You are currently viewing BIG NEWS : ‘ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಬಿಡುಗಡೆ ಮಾಡಬೇಕು’, ಹೀಗೆ ಅಂದಿದ್ಯಾರು ಗೊತ್ತಾ?

BIG NEWS : ‘ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಬಿಡುಗಡೆ ಮಾಡಬೇಕು’, ಹೀಗೆ ಅಂದಿದ್ಯಾರು ಗೊತ್ತಾ?

PV ನ್ಯೂಸ್ ಡೆಸ್ಕ್-ಬೆಂಗಳೂರು : ಚಿತ್ರದುರ್ಗಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ನಟ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇಂದು (ಗುರುವಾರ) ದರ್ಶನ್​ ಅಭಿಮಾನಿಯೊಬ್ಬ ಕೊರಳಿಗೆ ದರ್ಶನ್ ಪೋಟೋ ಹಾಕಿಕೊಂಡು ಜೈಲಿನ ಬಳಿ ಬಂದು ದರ್ಶನ್ ಅನ್ನು ಬಿಡುಗಡೆ ಮಾಡುವಂತೆ ಗಲಾಟೆ ಮಾಡಿದ್ದಾನೆ ಎಂದು ಮಾಹಿತಿ ಬಂದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಬಳಿ ನಟ ದರ್ಶನ್ ಅಭಿಮಾನಿ ಗಲಾಟೆ ಮಾಡಿದ್ದು, ಕೊಲೆ ಆರೋಪಿ ನಟ ದರ್ಶನ್ ಫೋಟೋ ಹಿಡಿದು ರವಿಕುಮಾರ್ ಎಂಬ ಅಭಿಮಾನಿ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದಿದ್ದ ಎನ್ನಲಾಗಿದೆ. ರವಿಕುಮಾರ್ ಕರುನಾಡ ಯುವ ಸೇನೆ ಅಧ್ಯಕ್ಷನಾಗಿದ್ದು, ಕೊಲೆ ಆರೋಪಿ ದರ್ಶನ್ ಬಿಡುಗಡೆ ಮಾಡುವಂತೆ ಉರುಳು ಸೇವೆ ಮಾಡುತ್ತಿದ್ದ, ಉರುಳು ಸೇವೆ ಮಾಡಲು ಮುಂದಾದಾಗ ಪೊಲೀಸರು ರವಿಕುಮಾರ್ ನನ್ನ ಅಡ್ಡಗಟ್ಟಿ ತಡೆದರು.

ಈ ಸಂದರ್ಭದಲ್ಲಿ ರವಿಕುಮಾರ್ ಜೈಲಿನ ಬಳಿಯೆ ತೆಂಗಿನಕಾಯಿ ಕೂಡ ಒಡೆಯಲು ಮುಂದಾಗಿದ್ದು, ಪೊಲೀಸರು ಆತನನ್ನು ತಡೆದಿದ್ದಾರೆ. “ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದ್ದಾನೆ. ರವಿಕುಮಾರ್ ನನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

Prajavikshane

Chandru R Bhanapaur

Leave a Reply

error: Content is protected !!