LOCAL NEWS : ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ!

You are currently viewing LOCAL NEWS : ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ!

ರಾಯಚೂರು ವರದಿ..

LOCAL NEWS : ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್ ; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ!

ತಾತಪ್ಪ ವಿರುದ್ಧ ಬಾಲ್ಯವಿವಾಹ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪತ್ನಿ ಗದ್ದೆಮ್ಮಳ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪನಿಗೆ ಗಡುವು ನೀಡಲಾಗಿದೆ. ಇನ್ನು ರಾಯಚೂರು ತಾಲೂಕಿನ ದೇವಸುಗೂರು ನಿವಾಸಿಯಾಗಿರುವ ತಾತಪ್ಪನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪತ್ರ ಬರೆದಿದೆ.

ರಾಯಚೂರು: ರಾಯಚೂರಿನ ಗುರ್ಜಾಪುರ ಬ್ಯಾರೇಜ್ ಬಳಿ ಫೋಟೊ ತೆಗೆಯುವ ನೆಪದಲ್ಲಿ ಪತಿಯನ್ನು ಪತ್ನಿ ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣ ಬೆನ್ನಲ್ಲೇ ತಾತಪ್ಪ, ಪತ್ನಿ ಗದ್ದೆಮ್ಮಳಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ಆದರೆ, 16 ವರ್ಷದ ಅಪ್ರಾಪ್ತ ಬಾಲಕಿಯನ್ನು ತಾತಪ್ಪ ಮದುವೆಯಾಗಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಇದರಿಂದ ತಾತಪ್ಪನಿಗೆ ಸಂಕಷ್ಟ ಎದುರಾಗಿದೆ.

ತಾತಪ್ಪ ವಿರುದ್ಧ ಬಾಲ್ಯವಿವಾಹ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪತ್ನಿ ಗದ್ದೆಮ್ಮಳ ವಯಸ್ಸಿನ ದಾಖಲಾತಿ ನೀಡುವಂತೆ ಪತಿ ತಾತಪ್ಪನಿಗೆ ಗಡುವು ನೀಡಲಾಗಿದೆ. 15 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತ ವಯಸ್ಸಿನ ಬಾಲಕಿ ಗದ್ದೆಮ್ಮಳನನ್ನು ತಾತಪ್ಪ ಮದುವೆ ಮಾಡಿಕೊಂಡಿರುವ ಬಗ್ಗೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಂಡ ಪತ್ತೆ ಮಾಡಿದ್ದು, ಶಾಲಾ ದಾಖಲಾತಿ ಪ್ರಕಾರ ತಾತಪ್ಪನ ಪತ್ನಿ ಗದ್ದೆಮ್ಮ ಅಪ್ರಾಪ್ತೆ ಎನ್ನುವುದು ದೃಢವಾಗಿದೆ. ಈ ಸಂಬಂಧ ರಾಯಚೂರು ತಾಲೂಕಿನ ದೇವಸುಗೂರು ನಿವಾಸಿಯಾಗಿರುವ ಪತಿ ತಾತಪ್ಪನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಪತ್ರ ಬರೆದಿದೆ.

ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪತ್ರ ತಲುಪುತ್ತಿದ್ದಂತೆಯೇ ಎಚ್ಚೆತ್ತ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ತಾತಪ್ಪನ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಸಿಡಿಪಿಒ ಮತ್ತು ಗ್ರಾಮ ಪಂಚಾಯಿ್ತಿ ಸಿಬ್ಬಂದಿ ಭೇಟಿ ನೀಡಿ ವಿವಾಹದ ಕುರಿತು ತಾತಪ್ಪನ ಕುಟುಂಬದ ಪ್ರಮುಖರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ತಾತಪ್ಪ, ಪತ್ನಿ ಗದ್ದೆಮ್ಮಗಳ ಬಗ್ಗೆ ಯಾವುದೇ ದಾಖಲೆಗಳನ್ನು ನೀಡದೇ ಕೇವಲ ಮೌಖಿಕವಾಗಿ ಮಾಹಿತಿ ನೀಡಿದ್ದಾನೆ.

ಇನ್ನು ಪತ್ನಿ ಗದ್ದೆಮ್ಮಗಳ ಅಧಿಕೃತ ದಾಖಲಾತಿಗಳನ್ನು ನೀಡುವಂತೆ ತಾತಪ್ಪನಿಗೆ ಕೇಳಿದ್ದಾರೆ. ಇದಕ್ಕೆ ತಾತಪ್ಪ ಕುಟುಂಬಸ್ಥರು, ದಾಖಲೆ ನೀಡಲು 2 ದಿನ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಜುಲೈ 21ರಂದು ದಾಖಲಾತಿಗಳನ್ನು ಒದಗಿಸಬೇಕಿದೆ. ಒಂದು ವೇಳೆ ದಾಖಲೆಗಳನ್ನು ನೀಡದಿದ್ದರೆ ಪತಿ ತಾತಪ್ಪ ಹಾಗೂ ಕುಟುಂಬಸ್ಥರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಅಡಿಯಲ್ಲಿ ಎಫ್​ಐಆರ್ ದಾಖಲು ಸಾಧ್ಯತೆ ಇದೆ.

ವರದಿ:- ಮಂಜುನಾಥ ಕುಂಬಾರ

 

Leave a Reply

error: Content is protected !!