LOCAL NEWS : ಇನ್ನುಳಿದ 3 ವರ್ಷ ಅಧಿಕಾರವಧಿಯಲ್ಲಿ ಅಭಿವೃದ್ಧಿಗಳ ಸುನಾಮಿ ಅಲೆ ಎಬ್ಬಿಸುತ್ತೇನೆ : ಶಾಸಕ ರಾಯರೆಡ್ಡಿ

You are currently viewing LOCAL NEWS : ಇನ್ನುಳಿದ 3 ವರ್ಷ ಅಧಿಕಾರವಧಿಯಲ್ಲಿ ಅಭಿವೃದ್ಧಿಗಳ ಸುನಾಮಿ ಅಲೆ ಎಬ್ಬಿಸುತ್ತೇನೆ : ಶಾಸಕ ರಾಯರೆಡ್ಡಿ

ಪ್ರಜಾ ವೀಕ್ಷಣೆ ಸುದ್ದಿ :-

LOCAL NEWS : ಇನ್ನುಳಿದ 3 ವರ್ಷ ಅಧಿಕಾರವಧಿಯಲ್ಲಿ ಅಭಿವೃದ್ಧಿಗಳ ಸುನಾಮಿ ಅಲೆ ಎಬ್ಬಿಸುತ್ತೇನೆ : ಶಾಸಕ ಬಸವರಾಜ ರಾಯರೆಡ್ಡಿ

ಕುಕನೂರು : ಕ್ಷೇತ್ರದಲ್ಲಿ ಇನ್ನುಳಿದ 3 ವರ್ಷ ಅಧಿಕಾರವಧಿಯಲ್ಲಿ ಅಭಿವೃದ್ಧಿಗಳ ಸುನಾಮಿ ಅಲೆ ಎಬ್ಬಸಲಿದ್ದೇನೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ತಾಲೂಕಿನ ನೆಲಜೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಗ್ರಂಥಾಲಯದ ಕಟ್ಟಡ ಹಾಗೂ ಬುದ್ಧ ಬಸವ ಅಂಬೇಡ್ಕರ್ ಭವನದ ಶಂಕುಸ್ಥಾಪನೆ, ಮಂಗಳೂರು ಗ್ರಾಮದ ಕೆಪಿಎಸ್ ಶಾಲೆ ನೂತನ ಕಟ್ಟಡದ ಉದ್ಘಾಟನೆ ಹಾಗೂ ರಾವಣಕಿ ಗ್ರಾಮದ ಪ್ರೌಢಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ವೇದಿಕೆಯ ಉದ್ದೇಶಿಸಿ ಮಾತನಾಡಿದ ಶಾಸಕ ರಾಯರೆಡ್ಡಿ, ‘ಕ್ಷೇತ್ರದಲ್ಲಿ ನಾನು 2013 ರಿಂದ 18 ರವರೆಗೆ ಶಾಸಕನಾಗಿದ್ದಾಗ ಕೆಲ ಕಾಮಗಾರಿಗಳು ಅಪೂರ್ಣಗೊಂಡಿದ್ದು ಅದನ್ನು ನಂತರದ ಶಾಸಕರು ತೆರಿಗೆಯು ಸಹ ನೋಡದೆ ನಿರ್ಲಕ್ಷಕ್ಳಪಡಿಸಿದ್ದು, ಅವರ ಮೈನಸ್ ರಾಜಕಾರಣದಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಜೊತೆಗೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಬಾಕಿ ಉಳಿಸಿದ್ದ ಯೋಜನೆಗಳ ಬಿಲ್ ಬಾಕಿ ಉಳಿಸಿದ್ದರಿಂದ ಅಭಿವೃದ್ಧಿಯಲ್ಲಿ ಕೊಂಚ ಕುಂಠಿತವಾಗಿದ್ದು, ಸದ್ಯ ಎಲ್ಲಾ ಬಿಲ್ ಗಳನ್ನು ಪರೀಸಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಗಳ ಸುನಾಮಿಯ ಹರಿಯಲಿದೆ ಎಂದು ಹೇಳಿದರು.

ಬೆರೆ ಪಕ್ಷದ ಶಾಸಕರು ಕ್ಷೇತ್ರದಲ್ಲಿ ಆಯ್ಕೆಗೊಂಡಾಗ ಬಾಕಿ ಉಳಿದ ಕಾಮಗಾರಿಗಳು ಅಷ್ಟಕ್ಕೇ ಅಪೂರ್ಣಗೊಂಡು ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗುತ್ತವೆ ಆದರೆ ನಾನು ಶಾಸಕರಾಗಿ ಆಯ್ಕೆಯಾದಾಗ ಅವರು ಅಪೂರ್ಣಗೊಳಿಸಿದ ಕಾಮಗಾರಿಗಳ ಜೊತೆ ನನ್ನ ಹಳೆಯ ಅವಧಿಯ ಕಾಮಗಾರಿಗಳನ್ನು ಸಹ ಪೂರ್ಣಗೊಳಿಸಬೇಕಾಗಿದ್ದು ಇದು ಮತದಾರರು ನನಗೆ ಕೊಟ್ಟ ಜವಾಬ್ದಾರಿಯಾಗಿರುತ್ತದೆ. ಜೊತೆಗೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರವು ಕಾಮಕರಿಗೆಗಳನ್ನು ಘೋಷಿಸಿ ಬಿಲ್ ಪಾವತಿಸದೆ ಹೋಗಿದ್ದು ಅವೆಲ್ಲ ಆಡಳಿತ ನಡೆಸಲು ಕೊಂಚ ಭಾರವಾಗಿದ್ದು ಇನ್ನು ಮುಂದೆ ಯಾವುದೇ ತರಹದಲ್ಲಿ ಅಭಿವೃದ್ಧಿ ಕುಂಠಿತವಾಗುವುದಿಲ್ಲ ಬದಲಿಗೆ ಸಿದ್ದರಾಮಯ್ಯನವರಿಂದ ಅಭಿವೃದ್ಧಿಯು ಸುನಾಮಿಯಾ ತರಹ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.

ಮುಂದಿನ 15 ದಿನಗಳಲ್ಲಿ ವರವಿ ಕುದುರೆಮೋತಿ ಸೇರಿದಂತೆ 19 ಕೆರೆ ತುಂಬಿಸುವ ಕಾರ್ಯ ಸಂಪೂರ್ಣ ಗೊಳ್ಳಲಿದ್ದು ಒಟ್ಟು 38 ಕೆರೆಗಳ ತುಂಬಿಸುವ ಯೋಜನೆ ಕೈಗೊಂಡಿರುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಕೆರೆ ನಿರ್ಮಾಣ, ಬಸ್ ನಿಲ್ದಾಣ ಕಾಮಗಾರಿ, ಸಮುದಾಯ ಭವನಗಳ ಕಾಮಗಾರಿಗಾಗಿ ಭೂಮಿಯ ಕೊರತೆ ಎದ್ದು ಕಾಣುತ್ತಿದ್ದು ಜನತೆ ಸರ್ಕಾರ ನಿಗದಿಪಡಿಸಿದ ದರಕ್ಕೆ ಭೂಮಿ ನೀಡಿ ಸಹಕರಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಜನರೇ ಸಹಕಾರ ನೀಡದಿದ್ದಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ನಾನು ಅಧಿಕಾರದ ಮೋಜಿನಿಂದ ರಾಜಕೀಯಕ್ಕೆ ಬಂದಿಲ್ಲ. ಮನೋತ್ ತೃಪ್ತಿಗಾಗಿ ರಾಜಕೀಯ ಕಾಯಕ ಮಾಡುತ್ತಿದ್ದೇನೆ ದಯವಿಟ್ಟು ಅಭಿವೃದ್ಧಿಗೆ ಬೆಂಬಲ ನೀಡಿ ಎಂದು ಹೇಳಿದರು. ಕುಕನೂರು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಗೌಡ ಮಾತನಾಡುತ್ತಾ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 40,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾತಿ ಹೊಂದಿದ್ದು ಹೆಮ್ಮೆಯ ವಿಷಯವಾಗಿದ್ದು. ಅವಳಿ ತಾಲೂಕುಗಳಲ್ಲಿ ಎಲ್ ಕೆ ಜಿ ಇಂದ ನಾಟಕಕೊತರ ಪದವಿ ವರೆಗೆ ಸರ್ಕಾರದ ವಿದ್ಯಾಲಯಗಳನ್ನು ಹೊಂದಿರುವುದು ಕ್ಷೇತ್ರದಲ್ಲಿ ಶಿಕ್ಷಣದ ಯಶಸ್ವಿ ರಹದಾರಿಗೆ ಶಾಸಕರು ನೀಡಿದ ಅತ್ಯುತ್ತಮ ಕೊಡುಗೆಯಾಗಿದೆ.

ಜೊತೆಗೆ ಕ್ಷೇತ್ರದಲ್ಲಿ 63 ಪ್ರೌಢಶಾಲೆ ಗಳನ್ನು ಹೊಂದಿದ್ದು ಮೂರು ವರ್ಷದ ಅವಧಿಯಲ್ಲಿ 18 ಪ್ರೌಢಶಾಲೆಗಳು ಮಂಜೂರಾಗಿವೆ. ಜಿಲ್ಲೆಯಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರವಾಗಿದ್ದು, ಹಿಂದುಳಿದ ಕುಟುಂಬದ ಅಭಿವೃದ್ಧಿಗಾಗಿ 16 ಮುರಾರ್ಜಿ ವಸತಿ ಶಾಲೆಯನ್ನು ಹೊಂದಿದೆ. ರಾಜ್ಯದಲ್ಲಿಯೇ ವಿನೂತನವಾಗಿ ಪ್ರಾರಂಭಿಸಲಾಗಿರುವ ಆಶ್ರಮ ಶಾಲೆ ಯಲಬುರ್ಗಾ ತಾಲೂಕಿನ ಯಡ್ಡೋನಿ ಗ್ರಾಮಕ್ಕೆ ನಿಯೋಜನೆಗೊಳಿಸಿರುವುದು ನಿಜಕ್ಕೂ ಸಂತಸದ ವಿಷಯವಾಗಿದ್ದು ಅಕ್ಷರ ಆವಿಷ್ಕಾರದೊಂದಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ 22 ಕೋಟಿ ಅನುದಾನವನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ. ಕ್ಷೇತ್ರದಲ್ಲಿ ತಾಂತ್ರಿಕ ಮಹಾವಿದ್ಯಾಲಯದ ಜೊತೆಗೆ ಕೌಶಲ್ಯ ಕೇಂದ್ರವು ಕಾರ್ಯನಿರ್ವಹಿಸುತ್ತಿರುವುದು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹನುಮಂತ ಗೌಡ ಚಂಡೂರು, ಕೆರಿಬಸಪ್ಪ ನಿಡುಗುಂದಿ, ಡಾ. ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ರೆಹಿಮಾನ್ ಸಾಬ್ ಮಕಪ್ಪನವರ್ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ, ಸಕ್ರಪ್ಪ ಚಿನ್ನುರ, ಉಪಾಧ್ಯಕ್ಷರು ಹಾಗೂ ಸದಸ್ಯರು, ತಹಸಿಲ್ದಾರ ಪ್ರಾಣೇಶ ಹೆಚ್,ತಾಲೂಕ ಪಂಚಾಯತಿ ಸಂತೋಷ್ ಬಿರಾದರ,ಅಭಿವೃದ್ಧಿ ಅಧಿಕಾರಿಗಳಾದ ಪರಶುರಾಮ ನಾಯಕ, ನೀಲಂ ಚಳಗೇರಿ, ಅನಿಲ್ ಪಾಟೀಲ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!