ಕೊಪ್ಪಳ(ಕುಕನೂರು) : ಆಂಧ್ರ ಪ್ರದೇಶದ ಕರ್ನುಲ್ ಜಿಲ್ಲೆಯ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಕುಕನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಸುವಣ೯ ಕನಾ೯ಟಕ ಸಂಭ್ರಮಾಚರಣೆ ನಿಮಿತ್ತ ಕನ್ನಡ ಹಬ್ಬ , ವಿಚಾರ ಸಂಕಿರಣ ಹಾಗೂ ಭಕ್ತಿ ಸಂಗೀತ , “ಕವಿಗಳು ಕಂಡಂತೆ ಶ್ರೀಗುರು ರಾಘವೇಂದ್ರ ರಾಯರು ಕವಿಗೋಷ್ಠಿ ” ಹಾಗೂ ಭಕ್ತಿ ಸಂಗೀತ, ಸುಗಮ ಸಂಗೀತ, ದಾಸರ ಪದಗಳು ಕಾರ್ಯಕ್ರಮ, ನೃತ್ಯ, ಜಾನಪದ ಗಾಯನ ಹೀಗೆ ಹಲವು ಕಾಯ೯ಕ್ರಮಗಳು ಹಾಗೂ ಸಾಧಕರಿಗೆ ಅಭಿನಂದನಾ ಹಾಗೂ ಸತ್ಕಾರ ಸಮಾರಂಭ ಇದೇ ಡಿಸೆಂಬರ್ 25 ರಂದು ಸೋಮವಾರ ಮಂತ್ರಾಲಯದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಪತ್ರಕರ್ತ ರುದ್ರಪ್ಪ ಭಂಡಾರಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು ಕೂಡಲೇ ತಮ್ಮ ಹೆಸರನ್ನು ಈ ಮೊಬೈಲ್ ನಂಬರ್ 7815985505 ಗೆ ಹೆಸರು ನೊಂದಾಯಿಸ ಬಹುದು ಎಂದು ಪ್ರಕಟಣೆಯಲ್ಲಿ ಮೂಲಕ ಮನವಿ ಮಾಡಿದ್ದಾರೆ.