ಕಲ್ಯಾಣ ಕರ್ನಾಟಕ ರೈತರಿಗೆ ಶುಭ ಸುದ್ದಿ : ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ!
ಕೊಪ್ಪಳ : ತುಂಗಭದ್ರಾ ಜಲನಯನ ಪ್ರದೇಶದ ಅನ್ನದಾತರಿಗೆ ಸಂತಸದ ಸುದ್ದಿ ಎನ್ನುವಂತೆ, ತುಂಗಭದ್ರಾ ಡ್ಯಾಂನಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ಕುರಿತು ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದ್ದು, ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯದ ಮುರಿದ 19ನೇ ಕ್ರಸ್ಟಗೇಟ್ ದುರಸ್ತಿ ಕಾರ್ಯ ನಡೆಯುವಾಗ ಸಿಎಂ ಸಿದ್ದರಾಮಯ್ಯ ಅವರು ಪುನಃ ಜಲಾಶಯ ಭರ್ತಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಸರ್ಕಾರದ ನಿರೀಕ್ಷೆಯಂತೆ ಮಳೆಯಾಗುತ್ತಿದ್ದು, ಜಲಾಶಯ ತುಂಬುತ್ತಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ಹೇಳಿದೆ.