SHOCKING NEWS : ಎಚ್ಚರ..ಎಚ್ಚರ…!! ನಾಯಿ ಕಡಿತ, 19 ಸಾವು : ಅರೋಗ್ಯ ಇಲಾಖೆ ಮಾಹಿತಿ..!

You are currently viewing SHOCKING NEWS : ಎಚ್ಚರ..ಎಚ್ಚರ…!! ನಾಯಿ ಕಡಿತ, 19 ಸಾವು : ಅರೋಗ್ಯ ಇಲಾಖೆ ಮಾಹಿತಿ..!

ಪ್ರಜಾ ವೀಕ್ಷಣೆ ಸುದ್ದಿ : 

SHOCKING NEWS : ಎಚ್ಚರ..ಎಚ್ಚರ…!! ನಾಯಿ ಕಡಿತ, 19 ಸಾವು : ಅರೋಗ್ಯ ಇಲಾಖೆ ಮಾಹಿತಿ..!


ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ರಾಜ್ಯದಲ್ಲಿ ಚಿಕ್ಕ ಮಕ್ಕಳು ಸೇರಿ ಎಲ್ಲರ ಮೇಲು ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು. ಇದೀಗ ಆರೋಗ್ಯ ಇಲಾಖೆ ಬೆಚ್ಚಿಬಿಳಿಸುವ ಮಾಹಿತಿಯೊಂದನ್ನು ಬಿಡುಗಡೆ ಮಾಡಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 2.3 ಲಕ್ಷಕ್ಕೂ ಅಧಿಕ ಜನರಿಗೆ ನಾಯಿ ಕಡಿತ ಪ್ರಕರಣ ದಾಖಾಲಾಗಿವೆ. ಇದರಲ್ಲಿ 19 ರೇಬೀಸ್ ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೌದು, 2025ರ ಜ.1ರಿಂದ ಜೂ.30ರವರೆಗೆ ಬರೋಬ್ಬರಿ 2,31,091 ಜನರಿಗೆ ನಾಯಿ ಕಡಿತ ವರದಿಯಾಗಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 1,69,672 ನಾಯಿ ಕಡಿತ ಮತ್ತು 18 ರೇಬೀಸ್ ಸಾವು ವರದಿಯಾಗಿದ್ದವು ಎಂಬ ಮಾಹಿತಿ ಇದೆ. 2024ರಲ್ಲಿ ರಾಜ್ಯದಲ್ಲಿ ಇಡೀ ವರ್ಷದಲ್ಲಿ 3.6 ಲಕ್ಷ ಜನರಿಗೆ ನಾಯಿ ಕಡಿತ ಹಾಗೂ 42 ರೇಬೀಸ್ ಸಾವು ಸಂಭವಿಸಿದ್ದವು. 2023ರ ಮೊದಲ ಆರು ತಿಂಗಳ ಅವಧಿಗೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.36.20ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಆಘಾತಕಾರಿ ಮಾಹಿತಿಯೊಂದು ಆರೋಗ್ಯ ಇಲಾಖೆ ನೀಡಿದೆ.

ನಾಯಿ ಕಡಿತವನ್ನು ಅಧಿಸೂಚಿತ ಕಾಯಿಲೆ ಪಟ್ಟಿಗೆ 2022ರಲ್ಲಿ ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿತ್ತು. ಅದಾದ ಬಳಿಕ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ನಾಯಿ ಕಡಿತ ಹಾಗೂ ದೃಢಪಟ್ಟ ರೇಬೀಸ್‌ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ವರದಿ ಮಾಡುತ್ತಿವೆ. 2022ರ ಬಳಿಕ ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಈ ವರ್ಷ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Leave a Reply

error: Content is protected !!