FLASH NEWS : ಕೊಪ್ಪಳ : ವಿಚಿತ್ರ ಪ್ರೇಮ ಕಥೆ : ಪ್ರಾಣಭಯದಿಂದ ಎಸ್ ಪಿ ಮೊರೆ ಹೋದ ಯುವ ಪ್ರೇಮಿಗಳು..!

You are currently viewing FLASH NEWS : ಕೊಪ್ಪಳ : ವಿಚಿತ್ರ ಪ್ರೇಮ ಕಥೆ : ಪ್ರಾಣಭಯದಿಂದ ಎಸ್ ಪಿ ಮೊರೆ ಹೋದ ಯುವ ಪ್ರೇಮಿಗಳು..!

ಪ್ರಜಾ ವೀಕ್ಷಣೆ ಸುದ್ದಿ : 

FLASH NEWS : ಪ್ರಾಣಭಯದಿಂದ ಎಸ್ ಪಿ ಮೊರೆ ಹೋದ ಯುವ ಪ್ರೇಮಿಗಳು..!

ಕೊಪ್ಪಳ : ಮದುವೆಯಾಗಿ 15 ದಿನಗಳ ಒಳಗೆ ಗಂಡನನ್ನು ತೊರೆದು ಪ್ರೇಮಿಯ ಜೊತೆ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಪೊಲೀಸ್ ಎಸ್ಪಿ ಕಚೇರಿಗೆ ಪ್ರೇಮಿಗಳಿಬ್ಬರು ಬಂದು ರಕ್ಷಣೆ ಕೋರಿದ ಅಪರೂಪದ ಘಟನೆ ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಬೆಂಗಳೂರು ಮಹಾನಗರದಲ್ಲಿ ಜೀವನೋಪಾಯಕ್ಕಾಗಿ ಗಾರೆ ಕೆಲಸಕ್ಕಾಗಿ ಸೇರಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರಸಂಗನಾಳ ಗ್ರಾಮದ ಯುವಕ ವೆಂಕಟೇಶನ ಜೊತೆ ಮೂಲತಃ ಆಂಧ್ರಪ್ರದೇಶದ ಕಾಮಗಾರಿಯ ಲೇಬರ್ ಕಾಂಟ್ರಾಕ್ಟರ್ ಮಗಳು ತಿರುಪತಮ್ಮಳ ಜೊತೆ ಪ್ರೇಮ ಚಿಗುರೋಡಿದು ಪ್ರೇಮದ ಮತ್ತಿನಲ್ಲಿ ತೇಲುತ್ತಿರುವ ಸಂದರ್ಭದಲ್ಲಿ ಯುವತಿಯ ಪೋಷಕರಿಗೆ ತಮ್ಮ ಮಗಳು ಗಾರೆ ಕೆಲಸದವನ ಜೊತೆ ಪ್ರೇಮದಲ್ಲಿ ಮುಳುಗಿದ್ದಾಳೆ ಎಂಬ ಸತ್ಯ ಗೊತ್ತಾಗುತ್ತಿದ್ದಂತೆಯೇ ಆ ಯುವತಿಯನ್ನು ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಕರೆದು ಕೆಲ ತಿಂಗಳ ನಂತರ ಮದುವೆ ಮಾಡಿ ಕೊಟ್ಟಿರುತ್ತಾರೆ.

ಆದರೆ, ಮದುವೆಯಾಗಿ 15 ದಿನಗಳ ಒಳಗೆ ತನ್ನ ಪ್ರಿಯಕರನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಆಂಧ್ರದಿಂದ ಬಂದು ಪ್ರೇಮಿ ವೆಂಕಟೇಶನನ್ನು ತಿರುಪತಿಮ್ಮ ಸೇರಿಕೊಂಡು ಬಳಿಕ ಕೊಪ್ಪಳ ಜಿಲ್ಲಾ ವರಿಷ್ಠಾಧಿಕಾರಿಗೆ ಕಚೇರಿಗೆ ಆಗಮಿಸಿ ತಮ್ಮ ಕುಟುಂಬದವರು ಒಪ್ಪಿಗೆ ಇಲ್ಲದ ಮದುವೆ ಮಾಡಿಸಿದ್ದು, ನನಗೆ ರಕ್ಷಣೆ ಕೊಡಬೇಕು ಅಷ್ಟಕ್ಕೂ ಕುಟುಂಬಸ್ಥರು ಮದುವೆ ಮಾಡುವ ಮುನ್ನವೇ ಪ್ರಿಯಕರ ವೆಂಕಟೇಶನಿಂದ ತಾಳಿ ಕಟ್ಟಿಸಿಕೊಂಡಿದ್ದು, ನನ್ನ ಪತಿ ವೆಂಕಟೇಶನ ಆಗಿರುವುದರಿಂದ ನನ್ನ ಕುಟುಂಬಸ್ಥರಿಂದ ನಮಗೆ ಜೀವ ಭಯವಿದ್ದು, ರಕ್ಷಣೆ ನೀಡಬೇಕು ಎಂದು ಅಂಗಲಾಚಿಕೊಂಡಿರುತ್ತಾರೆ.

ಕೊನೆಯಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ತಿರುಪತಮ್ಮನ ಪಾಲಕರು ಹಾಗೂ ಯುವ ಪ್ರೇಮಿಗಳ ನಡುವೆ ಮಾತುಕತೆ ನಡೆದಿದ್ದು, ಇವತ್ತಿಗೂ ತನ್ನ ಪ್ರಿಯಕರನ ಜೊತೆಗೆ ಹೋಗುವುದಾಗಿ ಪೊಲೀಸರ ಸಮಕ್ಷಮದಲ್ಲಿ ಹೇಳಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪಾಲಕರು ಮರಳಿ ಹೋಗಿರುವುದರಿಂದ ಪ್ರೇಮಿಗಳ ಒಂದಾಗುವಿಕೆಗೆ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.

Leave a Reply

error: Content is protected !!