Breaking news : ಯುವ ಪತ್ರಕರ್ತ ಶರಣಯ್ಯ ತೊಂಟದಾರ್ಯ ಮಠ ಹೃದಯಘಾತ ದಿಂದ ನಿಧನ.!!
ಕುಕನೂರು : ತಾಲೂಕಿನ ಯುವ ಪತ್ರಕರ್ತ ಹಾಗೂ ಯುವ ಸಮಾಲೋಚಕ ಶರಣಯ್ಯ ತೊಂಟದಾರ್ಯ ಮಠ ಹೃದಯಘಾತದಿಂದ ನಿಧನವಾಗಿದ್ದಾರೆ.
ಇವರು ಕುಕನೂರು ಪಟ್ಟಣದ ರಾಯರೆಡ್ಡಿ ಕಾಲೋನಿಯ ದಳಪತಿ ಹಿರಿಯರಾದ ವೀರಯ್ಯ ತೊಂಟದಾರ್ಯ ಮಠ ಇವರ ತಮ್ಮನ ಮಗ ಮೃತ ಶರಣಯ್ಯನವರು.
ಅವಳಿ ತಾಲೂಕಿನಲ್ಲಿ ಪತ್ರಿಕಾ ರಂಗದಲ್ಲಿ ಹೆಸರು ಮಾಡಿದ್ದ ಶರಣಯ್ಯ, ಸುದ್ದಿ ಮೂಲ, ವಿಸ್ತಾರ ನ್ಯೂಸ್, ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮದ ಸಹ ಸಂಸ್ಥಾಪಕ ಹಾಗೂ ಸಹ ಸಂಪಾದಕರಾಗಿದ್ದರು.