LOCAL NEWS : ತಾಲೂಕು ದಂಡಾಧಿಕಾರಿ ಕಚೇರಿಗೆ ದಿಡೀರನೆ ಭೇಟಿ ನೀಡಿದ ಲೋಕಾಯುಕ್ತರು..!

You are currently viewing LOCAL NEWS : ತಾಲೂಕು ದಂಡಾಧಿಕಾರಿ ಕಚೇರಿಗೆ ದಿಡೀರನೆ ಭೇಟಿ ನೀಡಿದ ಲೋಕಾಯುಕ್ತರು..!

ಪ್ರಜಾವೀಕ್ಷಣೆ ಸುದ್ದಿ :-

LOCAL NEWS : ತಾಲೂಕು ದಂಡಾಧಿಕಾರಿ ಕಚೇರಿಗೆ ದಿಡೀರನೆ ಭೇಟಿ ನೀಡಿದ ಲೋಕಾಯುಕ್ತರು..!

ಶಿರಹಟ್ಟಿ : ತಾಲೂಕು ದಂಡಾಧಿಕಾರಿ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ಕೊಟ್ಟು ಸಿಬ್ಬಂದಿಗಳಿಗೆ ಶಾಕ್ ನೀಡಿದ್ದಾರೆ. ಶಿರಹಟ್ಟಿ ತಾಲೂಕು ತಹಶೀಲ್ದಾರ್ ಕಚೇರಿಯ ಪ್ರತಿಯೊಂದು ವಿಭಾಗಗಳ ಕಡತಗಳನ್ನು ಪರಿಶೀಲಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ್ ಬಿರಾದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಸಿಬ್ಬಂದಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಬೇಕಾಬಿಟ್ಟಿಯಾಗಿ ತಿರಸ್ಕರಿಸುವುದರಿಂದ ಬಡವರಿಗೆ ತೊಂದರೆಯಾಗುತ್ತದೆ ಆದ್ದರಿಂದ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ, ವಿಲೇ ಮಾಡಲು ಸೂಚಿಸಿದರು. ಬೆಳೆ ದೃಡೀಕರಣ ಪ್ರಮಾಣ ಪತ್ರ ನೀಡುವಲ್ಲಿ ಹಲವಾರು ದೋಷಗಳಿದ್ದು ಉತಾರಿನಲ್ಲಿ ಒಂದು ಬೆಳೆ ದೃಡೀಕರಣ ಪ್ರಮಾಣ ಪತ್ರದಲ್ಲಿ ಒಂದು ಬೆಳೆ ನಮೊದಾಗಿದ್ದು ಕಂಡು ಕೆಂಡಮಂಡಲರಾದರು. ಕೂಡಲೇ ಸರಿಪಡಿಸುವ ಕಾರ್ಯ ಮಾಡಬೇಕುಂದು ತಾಕಿದ್ದು ಮಾಡಿದರು.

ನೆಮ್ಮದಿ ಕೇಂದ್ರದ ಕಂಪ್ಯೂಟರ್ ಆಪರೇಟರ್ ಇಬ್ರಾಹಿಂ ಬನಿಯಾನ್ ಅವರ ಕಾರ್ಯವೈಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಇನ್ಸ್ಪೆಕ್ಟರ್ ಫಕೀರೇಶ ಕೌಟಿಗಿ, ಜವಳಿ, ಸಂಗನಾಳ, ನೀಲಕಂಠಪ್ಪ, ಹಸನ್, ದಿಡಗೂರು ಇದ್ದರು

ವರದಿ: ವೀರೇಶ್ ಗುಗ್ಗರಿ

Leave a Reply

error: Content is protected !!