LOCAL NEWS : ಎಪಿಎಂಸಿ ವರ್ತಕರು, ದಲ್ಲಾಳಿಗಳ ಗೋಲ್ ಮಾಲ್ : ರೈತ ಸಂಘದಿಂದ ಬೃಹತ್‌ ಪ್ರತಿಭಟನೆ ರ್‍ಯಾಲಿ!

You are currently viewing LOCAL NEWS : ಎಪಿಎಂಸಿ ವರ್ತಕರು, ದಲ್ಲಾಳಿಗಳ ಗೋಲ್ ಮಾಲ್ : ರೈತ ಸಂಘದಿಂದ ಬೃಹತ್‌ ಪ್ರತಿಭಟನೆ ರ್‍ಯಾಲಿ!

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಎಪಿಎಂಸಿ ವರ್ತಕರು, ದಲ್ಲಾಳಿಗಳ ಗೋಲ್ ಮಾಲ್, ರೈತ ಸಂಘದ ಪ್ರತಿಭಟನೆ!

Company Profile Presentation (2)

PV NEWS -ಕುಕನೂರು : ಕೃಷಿ ಉತ್ಪನ್ನ ಮಾರುಕಟ್ಟೆ ಮಾರಾಟ ಮಂಡಳಿಯಿಂದ ಪರವಾನಗಿ ಪಡೆದ ವರ್ತಕರು, ದಲ್ಲಾಳಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರೈತ ಸಂಘ ಹಸಿರು ಸೇನೆಯ ವಿ ಆರ್ ನಾರಾಯಣ ರೆಡ್ಡಿ ಬಣದ ತಾಲೂಕು ಘಟಕದಿಂದ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ಮಾಡಲಾಯಿತು.

ಪಟ್ಟಣದ ಕೋಳಿ ಪೇಟೆಯಿಂದ ಎಪಿಎಂಸಿವರೆಗೂ ಬ್ರಹತ್ ಕಾಲ್ನಡಿಗೆ ಮೂಲಕ ಸಾವಿರಾರು ರೈತರು ದಲ್ಲಾಳಿಗಳು, ವರ್ತಕರಿಂದ ರೈತರಿಗೆ ಆಗುತ್ತಿರುವ ವಂಚನೆಯನ್ನು ಖಂಡಿಸಿ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಖರೀದಿದಾರರು ರೈತರ ಧಾನ್ಯಗಳನ್ನು ಕೊಂಡುಕೊಳ್ಳುವಾಗ ತೂಕದಲ್ಲಿ ತಾರತಮ್ಯ ಎಸಗುತ್ತಾರೆ. ನೋಂದಾಯಿತ ವರ್ತಕರು ಎಪಿಎಂಸಿ ಆವರಣದಲ್ಲಿಯೇ ವ್ಯಾಪಾರ, ವಹಿವಾಟು ಮಾಡಬೇಕು, ಪಾರದರ್ಶಕ ವ್ಯವಹಾರ ಮಾಡದೇ ವರ್ತಕರು ರೈತರ ಬೆಳೆಗಳ ಬೆಲೆಯಲ್ಲಿ, ಖರೀದಿಯಲ್ಲಿ ಅನ್ಯಾಯವಾಗುತ್ತಿದ್ದು ಇದು ನಿಲ್ಲಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಂದಪ್ಪ ಹುರಳಿ ಹೇಳಿದರು.

ರೈತರಿಗೆ ತೂಕದಲ್ಲಿ ಮೋಸ, ಬೆಲೆಯಲ್ಲಿ ಮೋಸ ನಡೆಯುತ್ತಿದೆ, ಎಪಿಎಂಸಿ ಆವರಣದಲ್ಲಿ ವರ್ತಕರು ಕಟ್ಟಡ ಪಡೆದು ಎಪಿಎಂಸಿ ಹೊರಗಡೆ ವಹಿವಾಟು ನಡೆಸುತ್ತಿದ್ದಾರೆ, ಟೆಂಡರ್ ಪ್ರಕ್ರಿಯೆ ನಿಂತು ಹೋಗಿದೆ, ಅಧಿಕಾರಿಗಳು ಟೆಂಡರ್ ಕರೆಯುತ್ತಿಲ್ಲ, ಸರಿಯಾದ ಬೆಂಬಲ ಬೆಲೆ ಇಲ್ಲದೇ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ವರ್ತಕರು, ಜನಪ್ರತಿನಿದಿನಗಳು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಹೀಗಾಗಿ ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶಿಸಿ ರೈತರ ಕಷ್ಟ ಆಲಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅಂದಪ್ಪ ಹುರಳಿ ಹೇಳಿದರು.

ರಾಜ್ಯ ಅಧ್ಯಕ್ಷ ವಿ ಆರ್ ನಾರಾಯಣ ರೆಡ್ಡಿ ಅವರು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಂಜುನಾಥ್ ಚೆಟ್ಟಿ, ಕಾರ್ಯದರ್ಶಿ ವಜಿರ್ ಸಾಬ್ ತಳಕಲ್, ರೈತ ಮುಖಂಡರಾದ ದೇವಪ್ಪ ಸೊಬಾನದ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಗೋವಿಂದ್ ರೆಡ್ಡಿ, ಕಳಕಪ್ಪ ಕ್ಯಾದಗುಪ್ಪಿ, ಗಂಗಮ್ಮ ಹುಡೇದ್, ಮಲ್ಲಿಕಾರ್ಜುನ ಗೌಡ, ಗವಿಸಿದ್ದಪ್ಪ ಜಿನದ್ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

error: Content is protected !!