ರಾಜ್ಯದಲ್ಲಿ ನನ್ನ ಬಿಟ್ಟು ಸರ್ಕಾರ ಮಾಡಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ : ಜನಾರ್ಧನರೆಡ್ಡಿ

You are currently viewing ರಾಜ್ಯದಲ್ಲಿ ನನ್ನ ಬಿಟ್ಟು ಸರ್ಕಾರ ಮಾಡಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ : ಜನಾರ್ಧನರೆಡ್ಡಿ


ಬಾಗಲಕೋಟೆ : ರಾಜ್ಯದಲ್ಲಿ 50 ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಯಲಿದ್ದಾರೆ. ಕೆಲ ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ. ಎಲ್ಲಾ ಪಕ್ಷಗಳಿಗೆ ನನ್ನ ಮೇಲೆ ಕಣ್ಣಿದೆ. ಆದ್ರೂ ರಾಜ್ಯದಲ್ಲಿ ನನ್ನ ಬಿಟ್ಟು ಸರ್ಕಾರ ಮಾಡಲು ಯಾವ ಪಕ್ಷಕ್ಕೂ ಸಾಧ್ಯವಿಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜನಾರ್ಧನರೆಡ್ಡಿ ಹೇಳಿಕೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ನಿನ್ನೆ ಹಾಸನ ಜಿಲ್ಲೆಯ ಶ್ರವಣಬೆಳಗೋಳ ಹಾಗೂ ದಾವಣಗೆರೆ ಜಿಲ್ಲೆಯ ಮಾಯಕೊಂಕದಲ್ಲಿ ಪ್ರಚಾರ ಮುಗಿಸಿಕೊಂಡು ಬಳಿಕ ಕುಡುಚಿ ಕ್ಷೇತ್ರಕ್ಕೆ ಬಂದಿದ್ದೇನೆ. ಇಂದು ಜಮಖಂಡಿ, ಕುಡುಚಿ, ಅಥಣಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದರು.

ಜಿಲ್ಲೆಯ ಕ್ಷೇತ್ರಗಳಲ್ಲಿ ತುಂಬಾ ಚೆನ್ನಾಗಿ ಪ್ರಚಾರ ನಡೆಯುತ್ತಿದೆ ಸಾಕಷ್ಟು ಜನರ ಬೆಂಬಲ ಸಿಗುತ್ತಿದೆ. ಏಪ್ರಿಲ್ 9 ರಂದು ಬಾಗಲಕೋಟೆಯ ಬಿಳಗಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದೇನೆ. ಎಲ್ಲಾ ಕಡೆ ಚೆನ್ನಾಗಿ ಪಕ್ಷದ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ನನಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದರು.

Leave a Reply

error: Content is protected !!