ಕುಕನೂರು : ಭಕ್ತಿ ಪಂಥ, ಭಕ್ತಿ ಮಾರ್ಗದ ಮುಖಾಂತರ ಕನಕದಾಸರು ದಾಸ ಸಾಹಿತ್ಯದಿಂದ ಲೋಕ ಕಲ್ಯಾಣ, ಜನಸಾಮಾನ್ಯರಿಗೆ ಸನ್ಮಾರ್ಗದ ಬೋಧನೆ ಮಾಡಿದವರು. ಕನಕದಾಸರು ಸರ್ವ ಶ್ರೇಷ್ಠ ಸಂತರಾಗಿ, ದಾಸ ಶ್ರೇಷ್ಠ ರಾಗಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಗುರುವಾರ ಕುಕನೂರು ಪಟ್ಟಣದ ಇಟಗಿ ಮಸೂತಿಯ ಆವರಣದಲ್ಲಿ ತಾಲೂಕ ಆಡಳಿತ ಹಾಗೂ ಹಾಲುಮತ ಸಮಾಜದ ವತಿಯಿಂದ ಜರುಗಿದ ಕನಕದಾಸರ 536 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಕನಕದಾಸರು ಭಕ್ತಿ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ದ ಮೂಲಕ ಜನರನ್ನು ಜಾಗೃತಿಗೊಳಿಸಿದ ಮಹಾನ್ ಚೇತನರಾಗಿದ್ದಾರೆ ಇಂತಹ ಮಹಾನ್ ಶ್ರೇಷ್ಠ ದಾಸರ ತತ್ವ, ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಚಾಚು ತಪ್ಪದೆ ಪಾಲಿಸಬೇಕು ಅಲ್ಲದೇ ಕನಕದಾಸರ ಜಯಂತಿಯನ್ನು ಜಾತಿ ಭೇದ ಭಾವ ಎನ್ನದೆ ಪ್ರತಿ ಗ್ರಾಮೀಣ ಮಟ್ಟದಲ್ಲೂ ಆಚರಿಸಲು ಮುಂದಾಗಬೇಕು ಅಂದಿನ ಕಾಲದಲ್ಲಿ ಯಾವುದೇ ಜಾತಿ ಭೇದ ಭಾವ ಮಾಡದೆ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶರಣ ಸಾಹಿತ್ಯ ಮತ್ತು ಭಕ್ತಿ ಸಾಹಿತ್ಯವನ್ನು ಸಾರಿದ ಮಹಾನ್ ಚೇತನರಾಗಿದ್ದಾರೆ ಎಂದು ಶಾಸಕ ರಾಯರಡ್ಡಿ ಹೇಳಿದರು.
ಕನಕ ದಾಸರ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹಗಳು ನಡೆದವು. ಇದಕ್ಕೂ ಮುನ್ನ ಪಟ್ಟಣದಲ್ಲಿ ಡೊಳ್ಳು, ವಾದ್ಯ ಮೇಳ ದೊಂದಿಗೆ ಕನಕ ದಾಸರ ಭವ್ಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅನ್ನದಾನೇಶ್ವರ ಶಾಖಾ ಮಠದ ಡಾ. ಮಹದೇವ ಸ್ವಾಮೀಜಿಗಳು ವಹಿಸಿದ್ದರು, ವೇದಮೂರ್ತಿ ವಿರೂಪಾಕ್ಷಯ್ಯ ಗುರುವಿನ, , ತಹಶೀಲ್ದಾರ್ ಪ್ರಾಣೇಶ್, ಕಳಕಪ್ಪ ಕಂಬಳಿ, ಮಂಜುನಾಥ್ ಕಡೆಮನಿ, ವೀರನಗೌಡ ಬಳೂಟಗಿ, ಹನುಮಂತ್ ಗೌಡ ಚೆಂಡೂರ್, ಸಂಗಮೇಶ್ ಗುತ್ತಿ, ರಹಿಮಾನ್ ಸಾಬ್ ಮಕಪ್ನವರ್,. ಶೇಖಪ್ಪ ಕಂಬಳಿ, ಹಾಗೂ ಇತರರಿದ್ದರು.
ವರದಿ : ಈರಯ್ಯ ಕುರ್ತಕೋಟಿ ,
ಕುಕನೂರು