ಕುಕನೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಾಗೂ ಕಾಂಗ್ರೆಸ್ ನ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಶಾಸಕರು ಚಾಲನೆ ನೀಡಿದರು.
ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ರವಿವಾರ ಶಕ್ತಿ ಯೋಜನೆಗೆ ಚಾಲನೆ ಮಹಿಳೆಯರಿಂದಲೇ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದರು.
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮಹಿಳೆಯರಿಗೆ ಟಿಕೆಟ್ ವಿತರಣೆ ಮಾಡಿ ಮಾತನಾಡಿದರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗೆ ಆದೇಶವನ್ನು ನೀಡಿದ್ದು, ಎಲ್ಲಾ ಯೋಜನೆಗಳನ್ನು ಶೀಘ್ರದಲ್ಲಿಯೇ ಜಾರಿ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಸಹಕಾರದಿಂದ ನೆಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಯಲಬುರ್ಗಾ ತಹಶೀಲ್ದಾರ್ ವಿಠ್ಠಲ ಚೌಗಲೆ, ಕುಕನೂರು ತಹಶೀಲ್ದಾರ್ ನೀಲ ಪ್ರಭಾ ಬಬಲದ,ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಾಶ ಬಾಗಲಿ,ಸಂಚಾರ ನಿಯಂತ್ರಕ ಪ್ರಕಾಶ ಬಂಡಿಹಾಳ,
ಕಾಸಿಂ ಸಾಬ ತಳಕಲ್, ಸಿದ್ದಯ್ಯ ಕಳ್ಳಿಮಠ, ಮಂಜನಾಥ ಕಡೆಮನಿ, ಸತ್ಯನಾರಾಯಣಪ್ಪ, ರೈಮಾನಸಾಬ ಮಾಕಪ್ಪನವರ, ರಾಮಣ್ಣ ಭಜಂತ್ರಿ, ಡಾ. ಮಲ್ಲಿಕಾರ್ಜುನ ಬಿನ್ನಾಳ ಶ್ರೀನಿವಾಸ ದೇಸಾಯಿ,ಹನಮೇಶ ಕಡೆಮನಿ, ಈರಪ್ಪ ಕುಡಗುಂಟಿ ಹಾಗೂ ಇತರರಿದ್ದರು.