಳಿದ ವರ್ಗಗಳ ಹಿರಿಯ ನಾಯಕರಾಗಿದ್ದು, ವೈಯಕ್ತಿಕವಾಗಿ ನನಗೆ ದೀರ್ಘಕಾಲದ ಪರಿಚಯಸ್ಥರು. ನಮ್ಮ ಹಿತೈಷಿಯೊಬ್ಬರ ಸಮ್ಮುಖದಲ್ಲಿ ಅವರನ್ನು ಭೇಟಿಯಾಗಿ ಕೇವಲ ಸೌಜನ್ಯದ ಮಾತುಕತೆ ನಡೆಸಿ, ಶುಭ ಹಾರೈಸಿದ್ದೇನೆ. ಈ ಭೇಟಿಯಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆಗಳು ನಡೆದಿಲ್ಲ. ಆದರೆ, ಕೆಲವರು ಈ ಭೇಟಿಯನ್ನು ತಮಗೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನಿಸಿ, ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಸಾರ್ವಜನಿಕರು ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.

​”ಕ್ಷೇತ್ರದಲ್ಲಿರುವ ನಮ್ಮ ಆತ್ಮೀಯ ಸ್ನೇಹಿತರು, ಹಿತೈಷಿಗಳು ನಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ‘ಕಾಂಗ್ರೆಸ್ ಪಕ್ಷಕ್ಕೆ ಬನ್ನಿ, ಒಳ್ಳೆಯದಾಗುತ್ತದೆ’ ಎಂದು ಪ್ರೀತಿಯಿಂದ ಆಹ್ವಾನಿಸುತ್ತಿರುವುದು ನಿಜ. ಅವರ ಭಾವನೆಗಳಿಗೆ ನಾನು ಗೌರವ ನೀಡುತ್ತೇನೆ. ಆದರೆ, ಸದ್ಯಕ್ಕೆ ನಾನು ಯಾವುದೇ ಪಕ್ಷವನ್ನು ಸೇರುವ ಅಥವಾ ಬದಲಾಯಿಸುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ನೇರವಾಗಿ ಉತ್ತರಿಸಿದರು.

 ಕ್ಷೇತ್ರದ ಜನರ ಸೇವೆ ಮೊದಲ ಆದ್ಯತೆ! 

​”ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷಗಳ ಸುದೀರ್ಘ ಸಮಯವಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಪ್ರಸ್ತುತ ತಾಲ್ಲೂಕಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ಕ್ಷೇತ್ರದಲ್ಲಿ ಅಪಘಾತಗಳು, ಆರೋಗ್ಯ ಸಮಸ್ಯೆಗಳು ಅಥವಾ ಇನ್ಯಾವುದೇ ಕಷ್ಟ ಬಂದಾಗ ನೊಂದ ಕಾರ್ಯಕರ್ತರ ಮತ್ತು ಸಾರ್ವಜನಿಕರ ಪರವಾಗಿ ನಿಂತು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

​”ನಾನು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ನಿರ್ಧಾರದಿಂದ ಹೊರಗುಳಿದಿದ್ದೆ ಎಂಬುದು ನಿಜ. ಆದರೆ ನಾನು ಯಾವುದೇ ಪಕ್ಷದಲ್ಲಿದ್ದರೂ, ಇಲ್ಲದಿದ್ದರೂ ತಾಲ್ಲೂಕಿನ ಜನರ ಸೇವೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಜನರ ಮತ್ತು ಕಾರ್ಯಕರ್ತರ ಕಷ್ಟ-ಸುಖಗಳಿಗೆ ಧ್ವನಿಯಾಗುವುದು, ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವುದು ನಮ್ಮ ಸದ್ಯದ ಗುರಿಯಾಗಿದೆ. ಮುಂದಿನ ರಾಜಕೀಯ ತೀರ್ಮಾನಗಳನ್ನು ಕಾಲ ಬಂದಾಗ ಕಾರ್ಯಕರ್ತರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುವುದು” ಎಂದು ಅವರು ತಿಳಿಸಿದರು.

ರಾಜಕೀಯ ವರದಿ : ಚಂದ್ರು ಆರ್ ಭಾನಾಪುರ್, ಸಂಪಾದಕರು. 

Prajavikshane

Chandru R Bhanapaur

Leave a Reply

error: Content is protected !!