ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ:- ಸತ್ಯಮ್ಮ (ತಹಶೀಲ್ದಾರ್)..

You are currently viewing ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ:- ಸತ್ಯಮ್ಮ (ತಹಶೀಲ್ದಾರ್)..
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 38;

ಮುದಗಲ್ಲ ವರದಿ..

LOCAL NEWS : ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ:- ತಹಶೀಲ್ದಾರ್ ಸತ್ಯಮ್ಮ 

ಮುದಗಲ್ಲ : ಪಟ್ಟಣದ ಲಿಂಗಸೂರನ ತಹಶೀಲ್ದಾರ್ ಸತ್ಯಮ್ಮ ಮಂಗಳವಾರ ಮುದಗಲ್ಲ ನಾಡ ಕಾಯಾ೯ಲಯಕ್ಕೆ ಭೇಟಿ ನೀಡಿ ಕಚೇರಿಯ ಸಮಸ್ಯೆ, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

ಸರ್ಕಾರ ರೈತರಿಗೆ ಉಪಯೋಗವಾಗುವ ಪೌತಿ ಖಾತೆ ಆಂದೋಲನ (ಇ-ಪೌತಿ) ಜಾರಿಗೆ ತಂದಿದ್ದು ಮುದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸೌಲಭ್ಯ ಪಡೆಯುವಂತೆ ತಹಸೀಲ್ದಾ‌ರ್ ಸತ್ಯಮ್ಮ ಮಾಹಿತಿ ನೀಡಿದರು ಪಹಣಿ ಪತ್ರಿಕೆಯಲ್ಲಿ ಪೌತಿ ಆದಂತಹ ಖಾತೆದಾರರ ಹೆಸರನ್ನು ತೆಗೆದು ಅವರ ವಂಶಸ್ಥರ ಹೆಸರನ್ನು ವಂಶವೃಕ್ಷ ಪ್ರಮಾಣ ಪತ್ರದ ಪ್ರಕಾರ ದಾಖಲು ಮಾಡಲು ಅವಕಾಶ ಕಲ್ಪಿಸಲಾಗಿದ್ದು, ತಾಲೂಕಿನಲ್ಲಿ 1,1000 ಕ್ಕೂ ಅಧಿಕ ಪೌತಿ ಖಾತೆದಾರರಿರುವ ಮಾಹಿತಿ ಇದ್ದು ಇದರಿಂದ ಎಲ್ಲ ರೈತರಿಗೆ ಬ್ಯಾಂಕ್ ಸಾಲ ಪಡೆಯಲು, ಬೆಳೆ ವಿಮೆ ಪಡೆಯಲು ಹಾಗೂ ಇನ್ನಿತರ ಸೌಲಭ್ಯ ಪಡೆಯಲು ಸಹಕಾರಿಯಾಗಲಿದ್ದು ರೈತರು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಪೌತಿ ಖಾತೆ ಮಾಡಿ ಕೊಳ್ಳುವಂತೆ ತಹಸೀಲ್ದಾರ್ ಕುಮಾರಿ ಸತ್ಯಮ್ಮ ತಿಳಿಸಿದ್ದರು.

ಮಂಗಳವಾರ ಕಚೇರಿಗೆ ಭೇಟಿ ಮುದಗಲ್ಲ ನಾಡ ಕಾಯಾ೯ಲಯಕ್ಕೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಛೇರಿಯ ಪದೇ ಪದೇ ತಾಂತ್ರಿಕ ಸಮಸ್ಯೆ, ಮಳೆಯಿಂದ ಕಟ್ಟಡ ಸೊರುತ್ತಿರುವ ಬಗ್ಗೆ ಮಾಹಿತಿ ಹಾಗೂ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದರು. ನಂತರ ಆಧಾರ್ ನೋಂದಣಿ, ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆದರು.

ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ತಹಶೀಲ್ದಾರ್ ಸತ್ಯಮ್ಮ ಅವರು ನೀಡಿದರು.

ಕಛೇರಿಯಲ್ಲಿ ಸಿಬ್ಬಂದಿಯ ಕೊರತೆ, ಸಾರ್ವಜನಿಕರಿಗೆ ಒದಗಿಸುವ ಸೇವೆ, ಜನರ ಕುಂದು ಕೊರತೆಗಳನ್ನು, ಆಡಳಿತದ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಿ ಅದರ ಸುಧಾರಣೆಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.

ಉಪ ತಹಶೀಲ್ದಾರ್ ತುಳಜಾರಾಮ ಸಿಂಗ್, ಕಂದಾಯ ನಿರೀಕ್ಷಕ ಶಂಕ್ರಪ್ಪ ಪಟ್ಟಣಶೆಟ್ಟಿ, ದಲಿತ ಮುಖಂಡ ಬಸವರಾಜ ಬಂಕದಮನೆ ಸೇರಿದಂತೆ ಕಛೇರಿಯ ಹಾಗೂ ಸಿಬ್ಬಂದಿ ಹಾಜರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!