ಬೆಂಗಳೂರು : ಜಗತ್ತಿನಲ್ಲಿ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಗಿದ್ದು, ವೈರಸ್‌ಗಳ ನಾಡು ಚೀನಾದಲ್ಲಿ ಹೊಸ ಮಾದರಿಯ ನ್ಯುಮೋನಿಯಾ ವೈರಸ್ ಸೋಂಕು ಮಕ್ಕಳಲ್ಲಿ ಅಬ್ಬರಿಸುತ್ತಿದೆ. ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇಂತಹ ವೈರಸ್ ಭಾರತ, ಕರ್ನಾಟಕಕ್ಕೆ ಕಾಲಿಟ್ಟಿಲ್ಲ. ಆದರೆ, ನೀವು ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸೋ ಮೂಲಕ ಅದನ್ನು ತಡೆಯಬಹುದು.
EXCLUSIVE NEWS : ಕಾಲು ಜಾರಿ ಕೆರೆಗೆ ಬಿದ್ದ ಬಾಲಕ ಸಾವು : ಗ್ರಾಮ ಪಂಚಾಯತಿಯ ನಿರ್ಲಕ್ಷ್ಯದ ಆರೋಪ…!!
ಹೌದು, ಇದೀಗ ಚೀನಾದಲ್ಲಿ ಆರ್ಭಟಿಸುತ್ತಿರೋ ಹೊಸ ವೈರಸ್‌ನಿಂದಾಗಿ ಅಲ್ಲಿನ ಮಕ್ಕಳು ನ್ಯುಮೋನಿಯಾದಂತ ಭಯಂಕರ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅನೇಕ ಮಕ್ಕಳು ಈ ಸೋಂಕಿನಿಂದ ಬಳಲುತ್ತಿದ್ದು, ಕೆಲವೆಡೆ ಸಾವು ಕೂಡ ಸಂಭವಿಸಿದೆ ಎಂದು ಸುದ್ದಿಯಾಗಿದೆ.
ಈ ಕುರಿತು ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಚೀನಾ ವೈರಸ್ ಬಗ್ಗೆ ಆತಂಕ ಬೇಡ, ಇರಲಿ ಮುನ್ನೆಚ್ಚರಿಕೆ ಎಂದು ಕೆಲ ಮುನ್ನೆಚ್ಚರಿಕೆ ಕ್ರಮವಗಳನ್ನು ಬಿಡುಗಡೆ ಮಾಡಿದೆ.
EXCLUSIVE NEWS : ಅಕ್ರಮ ಮರಳು ದಂಧೆ..! : ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಪರಿಶೀಲನೆ!!
1. ಕೆಮ್ಮುವಾಗ, ಶೀನುವಾಗ ಕರವಸ್ತ್ರದಿಂದ ಬಾಯಿ, ಮೂಗು ಮುಚ್ಚಿಕೊಳ್ಳಿ
2. ಆಗಾಗ ಸೋಪಿನಿಂದ ಕೈತೊಳೆಯಿರಿ.
3. ಜನಸಂದಣಿ ಇರುವೆಡೆ ಮಾಸ್ಕ್ ಧರಿಸಿ
4. ಶೀತ, ಜ್ವರ ಬಾಧೆ ಇದ್ದರೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷೆ ಮಾಡಿಸಿ
5. ಎಳೆ ಮಕ್ಕಳು, ವೃದ್ಧರು, ಗರ್ಭಿಣಿಯರು, ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆ ಇರೋರು ಆರೋಗ್ಯ ಕಾಳಜಿ ಬಗ್ಗೆ ವಿಶೇಷ ಗಮನ ಕೊಡಿ
ಈ ಎಲ್ಲಾ ಮುನ್ನೆಚ್ಚರಿಕೆಯನ್ನು ವಹಿಸೋ ಮೂಲಕ, ಚೀನಾದ ಮಕ್ಕಳಲ್ಲಿ ಕಾಡುತ್ತಿರುವಂತ ನ್ಯುಮೋನಿಯಾದಂತ ಹೊಸ ವೈರಸ್ ಬಂದರು, ಚಿಂತಿರಸದೇ ನಿಮ್ಮನ್ನು ಹಾಗೂ ನಿಮ್ಮವರನ್ನು ನೀವು ರಕ್ಷಿಸಿಕೊಳ್ಳಬಹುದು.