ಕುಕನೂರ : ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವವರಿಗೆ ಖಡಕ್ಕಾಗಿ ಉತ್ತರಿಸಿದ ಶಾಸಕ ಬಸವರಾಜ ರಾಯರೆಡ್ಡಿಯವರು, ಈ ಮೂಲಕ ಮಾಜಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇಂದು ಕುಕನೂರ ಪಟ್ಟಣದಲ್ಲಿ ನಡೆದ ಸರ್ಕಾರದ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ ಚಾಲನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಟಾಟಿಸಿ ಬಳಿಕ ಮಾತನಾಡಿದ ಅವರು, ‘ನಮ್ಮ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ 4.43 ಕೊಟಿ ಜನರಿಗೆ ಅನೂಕುಲವಾಗಿದೆ. ನಮ್ಮ ಈ ಯೋಜನೆಗಳು ಬಡವರ ಪರವಾಗಿ ಹಾಗೂ ಬಡಕುಟುಂಬದ ಕಲ್ಯಾಣದ ದಿಕ್ಸೂಚಿಯಾಗಿವೆ ಮಾರ್ಪಟ್ಟಿವೆ ಎಂದರು.

‘ಈ ಹಿಂದೆ ತಾಲೂಕಿನಲ್ಲಿ ಆಡಳಿತ ಮಾಡಿರೊರಿಗೆ ಬಡವರ ಕಷ್ಟಕಾರ್ಪಣ್ಯ ಏನು ಗೊತ್ತಿದೆ. ನಮ್ಮ ಸರ್ಕಾರ ಬಸವ ತತ್ವದಲ್ಲಿ ನಡೆಯುತ್ತಿದೆ. ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ದೇಶದಲ್ಲಿ ಮೊದಲ ಬಾರಿಗೆ ರಾಜ್ಯಾದ್ಯಂತ ಮಹಿಳಯರಿಗೆ ಉಚಿತ ಬಸ್ ಪ್ರಯಾಣ ಮಾಡುವ “ಶಕ್ತಿ ಯೋಜನೆ” ಜಾರಿ ಮಾಡಿದ್ದೇವೆ ಅದರ ಜೊತೆಗೆ ಗೃಹ ಲಕ್ಷ್ಮೀ ಯೋಜನೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಯೋಜನೆ ಕೂಡ ಆರಂಭವಾಗಲಿದೆ. ಈ ಯೋಜನೆ ಈಗಾಗಲೇ ನೋಂದಣಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. 200 ಯುನಿಟ್ ಉಚಿತ ವಿದ್ಯುತ್ ನೀಡುವ ಮೂಲಕ ಗೃಹ ಜ್ಯೋತಿ ಯೋಜನೆ ಇದೇ ತಿಂಗಳಿಂದ ಆರಂಭವಾಗಲಿದೆ’ ಎಂದರು.
‘ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ 5ಕೆಜಿ ಅಕ್ಕಿ ಹಾಗೂ 5 5ಕೆಜಿ ಅಕ್ಕಿ ಬದಲಿಗೆ 170 ರೂ. ರಂತೆ ಟಿಡಿಪಿಯಿಂದ ನೇರವಾಗಿ ಎಪಿಎಲ್, ಬಿಪಿಎಲ್, ಅಂತೋದಯ ಕಾರ್ಡದಾರರಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಡಿಸೆಂಬರ್ ತಿಂಗಳಿಂದ “ಯುವ ನಿಧಿ ಯೋಜನೆ” ಆರಂಭವಾಗಲಿದೆ. ಇಷ್ಟೆಲ್ಲಾ ಯೋಜನೆಗಳು ರಾಜ್ಯದ ಕಡುಬಡವನೂ ತಲಪುವಲ್ಲಿ ಯಶಸ್ವಿಯಾಗಲಿದೆ. ಈ ಯೋಜನೆಗಳ ಬಗ್ಗೆ ಟೀಕೆ ಮಾಡುವವರು ಬಸವ ತತ್ವವನ್ನು ವಿರೋಧಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ’ ಎಂದು ಮಾಜಿ ಸಚಿವರಿಗೆ ಹಾಗೂ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತಿರುವವರಿಗೆ ಖಡಕ್ಕಾಗಿ ಉತ್ತರಿಸಿದರು.
*ಕುಕನೂರು ಪಟ್ಟಣದಲ್ಲಿ ಹೈಟೆಕ್ 100 ಹಾಸಿಗೆ ಆಸ್ಪತ್ರೆ, ಕುಕನೂರಿಗೆ ತುಂಗಭದ್ರಾ ನೀರು ಪೂರೈಕೆ*
‘ಕುಕನೂರು ಪಟ್ಟಣದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆಗೆ ಮಾತುಕತೆ ನಡೆಸಿದ್ದೇನೆ. ಪಟ್ಟಣದ ಕೋಳಿಪೇಟೆ ಕಾಲೋನಿಯಲ್ಲಿ 1 ಕೋಟಿ ರೂ.ಗಳನ್ನು ವ್ಯಯಿಸಿ ಶೌಚಾಲಯ ಹಾಗೂ ನಿರ್ವಹಣೆಗಾಗಿ ಮಂಜೂರಾತಿ ಮಾಡುತ್ತೇನೆ. ಮುಂದಿನ 5 ವರ್ಷದ ಅವದಿಯ ಒಳಗೆ 15 ಕೋಟಿ ರೂಪಾಯಿಯ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುವುದು ಎಂದರು.
ಇದೆಲ್ಲಕ್ಕಿಂತ ಮುಖ್ಯವಾಗಿ ಕುಕನೂರು ಮತ್ತು ಯಲಬುರ್ಗಾ ಪಟ್ಟಣ ಸೇರಿ ಕೆಲವು ಹಳ್ಳಿಗಳಿಗೆ ತುಂಗಭದ್ರಾ ನೀರು ತರುವ ಯೋಜನೆ ಸಿದ್ದವಾಗಿದ್ದು, ಇದಕ್ಕಾಗಿ ಒಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಶುರುವಾಗಲಿದೆ. ಕುಡಿಯುವ ನೀರು ಯೋಜನೆಯನ್ನು ಶೀರ್ಘದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಈ ಯೋಜನೆಗೆ ಅಡಿಗಲ್ಲು ಹಾಕಿಸುತ್ತೇನೆ. ಈ ಯೋಜನೆಗೆ ಕೇಂದ್ರ ಸರ್ಕಾರದ “ಅಮೃತ ಯೋಜನೆ” ಅಡಿಯಲ್ಲಿ ಶೇಕಡಾ 50ರಷ್ಟು ಹಣಕಾಸು ಮಂಜೂರು ಮಾಡಲಿದೆ. ಈ ಯೋಜನೆಗೆ ಈಗಾಗಲೇ ಸುಮಾರು 290ಕೋಟಿ ರೂ. ಅಂದಾಜಿಸಲಾಗಿದೆ. ಇದರಿಂದ ಕುಡಿಯುವ ನೀರು ತಾಲೂಕಿನ ಪ್ರತಿ ಒಬ್ಬ ವ್ಯಕ್ತಿಗೆ 85 ಲೀಟರ್ ನೀರು ದೊರೆಯಲಿದೆ. ಇದು ನಮ್ಮ ಗುರಿಯಾಗಿದೆ ಮುಂದಿನ 5 ವರ್ಷದ ಅವಧಿ ಒಳಗಡೆ ಈ ಎಲ್ಲಾ ಕೆಲಸವನ್ನು ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ ನೀಲಪ್ರಭಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಬ್ರಮಣ್ಯ, ಸಿಡಿಪಿಒ ಸಿಂಧೂ ಎಲಿಗಾರ್, ಉಪ ತಹಸೀಲ್ದಾರ್ ಮುರಳೀಧರ ಕುಲಕರ್ಣಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿ ಮಲ್ಲಯ್ಯ ಸ್ವಾಮಿ, ಈಸಾನ್ಯ ರಸ್ತೆ ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡರಾದ ರಾಮಣ್ಣ ಬಜೇಂತ್ರಿ, ಖಾಸಿಂ ಸಾಬ್ ತಳಕಲ್, ನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ್ ಕಡೆಮನಿ, ಮಲ್ಲಿಕಾರ್ಜುನ ಬಿನ್ನಾಳ, ಕೆರಿಬಸಪ್ಪ ನಿಡಗುಂದಿ, ಸಿದ್ದಯ್ಯ ಕಳ್ಳಿಮಠ ಸೇರಿದಂತೆ ಪಟ್ಟಣ ಪಂಚಾಯತ್ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.