ಮುದಗಲ್ಲ :- ಅಭಿವೃದ್ಧಿ ಕಾಣದ ಪಟ್ಟಣದ ಕೆರೆಗಳಿಗೆ ಬೇಕಿದೆ ಕಾಯಕಲ್ಪ…
ಮುದಗಲ್ಲ :- ಒಂದು ಕಾಲದಲ್ಲಿ ಗುಡ್ಡಗಳು, ಕೆರೆಗಳಿಂದ ಸುಂದರವಾಗಿ, ಸದಾ ಹಸಿರಾಗಿ ಕಂಗೊಳಿಸುತ್ತಿದ್ದ ಐತಿಹಾಸಿಕ ಮುದಗಲ್ಲ ಪಟ್ಟಣ, ಇದೀಗ ಆಧುನಿಕತೆಯ ಅಬ್ಬರದಲ್ಲಿ ಬರಡಾಗುತ್ತ ಹೊರಟಿದೆ. ಲೇಔಟ್‌ಗಳಿಗೆ ಗುಡ್ಡಗಳು ಕರಗಿದರೆ, ಅಭಿವೃದ್ಧಿ ಕಾಣದ ಕೆರೆಗಳು ಕೊಳಚೆ ಪ್ರದೇಶಗಳಾಗಿ ಬದಲಾಗಿವೆ.

ನೀರಿನ ಹಾಹಾಕಾರ ಶುರುವಾಗುವ ಮೊದಲೇ ಎಲ್ಲೆಡೆ ಕೆರೆ, ಬಾವಿ, ಮಳೆ ನೀರು ಹಿಡಿದಿಡುವ ಪ್ರಯತ್ನ ನಡೆಯುತ್ತಿದೆ. ಪಟ್ಟಣದಲ್ಲಿ ಇರುವ ಕೆರೆಗಳಿಗೆ ಚರಂಡಿ ನೀರು ಹರಿದು ಗಬ್ಬೆದ್ದು ನಾರುತ್ತಿವೆ. ಇನ್ನೂ ಅನೇಕ ಕೆರೆಗಳು ಹೂಳು ತುಂಬಿಕೊಂಡು ಬಳಕೆಗೆ ಯೋಗ್ಯವಾಗಿಲ್ಲ. ಆದರೂ ಇಲಾಖೆಯ ಅಭಿವೃದ್ಧಿ ಕೆಲಸಗಳಾಗಲಿ, ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಲಿ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ನಳದಲ್ಲೇ ನೀರು ಬರುತ್ತದೆ’ ಎಂದು ನಿರ್ಲಕ್ಷ್ಯ ಮಾಡುವವರಿಗೆ ಕೆರೆಯ ಮೌಲ್ಯ ಅರ್ಥ ಆಗುತ್ತಿಲ್ಲ. ಕೊಳಕಿದೆ ಅದನ್ನು ಮುಚ್ಚಿಡೋಣ ಎನ್ನುವವರಿಗೆ ಕೆರೆಯ ಸಂಸ್ಕೃತಿಯ ಪರಿಚಯವೂ ಇಲ್ಲದಾಗಿದೆ. ಈಗಾಗಲೇ ಅಭಿವೃದ್ಧಿ ಕಾಣದೇ ಪಟ್ಟಣದ ಹಳೆಯ ಪೇಟೆ ಕೆರೆ ಹಾಗೂ ಸೋಮುವಾರ ಪೇಟೆ ಕೆರೆ ಹಾಳಾಗಿದೆ ಅವುಗಳ ಸ್ಥಿತಿ ಚಿಂತಾಜನಕವಾಗಿದೆ. ಕೆರೆಯ ತುಂಬ ಪಾಚಿ, ಗಿಡ–ಕಂಟಿಗಳು ಬೆಳೆದಿದ್ದು, ಪಾಳು ಬಿದ್ದಿವೆ. ವಿವಿಧ ವಾಡ೯ಗಳಲ್ಲಿನ ಕಸದ ರಾಶಿ, ಚರಂಡಿ ನೀರು ಇಲ್ಲಿಗೆ ಸೇರುತ್ತಿದೆ. ಇದಲ್ಲದೇ ಬಹುತೇಕ ಜನ ಕೆರೆಯ ಸುತ್ತಲೂ ಮಲ–ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಸುತ್ತಲಿನ ವಾತಾವರಣ ಕಲುಷಿತ ಗೊಂಡಿದ್ದು, ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಸಂಬಂಧಿಸಿದವರು ಕೆರೆಗಳ ಅಭಿವೃದ್ಧಿಗೆ ಕ್ರಮ ವಹಿಸಿಲ್ಲ
ಕೆರೆ ತುಂಬಿರುವ ಪ್ಲಾಸ್ಟಿಕ್ ಮೂಕ ಪ್ರಾಣಿಗಳು ಕುಡಿಯಲು ಹಾಗೂ ಬಳಸಲು ಯೋಗ್ಯವಿಲ್ಲದಂತಾಗಿವೆ.

ಕೆಲವು ಎರಡು ಕೆರೆಗಳ ಹಾಗೂ ಕೋಟೆಯ ಖಂದುಕಾ ಸೇರಿ ಪಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮದ್ಯಪಾನದ ಡಬ್ಬಿ ಬಾಟಲಗಳು ಎಸೆದಿದ್ದಾರೆ.

ಇಷ್ಟೆಲ್ಲ ಅವಕಾಶಗಳಿದ್ದಾಗಲೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕೆರೆಗಳ ಪುನಃಶ್ಚೇತನಕ್ಕೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕೆರೆಗಳಿಗೆ ಚರಂಡಿ ನೀರು ಸೇರುತ್ತಿದ್ದು, ದುರ್ವಾಸನೆ ಬೀರುತ್ತಿವೆ.

ಈ ಎಲ್ಲ ಮಾಹಿತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಂಬಂದ ಪಟ್ಟ ಇಲಾಖೆ ಗೆ ತಿಳಿದಿದ್ದರೂ, ತಮಗೇನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅವರಿಗೆ ಪಟ್ಟಣದಲ್ಲಿ ಎಷ್ಟು ಕೆರೆಗಳಿವೆ? ಎಂಬ ಮಾಹಿತಿಯೂ ಇಲ್ಲದಿರುವುದು ಕಳವಳ ಮೂಡಿಸಿದೆ’ ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಘಟಕದ ಅಧ್ಯಕ್ಷರಾದ ಬಸವರಾಜ ಬಂಕದಮನೆ
ವರದಿ:- ಮಂಜುನಾಥ ಕುಂಬಾರ..

