ಗಜೇಂದ್ರಗಡ
ನೈಜ ಜನಪರ ಕಾಳಜಿಯನ್ನು ಇಟ್ಟುಕೊಂಡು ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಾಜದ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದ ಹಾಗೆಯೇ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಪಟ್ಟಣದ ಗೊಂಗಡಶೆಟ್ಟಿಮಠದಲ್ಲಿ ಬಿಜೆಪಿ ೨೫ ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಮುಖಂಡರು ಸೋಮವಾರ ಜರುಗಿದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಬ್ರಷಾಚಾರ, ಬೆಲೆ ಏರಿಕೆಗಳಿಂದ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿಯೇ ಜನರು ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿದು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ದೇಶದ ಎಲ್ಲ ರಾಜ್ಯಗಳಲ್ಲಿ ವಿಜಯ ಸಾಧಿಸಲಿದೆ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿದರೆ, ದೇಶ ಅಭಿವೃದ್ಧಿಯಿಂದ ಕುಂಠಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ ರೂ.೨ ಸಾವಿರ, ೨೦೦ ಯೂನಿಟ್ ವಿದ್ಯುತ್ ಉಚಿತ, ಪ್ರತಿಯೊಬ್ಬರಿಗೆ ೧೦ಕೆಜಿ ಅಕ್ಕಿ ನೀಡುವುದರ ಜತೆಗೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದರು.
ಕಾAಗ್ರೆಸ್ ಸೇರ್ಪಡೆಗೊಂಡ ಜಂಗಮ ಸಮಾಜದ ಪ್ರ.ಕಾರ್ಯದರ್ಶಿ ನಾಗಯ್ಯ ಗೊಂಗಡಶೆಟ್ಟಿಮಠ ಮಾತನಾಡಿ, ಬಿಜೆಪಿಯಲ್ಲಿ ನಿಷ್ಟಾವಂತರಿಗೆ ಹಾಗೂ ಪಕ್ಷ ಸಂಘಟನೆ ಮಾಡುತ್ತಾ ಬಂದಿರುವವರಿಗೆ ಬೆಲೆವಿಲ್ಲದಂತಾಗಿದೆ. ಸಣ್ಣ ಸಣ್ಣ ಸಮಾಜಗಳ ಬಗ್ಗೆ ಕಾಳಜಿನೇ ಇಲ್ಲವಂತಾಗಿದೆ ಹೀಗಾಗಿ ಸರ್ವರ ಜನಾಂಗದ ಏಳ್ಗೆ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡಿದ್ದೇನೆ. ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ಜಿ.ಎಸ್.ಪಾಟೀಲ ೨೫ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಲು ಎಲ್ಲರೂ ಪಣ ತೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಯ್ಯ ಗೊಂಗಡಶೆಟ್ಟಿಮಠ, ಶರನಯ್ಯ ಗೌರಿಮಠ, ಶಶಿಕಲಾ ಚಿನ್ನಯ್ಯನಮಠ, ಪದ್ಮಾಮ್ಮ ಬಂಡಿ, ಶಿವಮ್ಮ ಸಿಂಹಾಸನದ, ಕಾವ್ಯಾ ಗೊಂಗಡಶೆಟ್ಟಿಮಠ, ಕಸ್ತೂರಿ ಶಾಂತಗೇರಿಮಠ ಸೇರಿದಂತೆ ಇತರರಿ ಸೇರ್ಪಡೆಗೊಂಡರು.
ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ಚಂಬಣ್ಣ ಚವಡಿ, ಎಚ್.ಎಸ್.ಸೋಂಪೂರ,ಬಿ.ಎಸ್.ಶೀಲವAತರ, ಬಸವರಾಜ ಹೂಗಾರ, ಬಸವರಾಜ ಚನ್ನಿ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಇತರರು ಇದ್ದರು.