ಇತ್ತೀಚಿಗೆ ದೇಶದಲ್ಲಿ ಹುಲಿ ಗಣತಿ ವರದಿ ಬಿಡುಗಡೆಯಾಗಿದ್ದು, ಮೊದಲು ಮಧ್ಯಪ್ರದೇಶ, ಕರ್ನಾಟಕ 2ನೇ ಸ್ಥಾನ ಅಲಂಕರಿಸಿದೆ. ನಮ್ಮ ರಾಜ್ಯದ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶ ಇಡೀ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ನಾಗರಹೊಳೆ 2ನೇ ಸ್ಥಾನದಲ್ಲಿವೆ. ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ “ಜಿಮ್ ಕಾರ್ಬೆಟ್ ಹುಲಿ ಧಾಮ”ದ ಬಳಿಕ ಬಂಡೀಪುರಕ್ಕೆ 2ನೇ ಸ್ಥಾನ ಲಭಿಸಿದೆ.
*ಹುಲಿ ಗಣತಿ ವರದಿ ಪ್ರಕಾರ ವಿವರ ಇಲ್ಲಿದೆ*
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಬಿಡುಗಡೆ ಮಾಡಿದ್ದ ವರದಿ ಪ್ರಕಾರ, ಉತ್ತರಾಖಂಡದ “ಜಿಮ್ ಕಾರ್ಬೆಟ್ ಹುಲಿ ಉದ್ಯಾನ”ದಲ್ಲಿ ಅತ್ಯಧಿಕ 312 ಹುಲಿಗಳಿದ್ದರೆ, ಕರ್ನಾಟಕದ ಬಂಡೀಪುರದಲ್ಲಿ 191 ಹುಲಿಗಳಿದ್ದು 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ರಾಜ್ಯದ ಮತ್ತೊಂದು ಹುಲಿ ಧಾಮ ನಾಗರಹೊಳೆ 185 ಹುಲಿಗಳನ್ನು ಹೊಂದಿದೆ.
ದೇಶವ್ಯಾಪ್ತಿಯಗಿ ನೋಡುವುದಾದರೆ ಮಧ್ಯಪ್ರದೇಶವು 785 ಹುಲಿಗಳಿದ್ದು, ಮೊದಲನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ ಬಾರಿ 524 ಹುಲಿಗಳನ್ನು ಹೊ೦ದಿರುವ ಮೂಲಕ ರಾಜ್ಯ 2ನೇ ಸ್ಥಾನದಲ್ಲಿತ್ತು. ಅದರಂತೆ ಈ ಬಾರಿಯೂ ಕೂಡ 563 ಹುಲಿಗಳಿದ್ದು ದೇಶಕ್ಕೆ 2ನೇ ಸ್ಥಾನ ಪಡೆದಿದೆ.