ಮೊರಹಂ ಹಿನ್ನೆಲೆ ಮುದಗಲ್ಲ ಪಟ್ಟಣದಲ್ಲಿ ಪೋಲಿಸ್ ಪಥ ಸಂಚಲನ..

ಮುದಗಲ್ಲ ವರದಿ..

ಮೊರಹಂ ಹಿನ್ನೆಲೆ ಮುದಗಲ್ಲ ಪಟ್ಟಣದಲ್ಲಿ ಪೋಲಿಸ್ ಪಥ ಸಂಚಲನ..

ಮುದಗಲ್ಲ : ಮೊಹರಂ ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ.  ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಪೊಲೀಸ್ ಪಥ ಸಂಚಲನ ನಡೆಯಿತು.

ಇಲ್ಲಿನ ಪೊಲೀಸ್ ಠಾಣೆಯಿಂದ ಮುಖ್ಯ ರಸ್ತೆ ಹಾಗೂ ಕಿಲ್ಲಾ ಹಾಗೂ ಚೌಡಿಕಟ್ಟಿ ,ಸಂತೆ ಬಜಾರ ಮುಖ್ಯ ರಸ್ತೆಯಲ್ಲಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಅಧಿಕಾರಿಗಳು ಪಥ ಸಂಚಲನ ನಡೆಸಿದರು.

 ಈ ಸಂದರ್ಭದಲ್ಲಿ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ವೃತ್ತ ಸಿಪಿಐ ರಾಮಣ್ಣ ಜಲಿಗೇರಿ, ಪಿಎಸ್ಐ ವೆಂಕಟೇಶ್ ಮಾಡಿಗೇರಿ, ಮಸ್ಕಿ ಪಿಎಸ್ಐ ರಂಗಯ್ಯ, ತನಿಖೆ ವಿಭಾಗ ಪಿಎಸ್ಐ ರತ್ನಮ್ಮ, ಎಎಸ್ಐ ವೆಂಕಟಪ್ಪ ನಾಯಕ್, ಎ ಎಸ್ ಐ ಚನ್ನಬಸಪ್ಪ, ಹೆಚ್ ಸಿ ಅಮರೇಶ ಕೆ. ಪಿಸಿ ಅನಿಲ್, ಲಿಂಗಸಗೂರು ಉಪವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!