ಮುದಗಲ್ಲ ವರದಿ..
ಬಿಜೆಪಿ ಮುದಗಲ್ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಹುಲ್ಲೇಶ ಸಾಹುಕಾರ ರಾಜೀನಾಮೆ…
ಮುದಗಲ್ಲ :ಭಾರತೀಯ ಜನತಾ ಪಕ್ಷದ ಮುದಗಲ್ ಮಂಡಲ ಅಧ್ಯಕ್ಷರಾಗಿದ್ದ ಜನತೆಗೆಗೂ ಹುಲ್ಲೇಶ ಸಾಹುಕಾರ್ ಅವರು ತಮ್ಮ ಹುದ್ದೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್
ಲೆಕ್ಕಿಹಾಳ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಕೌಟುಂಬಿಕ ಅಡಚಣೆ ಗಳಿಂದಾಗಿ ಪಕದ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಯಲ್ಲಿ ಮುದಗಲ್ ಮಂಡಲ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇಲ್ಲಿಯವರೆಗೆ ಪಕ್ಷ ವಹಿಸಿದ್ದ ಎಲ್ಲಾ ಜವಾಬ್ದಾರಿಗಳನ್ನು ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಪಕ್ಷವು ನನಗೆ ನೀಡಿದ ವಿಶ್ವಾಸ ಹಾಗೂ ಜವಾಬ್ದಾರಿಗಳಿಗೆ ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರು ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಪಕ್ಷದ ಬೆಳವಣಿಗೆಗಾಗಿ ಮುಂದೆಯೂ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಅವರು, ತಮ್ಮ ರಾಜೀನಾಮೆಯನ್ನು ಅಂಗೀಕರಿಸು ವಂತೆ ಪಕ್ಷದ ನಾಯಕರನ್ನು ಕೋರಿದ್ದಾರೆ.
ವರದಿ:- ಮಂಜುನಾಥ ಕುಂಬಾರ
