ಮುದಗಲ್ಲ :-ಕಾಗದದ ಚಿಂದಿಗಳಲ್ಲಿ ಭವಿಷ್ಯ ಹುಡುಕುತ್ತಿರುವ ಮಕ್ಕಳು : ಡಕ್ಕಲಿಗ ಸಮುದಾಯದ ಕಣ್ಣೀರಿನ ಕಥೆ …

ಮುದಗಲ್ಲ ವರದಿ..

ಕಾಗದದ ಚಿಂದಿಗಳಲ್ಲಿ ಭವಿಷ್ಯ ಹುಡುಕುತ್ತಿರುವ ಮಕ್ಕಳು: ಡಕ್ಕಲಿಗ ಸಮುದಾಯದ ಕಣ್ಣೀರಿನ ಕಥೆ …

ಮುದಗಲ್ಲ ಡಕ್ಕಲಿಗ ಸಮುದಾಯಕ್ಕೆ ಸಿಗದ ಮೂಲಭೂತ ಸೌಕರ್ಯ..

ಮುದಗಲ್ಲ : ಆಧುನಿಕ ಜಗತ್ತು ಡಿಜಿಟಲ್ ಕ್ರಾಂತಿಯತ್ತ ಮುನ್ನಡೆಯುತ್ತಿದ್ದರೆ,ಇತ್ತ ಲಿಂಗಸೂರ ತಾಲೂಕಿನ ಮುದಗಲ್ಲ ಪಟ್ಟಣದಲ್ಲಿ ವಾಸಿಸುವ ತಳ ಸಮುದಾಯ ವಾದ ‘ಡಕ್ಕಲಿಗ ಮಾತ್ರ ಇಂದಿಗೂ ಸ್ವಂತ ಪರದಾಡುವ ಪರಿಸ್ಥಿತಿ ಸರ್ಕಾರದ ಜನರಿಗೆ ಸ್ವಾತಂತ್ರ್ಯ ಬಂದು ದಶಕಗಳೆಸರಕಾರ ಯಾವುದೇ ಕಳೆದರೂ ಕಲ್ಯಾಣ ಯೋಜನೆಗಳು ಇವರ ಗುಡಿಸಲುಗಳ ಹೊಸ್ತಿಲು ತುಳಿದಿಲ್ಲ.

ಹೌದು ಮುದಗಲ್ಲ ಪಟ್ಟಣದ ಹೊರವಲಯ ಹಾಗೂ
ಗ್ರಾಮೀಣ ಭಾಗಗಳಲ್ಲಿ ಖಾಲಿ ಜಾಗ ಕಂಡಲ್ಲಿ ಟೆಂಟ್‌ಳನ್ನು ಹಾಕಿಕೊಂಡು ತಾತ್ಕಾಲಿಕವಾಗಿ ಡಕ್ಕಲಿಗ ಸಮುದಾಯ ವಾಸಿಸುತ್ತಿದ್ದಾರೆ ಮಳೆ ಬಂದರೆ ಸೋರುವ,ಗಾಳಿ ಬೀಸಿದರೆ ಹಾರಿಹೋಗುವ ಪ್ಲಾಸ್ಟಿಕ್‌ ಶೆಡ್‌ಗಳೇ ಇವರ ಆಸರೆ. ಇವರಿಗೆ ಇಂದಿಗೂ ಹಕ್ಕು ಪತ್ರವಾಗಲಿ,ವಸತಿ ಯೋಜನೆಗಳ ಅಡಿ ಯಲ್ಲಾಗಲಿ ಪಕ್ಕಾ ಮನೆ ಗಳು ಮಂಜೂರಾಗಿಲ್ಲ.

ಇನ್ನು ಮಹಿಳೆಯರು ಮತ್ತು ಹೆಣ್ಣು ಸಮುದಾಯದ ಮಕ್ಕಳು ಶೌಚಾಲಯ ವ್ಯವಸ್ಥೆ ಇಲ್ಲದೆ ಬಯಲು ಶೌಚಾಲಯ
ಅವಲಂಬಿಸಿದ್ದು, ತೀವ್ರ ಮುಜುಗರ ಹಾಗೂ ರೋಗಭೀತಿ ಯನ್ನು ಎದುರಿಸುತ್ತಿದ್ದಾರೆ ಶಿಕ್ಷಣದಿಂದ ವಂಚಿತ ವೋಗಿತ್ತಿರುವ ಮಕ್ಕಳು ಸ್ಥಿರವಾದ ವಾಸಸ್ಥಳವಿಲ್ಲದೆ ಊರುರೂ ಅಲೆಯುದರಿಂದ ಇ ಸಮುದಾಯ ಮಕ್ಕಳು ಶಾಲೆಯ ಮುಖವನ್ನು ನೋಡೆಯಿಲ್ಲ

ಪೋಷಕರು ದಿನದ ಕೂಲಿ ಹಾಗೂ ಸಾಂಪ್ರದಾಯಿಕ
ಕಸುಬು ನಂಬಿ ಬದುಕು ತ್ತಿರುವುದರಿಂದ, ಮಕ್ಕಳು ಕೂಡ
ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ, ಚಿಂದಿ ಆಯುವುದು
ಅಥವಾ ಅಲೆಮಾರಿ ಬದುಕಿಗೆ ತಳ್ಳಲ್ಪಡುತ್ತಿದ್ದಾರೆ.ಸಮುದಾಯ
ದಲ್ಲಿ ಸಾಕ್ಷರತೆಯ ಪ್ರಮಾಣ ಶೂನ್ಯಕ್ಕೆ ಇಳಿಯುವ
ಆತಂಕವಿದೆ. ಜಿಲ್ಲೆಯಲ್ಲಿಯೇ ಅತ್ಯಂತ ಕೊನೆಯ ನೋವಿಗೆ ಹಾಗೂ ತಾಲೂಕ ಡಕ್ಕಲಿಗ ಸಮುದಾಯದ ಸ್ಥಳೀಯ ಜನಪ್ರತಿನಿಧಿಗಳು ಆಡಳಿತ ಮತ್ತು ಜಿಲ್ಲಾಡಳಿತ ತಕ್ಷಣ
ಕೇವಲ ಚುನಾವಣೆ ಸಮಯ ದಲ್ಲಿ ಬಿಟ್ಟು, ಇವರ ಬದುಕಿಗೆ ಶಾಶ್ವತ ನೀಡುವ ಮೂಲಕ ಇವರನ್ನು ಸಮಾಜದ ಮುಖ್ಯ ವಾಹಿನಿ ಗೆ ತರಬೇಕಾಗಿದೆ.

5೦ ವರ್ಷದಿಂದ ನಮಗೆ ಜಾಗ ಇಲ್ಲ, ಮನೆ ಇಲ್ಲ, ನಮ್ಮ ಮಕ್ಕಳಿಗೆ
ಶಿಕ್ಷಣವಿಲ್ಲದೇ ಭಿಕ್ಷಾಟನೆ, ಚಿಂದಿ ಆಯುವುದನ್ನು ಮಾಡುತ್ತಿದ್ದು, ಇದನ್ನು ತಪ್ಪಿಸಬೇಕಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸುರೇಶ ಕಟ್ಟಿಮನಿ,ಡಕ್ಕರ ಸಮುದಾಯ ಜಿಲ್ಲಾಧ್ಯಾಕ್ಷ

ವಸತಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗೆ ಒಳಪಡುತ್ತೆ. ಆ ಸಮುದಾಯ ಕ್ಕೆ ದಾಖಲೆಗಳನ್ನು ನಮ್ಮ ಇಲಾಖೆ ಕಡೆಯಿಂದ ಕೆಲಸ ಮಾಡಲಾಗುತ್ತದೆ. ನಮ್ಮ ಕಛೇರಿ ಕಡೆಯಿಂದ ಡಕ್ಕಲಿದ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯವನ್ನು
ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

        ಸತ್ಯಮ್ಮ,
ಲಿಂಗಸುಗೂರು ತಹಶಿಲ್ದಾರರು..

 

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!