ಮುದಗಲ್ಲ ವರದಿ..
ನವರಾತ್ರಿ ಉತ್ಸವ ಪಲ್ಲಕ್ಕಿ ಮಹೋತ್ಸವ…

ಮುದಗಲ್: ಪಟ್ಟಣದ ಸಾಲಿಮಠದಲ್ಲಿ ಕಳೆದ 9 ದಿನಗಳಿಂದಲೂ ನವರಾತ್ರಿ ಉತ್ಸವ ಜರುಗಿದ್ದು ನವರಾತ್ರಿ ಕೊನೆ ದಿನ ಬುಧವಾರ ದಂದು ಪಲ್ಲಕ್ಕಿ ಹಾಗೂ ಮೂತಿ೯ ಮೆರವಣಿಗೆ ಜರುಗಿತು.

ಸ್ಥಳೀಯ ಸಾಲಿಮಠದಿಂದ ಪಲ್ಲಕ್ಕಿ ಮೆರವಣಿಗೆಯು ಆರಂಭಗೊಂಡು ಪಟ್ಟಣದ ಕುಂಬಾರ ಓಣಿ ಮುಖ್ಯ ಬಜಾರ್ ರಸ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆ ಸಾನ್ನಿಧ್ಯವನ್ನು ಸಾಲಿಮಠದ ಸಿದ್ದಯ್ಯಸ್ವಾಮಿ ಹಾಗೂ ಮಗನಾದ ಅಭಿಷೇಕ ಸಾಲಿಮಠ ವಹಿಸಿದ್ದರು. ಈರಣ್ಣ ಹಡಪದ ಹಾಗೂ ಸಂಗಪ್ಪ ಕೊಡೆಕಲ್ ಪಲ್ಲಕ್ಕಿ ಮೆರವಣಿಗೆ ನೇತೃತ್ವ ವಹಿಸಿದ್ದರು.

ಮೆರವಣಿಗೆಯಲ್ಲಿ ವಿಶೇಷ ಡೊಳ್ಳು ಕುಣಿತ, ಭಜನಾ ಸೇವೆ ಹಾಗೂ ಕಳಶಗಳೊಂದಿಗೆ ಭಾಗವಹಿಸಿದ್ದ ಮಹಿಳೆಯರಿಂದ ಪಲ್ಲಕ್ಕಿ ಮಹೋತ್ಸವಕ್ಕೆ ಮೆರಗು ನೀಡಿತು.

9 ದಿನಗಳಿಂದಲೂ ಸಾಲಿಮಠದಲ್ಲಿ ನಡೆದ ಶ್ರೀ ದೇವಿ ಪುರಾಣಹ ಮಹೋತ್ಸವವನ್ನು ಪಲ್ಲಕ್ಕಿ ಮೆರವಣಿಗೆ ನಂತರ ಸಂಪನ್ನಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮೆರವಣಿಗೆ ಯಲ್ಲಿ ಶಾಂಭವಿ ಸದ್ಭಕ್ತ ಮಂಡಳಿ ಹಾಗೂ ಮಿತ್ರ ಮಂಡಳಿ ಸದಸ್ಯರಿದ್ದರು ಉಪಸ್ಥಿತರಿದ್ದರು..

ವರದಿ : ಮಂಜುನಾಥ ಕುಂಬಾರ