BREAKING : ‘ಪಾಕ್‌ ಉಗ್ರ ಸ್ಥಾನ’ಗಳನ್ನು ಶುದ್ಧ ಮಾಡೋವರೆಗೂ ಯಾವುದೇ ಶಾಂತಿಯ ಮಾತಿಲ್ಲ : ಪ್ರಧಾನಿ ಮೋದಿ

You are currently viewing BREAKING : ‘ಪಾಕ್‌ ಉಗ್ರ ಸ್ಥಾನ’ಗಳನ್ನು ಶುದ್ಧ ಮಾಡೋವರೆಗೂ ಯಾವುದೇ ಶಾಂತಿಯ ಮಾತಿಲ್ಲ : ಪ್ರಧಾನಿ ಮೋದಿ

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :

BREAKING : ‘ಪಾಕ್‌ ಉಗ್ರ ಸ್ಥಾನ’ಗಳನ್ನು ಶುದ್ಧ ಮಾಡೋವರೆಗೂ ಯಾವುದೇ ಶಾಂತಿಯ ಮಾತಿಲ್ಲ : ಪ್ರಧಾನಿ ಮೋದಿ

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ : “ಆಪರೇಷನ್ ಸಿಂಧೂರ್” ದಾಳಿ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಮ್ಮ ದೇಶದ ವಿಜ್ಞಾನಿಗಳಿಗೆ, ಸೈನಿಕರಿಗೆ ನಾನು ಸೆಲ್ಯೂಟ್ ಹೇಳುತ್ತೇನೆ. ಆಪರೇಷನ್ ಸಿಂಧೂರವನ್ನು ಸೈನಿಕರು ಯಶಸ್ವಿಗೊಳಿಸಿದ್ದಾರೆ ಎಂದರು.

ದೇಶದ ಪ್ರತಿ ತಾಯಿ ಮತ್ತು ಸಹೋದರಿಯರಿಗೂ ಈ ಪರಾಕ್ರಮ ಸಮರ್ಪಣೆ. ಪಾಕಿಸ್ತಾನದ ಉಗ್ರ ಸ್ಥಾನಗಳನ್ನು ಶುದ್ಧ ಮಾಡುವವರೆಗೂ ಯಾವುದೇ ಶಾಂತಿಯ ಮಾತಿಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು.

ನೀರು ಮತ್ತು ರಕ್ತ ಒಂದೇ ಹಾದಿಯಲ್ಲಿ ಹರಿಯುವುದಿಲ್ಲ. ಹಾಗೆನೇ ವ್ಯಾಪಾರ ಮತ್ತು ಉಗ್ರವಾದ ಜೊತೆಯಾಗಿರಲು ಸಾಧ್ಯವಿಲ್ಲ. ನೀವು ಭಯೋತ್ಪಾದನೆ ನಿಲ್ಲಿಸದಿದ್ದರೆ, ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ. ಯಾವುದೇ ನ್ಯೂಕ್ಲಿಯರ್ ಬ್ಲಾಕ್ ಮೇಲ್ ಗೆ ನಾವು ಹೆದರಲ್ಲ ಉಗ್ರರು, ಉಗ್ರರಿಗೆ ಬೆಂಬಲ ನೀಡುವವರು ಇಬ್ಬರೂ ಒಂದೇ ಎಂದರು.

ಈ ಆಪರೇಷನ್ ಸಿಂಧೂರ್ ಒಂದು ಮಾನದಂಡಷ್ಟೆ, ಮೇಡ್ ಇನ್ ಇಂಡಿಯಾ ರಕ್ಷಣಾ ವ್ಯವಸ್ಥೆಯ ಸಮಯ ಬಂದಿದೆ. ಪಾಕಿಸ್ತಾನ ಬದುಕಬೇಕು ಅಂದರೆ ಉಗ್ರವಾದ ನಿಲ್ಲಿಸಬೇಕು. ಪಾಕಿಸ್ತಾನದ ಉಗ್ರ ಸ್ಥಾನಗಳನ್ನು ಶುದ್ಧ ಮಾಡಲೇಬೇಕು. ಅಲ್ಲಿಯವರೆಗೆ ಶಾಂತಿಯ ಯಾವುದೇ ಮಾತುಕತೆ ಇಲ್ಲ ಎಂದು ನೇರವಾಗಿ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿಯವರು ಎಚ್ಚರಿಕೆ ನೀಡಿದರು.

Leave a Reply

error: Content is protected !!