ಜಿಲ್ಲಾಧಿಕಾರಿ ನಳಿನ್ ಅತೂಲ್ ಅವರ ನೇತೃತ್ವದ ಸಾರ್ವಜನಿಕ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ..!
ಕೊಪ್ಪಳ : ತಾಲೂಕಿನ ಹಿರೇಬಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬಗನಾಳ ಸಮೀಪದ ಧ್ರುವದೇಶ್ ಮೆಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ (DHRUVDESH METASTEEL PRIVATE LIMITED,KOPPAL) ಕಾರ್ಖಾನೆಗೆ ಹೆಚ್ಚುವರಿ ಘಟಕ ಸ್ಥಾಪನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರ ನೇತೃತ್ವದ ಸಾರ್ವಜನಿಕ ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಮುಖಂಡರು ಕಂಪನಿ ಪರವಾಗಿ ಅಭಿಪ್ರಾಯ ಹಂಚಿಕೊಂಡರು. ಧ್ರುವದೇಶ್ ಮೆಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ ಅವರು ಹೊಸದಾಗಿ ಸ್ಥಾಪನೆ ಮಾಡುತ್ತಿರುವ ಹೆಚ್ಚುವರಿ ಘಟಕ ಸ್ಥಾಪನೆಯ ಕುರಿತು ಸಹಮತ ನೀಡಿದರು.
ಕೊಪ್ಪಳ ತಾಲೂಕಿನ ಹಿರೇಬಗನಾಳ-ಚಿಕ್ಕಬಗನಾಳ ಗ್ರಾಮದ ಹತ್ತಿರ ಇರುವ ಧ್ರುವದೇಶ್ ಮೆಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ (DHRUVDESH METASTEEL PRIVATE LIMITED,KOPPAL) ಆವರಣದಲ್ಲಿ ಇಂದು (ಆಗಸ್ಟ್ 22-ಮಂಗಳವಾರ) ನಡೆದ ಸಾರ್ವಜನಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಧ್ರುವದೇಶ್ ಮೆಟಾಸ್ಟೀಲ್ ಕಂಪನಿ ಬಗ್ಗೆ ಹಿರೇಬಗನಾಳ, ಚಿಕ್ಕಬಗನಾಳ, ಕುಣಕೇರಿ, ಕುಣಕೇರಿ ತಾಂಡಾ, ಲಾಚನಕೇರಿ, ಕರ್ಕಿಹಳ್ಳಿ ವ್ಯಾಪ್ತಿಯಲ್ಲಿ ಸುತ್ತಮುತ್ತಲಿನ ಸಾರ್ವಜನಿಕರು ಒಳ್ಳೆಯ ಅಭಿಪ್ರಾಯ ಹಂಚಿಕೊಂಡು ಹೆಚ್ಚುವರಿ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿಗೆ ಒಪ್ಪಿಗೆ ಸೂಚಿಸಲು ಹೇಳಿದರು.
ಧ್ರುವದೇಶ್ ಕಂಪನಿಯ ಸಾಮಾಜಿಕ ಕ್ಷೇತ್ರ, ದಾರ್ಮಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ ಹಾಗೂ ಕಂಪನಿಯ ಸಾಮಾಜಿಕ ಜವಾಬ್ದಾರಿಯನ್ನು ಬಹಳ ನಿಷ್ಠೆಯಿಂದ ನೇರವರಿಸಿಕೊಂಡು ಬಂದಿದೆ ಎನ್ನುವ ಅಭಿಪ್ರಾಯ ಬಹಳಷ್ಟು ಜನರಿಂದ ಬಂದಿದೆ. ಹಾಗಾಗಿ ಧ್ರುವದೇಶ್ ಕಂಪನಿಯ ಹೆಚ್ಚುವರಿ ಘಟಕ ಸ್ಥಾಪನೆಗೆ ಸಿಪಾರಸ್ಸು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸಿದರು.
*ಕೆಲ ಸಾಮಾಜಿಕ ಹೋರಾಟಗಾರರು ಹಾಗೂ ರೈತ ಮುಖಂಡರಿಂದ ವಿರೋಧ*
ಈ ಭಾಗದಲ್ಲಿ ಸ್ಥಾಪನೆಗೊಂಡಿರುವ ಕಾರ್ಖಾನೆಗಳಿಂದ ವಾಯು ಹಾಗೂ ಜಲಮಾಲಿನ್ಯವಾಗುತ್ತಿದ್ದು, ಸಾಕಷ್ಟು ಭಾರೀ ಜಿಲ್ಲಾಡಳಿತಕ್ಕೆ ಹಾಗೂ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗಯ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ತಾವುಗಳು ಈ ಹೇಚ್ಚುವರಿ ಘಟಕದ ಸ್ಥಾಪನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಸಾಮಾಜಿಕ ಹೋರಾಟಗಾರರು ಹಾಗೂ ರೈತ ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅನಿಸಿಕೆ-ಅಭಿಪ್ರಾಯ ಹೇಳುತ್ತಿರುವಾಗ, ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು. ಇಂತಹ ಘಟಕಗಳಿಂದ ಅನೇಕ ತೊಂದರೆ ಉಂಟಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈಗಾಗಲೇ ಸ್ಥಾಪನೆ ಆಗಿರುವ ಸ್ಟೀಲ್ ಪ್ಲಾಂಟ್‌ನಿಂದ ಸಾಕಷ್ಟು ದುಷ್ಟಪರಿಣಾಮಗಳು ಈ ಭಾಗದ ಜನರು ಅನುಭವಿಸುತ್ತಿದ್ದಾರೆ. ಕಾರ್ಖಾನೆಯಿಂದ ಹೊರ ಸೂಸುವ ಕಪ್ಪು ಮಿಸ್ರಿತ ವಿಷಪೂರಿತ ಬೂದಿ ಹಾಗೂ ದುರ್ವಾಸನೆಯಿಂದ ರೈತರಿಗೆ ಜಾನುವಾರುಗಳಿಗೆ ಜಲ ಚರಂಡಿಗಳಿಗೆ ತೀರ್ವತರವಾದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಾರ್ಖಾನೆಗಳ ಕುಲಷಿತ ತ್ಯಾಜ್ಯ ಕಲಬೆರಿಕೆಯೊಂದಿಗೆ ತುಂಗಭದ್ರ ನದಿಗೆ ಸೇರುತ್ತಿದೆ. ಕುಲಷಿತ ನೀರು ಸೇವಿಸುವುದರಿಂದ ರೈತರಿಗೆ ಹಾಗೂ ಜನುವಾರಿಗಳಿಗೆ ನಾನ್ನ ರೀತಿಯ ಕಾಯಿಲೆಗಳು ಬರುತ್ತವೆ ಎಂದು ರಮೇಶ್ ಡಂಬ್ರಳ್ಳಿ, ಗವಿಸಿದ್ದಪ್ಪ ಪುಟಗಿ, ಮಹೇಶ್ ಒದ್ನಾಳ, ಜಾವೀದ್ ಬಟಗೇರಿ ತಮ್ಮ ವಿರುದ್ಧ ಅಭಿಪ್ರಾಯ ಹಂಚಿಕೊಂಡರು.
ಧ್ರುವದೇಶ್ ಮೆಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್‌ನ ಮುಖಸ್ಥ ಆರ್.ವಿ ಓಂಕಾರ್ ಮಾತನಾಡಿ, “ನಮ್ಮ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಮೀಕರ ಸುರಕ್ಷತೆಗೆ ನಮ್ಮ ಮೊದಲ ಆಧ್ಯತೆ ಹಾಗೂ ಸಾಮಾಜಿಕ ಕ್ಷೇತ್ರ, ದಾರ್ಮಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ ಹಾಗೂ ಕಂಪನಿಯ ಸಾಮಾಜಿಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವರಿಗೆ ಬೇಕಾಗುವ ಮೂಲಭೂತ ಸೌಕರ್ಯವನ್ನು ಸಾದ್ಯ ಆದಷ್ಟು ನೀಡುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, “ಧ್ರುವದೇಶ್ ಮೆಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ ನವರು ನಮಗೆ ತಮ್ಮ ಹೆಚ್ಚುವರಿ ಘಟಕ ಸ್ಥಾಪನೆಗೆ ಒಪ್ಪಿಗೆ ನೀಡುವುದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಸಾರ್ವಜನಿಕರಿಂದ ಬಂದ ಅಭಿಪ್ರಾಯವನ್ನು ಈಗಾಗಲೇ ಸಂಗ್ರಹಿಸಿದ್ದೇವೆ ಈ ಪ್ರಕಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು” ಎಂದರು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಎ.ಸಿ. ಅರವಿಂದ್ ಮಾಲಗತ್ತಿ, ವಾಯ್ಯು ಮಾಲಿನ್ಯ ನಿಯಂತ್ರಣ ಮಂಡಳಿಯ ಮುರಳಿಧರ್, ಕೊಪ್ಪಳ ತಾಲೂಕಾ ತಹಸೀಲ್ದಾರ್ ವಿಠ್ಠೊಬ್ ಚೌದರಿ, ಅಧಿಕಾರಿಗಳು ಹಾಗೂ ಧ್ರುವದೇಶ್ ಕಂಪನಿಯ ಹನುಮಂತಪ್ಪ ಶೇಡೆಷ್ಕರ್‌ಮತ್ತು ಸಾರ್ವಜನಿಕರು ಇದ್ದರು.
ವರದಿ : ಚಂದ್ರು ಆರ್ ಭಾನಾಪೂರ್