FASH NEWS : ಗದಗ- ವಾಡಿ ಪ್ರಥಮ ಹಂತದ ರೈಲು ಮಾರ್ಗ ಲೋಕಾರ್ಪಣೆ..!!

You are currently viewing FASH NEWS : ಗದಗ- ವಾಡಿ ಪ್ರಥಮ ಹಂತದ ರೈಲು ಮಾರ್ಗ ಲೋಕಾರ್ಪಣೆ..!!

ಪ್ರಜಾ ವೀಕ್ಷಣೆ ಸುದ್ದಿ :-

FASH NEWS : ಗದಗ- ವಾಡಿ ಪ್ರಥಮ ಹಂತದ ರೈಲು ಮಾರ್ಗ ಲೋಕಾರ್ಪಣೆ..!!

ಕೊಪ್ಪಳ : ನೂತನ ರೈಲ್ವೆ ಮಾರ್ಗ, ನಿಲ್ದಾಣ ನಿರ್ಮಾಣ ಸೇರಿದಂತೆ ಪ್ರತಿಯೊಂದು ಅಂಶಗಳು ಈ ಭಾಗದ ಜನರಲ್ಲಿ ಕುತೂಹಲ ಮೂಡಿಸಿದ್ದು ರೈಲು ಬಂಡಿ ಹಳಿ ಏರುವ ದಿನವನ್ನು ಕಾತುರದಿಂದ ಕಾಯುತ್ತಿದ್ದಾರೆ.

ವರ್ಷಾನುಗಟ್ಟಲೆ ತಡವಾದರೂ ಸಹ ಜನರು ನಿರೀಕ್ಷೆಗೆ ತಕ್ಕಂತೆ ತ್ವರಿತಗತಿಯಲ್ಲಿ ರೈಲ್ವೆ ಕಾಮಗಾರಿ ನಿರ್ಮಾಣಗೊಳ್ಳದಿದ್ದರೂ ಸಹ ಕುಷ್ಟಗಿ ಪಟ್ಟಣದ ರೈಲು ನಿಲ್ದಾಣದ ಗ್ರಾಮಗಾರಿ ಮಾತ್ರ ಪರಿತಗತಿಯಲ್ಲಿ ಸಂಪೂರ್ಣಗೊಂಡಿದ್ದು ಐತಿಹಾಸಿಕ ಸ್ಮಾರಕಗಳನ್ನು ನಿರೂಪಿಸುವ ಕುಂಚದ ಕಲೆಯನ್ನು ರೈಲು ನಿಲ್ದಾಣ ಕಟ್ಟಡ ಹೊಂದಿದ್ದು ಎಲ್ಲರ ಆಕರ್ಷಣೀಯ ಕೇಂದ್ರವಾದಂತಿದೆ.

       ಗದಗ- ವಾಡಿ ನೂತನ ರೈಲು ಮಾರ್ಗದ ತಳಕಲ್ ಜಂಕ್ಷನ್ ನಿಂದ ಕುಷ್ಟಗಿ ಪಟ್ಟಣದವರೆಗಿನ ಮೊದಲನೇ ಹಂತದ 60 ಕಿಲೋಮೀಟರ್ ಮಾರ್ಗ ಸಂಪೂರ್ಣಗೊಂಡಿದ್ದು. 2013 ಹದಿನಾಲ್ಕನೆಯ ಸಾಲಿನ ರೈಲ್ವೆ ಬಜೆಟ್ ನಲ್ಲಿ ಈ ಯೋಜನೆ ಘೋಷಣೆಯಾಗಿತ್ತು.

ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ರೈಲು ಮಾರ್ಗಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು ಕುಷ್ಟಗಿ ಪಟ್ಟಣದಲ್ಲಿ ರಾಜ್ಯರೈಲ್ವೆ ಸಚಿವ ವಿ ಸೋಮಣ್ಣ ಅವರಿಂದ ಹಸಿರು ನಿಶಾನೆ ತೋರಿಸುವದರೊಂದಿಗೆ ಲೋಕಾರ್ಪಣೆ ಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆಯ ಮಾಹಿತಿಯಿಂದ ತಿಳಿದು ಬಂದಿರುತ್ತದೆ.

Leave a Reply

error: Content is protected !!