LOCAL NEWS : ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

You are currently viewing LOCAL NEWS : ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಯಲಬುರ್ಗಾ-ಕುಕನೂರ : ಇಂದು ಕುಕನೂರ ಮತ್ತು ಯಲಬುರ್ಗಾ ತಾಲೂಕಿನ “ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ” ಮತ್ತು “ವಸತಿ ಯೋಜನೆಗಳ” ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯೂ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಕೊಪ್ಪಳ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಯಲಬುರ್ಗಾ ತಾಲೂಕ ಪಂಚಾಯತಿಯ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು.

ಇಂದು ನಡೆದ ಈ ಸಭೆಯಲ್ಲಿ “ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ” ಬಗ್ಗೆ ಚರ್ಚೆಯಾದ ಪ್ರಮುಖ ಅಂಶಗಳು ಇವೆ.

➡ ವಾರ್ಷಿಕ ಗುರಿಗನುಗುಣವಾಗಿ ಮಾನವ ದಿನಗಳ ಪ್ರಗತಿ.
➡ ಮಹಿಳಾ ಭಾಗವಹಿಸುವಿಕೆ.
➡ ಎಸ್.ಸಿ, ಎಸ್ ಟಿ ಭಾಗವಹಿಸುವಿಕೆ.
➡ಜಿಯೋ ಟ್ಯಾಗ್ ಮಾಡುವುದು.
➡ಕಾಮಗಾರಿ ಮುಕ್ತಾಯ ಮಾಡುವುದು.
➡ಸಮುದಾಯ ಕಾಮಗಾರಿ ಪ್ರಾರಂಭಿಸುವುದು.
➡ಗೋಮಾಳ ಅಭಿವೃದ್ಧಿ ಕಾಮಗಾರಿಗಳು.
➡ ಸಣ್ಣ ಮತ್ತು ಅತೀ ಸಣ್ಣ ಫಲಾನುಭವಿಗಳ ಗುರುತಿಸುವಿಕೆ.
➡ ಬೋರ್ ವೆಲ್ ರೀಚಾರ್ಜ್ ಪಿಟ್ ಕಾಮಗಾರಿಗಳನ್ನು ಪ್ರಾರಂಭಿಸುವುದು.
➡ ಜಾಬ್ ಕಾರ್ಡ ವೆರಿಫಿಕೇಷನ್.
➡ಎನ್ ಆರ್.ಎಲ್.ಎಮ್ ವರ್ಕ ಶೆಡ್ ನಿರ್ಮಾಣ ಮಾಡುವುದು.
➡2024-25 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆ.
➡ಪೈಲ್ ವೆರಿಫಿಕೇಷನ್, ವರದಿಗಳು.
➡FTO File ವೆರಿಫಿಕೇಷನ್.
➡NMMS attendance in Mobile app.
ಸೇರಿದಂತೆ ಶಾಲಾ ಅಭಿವೃದ್ಧಿ ಕಾಮಗಾರಿಗಳು, ವಿವಿಧ ವಿಷಯಗಳ ವಾರು ಪ್ರಗತಿ ಪರಿಶೀಲನೆ ಮಾಡಿದರು.

ವಸತಿ ಯೋಜನೆಯ ಅನುಷ್ಠಾನ ಕುರಿತು ವಾಸ್ತವ ಅಂಶವನ್ನು ಚರ್ಚೆ ನಡೆಸಿದರು.
➡ 8/11/2023 ಮತ್ತು 9/11/2023 ವಿಶೇಷ GPS ಅಭಿಯಾನ.
➡ಆವಾಸ್ ಪ್ಲಸ್ ಹೀಗೆ ಇನ್ನು ಹಲವಾರು ಅಭಿವೃದ್ಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ, ಯಲಬುರ್ಗಾ ಮತ್ತು ಕುಕನೂರ, ಸಂತೋಷ ಬಿರಾದರ್ ಪಾಟೀಲ್, ಸಹಾಯಕ ನಿರ್ದೇಶಕಗ್ರಾಮೀಣ ಉದ್ಯೋಗ, ಯಲಬುರ್ಗಾ ಮತ್ತು ಕುಕನೂರ,  ಸಹಾಯಕ ನಿರ್ದೇಶಕ ಪಂಚಾಯತ್ ರಾಜ್ ಯಲಬುರ್ಗಾ ಮತ್ತು ಕುಕನೂರ , ಅನುಷ್ಠಾನ ಇಲಾಖೆ ಅಧಿಕಾರಿಗಳು, ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಮ್.ಐ‌. ಎಸ್, ತಾಂತ್ರಿಕ, ಐ.ಇ.ಸಿ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರು, ಬಿ.ಎಫ್.ಟಿ, ಗ್ರಾಮ ಕಾಯಕ ಮಿತ್ರರು ವಿಷಯ ನಿರ್ವಾಹಕರು ಹಾಜರಿದ್ದರು.

Leave a Reply

error: Content is protected !!