“ಗಂಗಾವತಿ | ಹಾವು ಕಡಿದು ಮಹಿಳೆ ಸಾವು : ಪರಿಹಾರಕ್ಕೆ ಸ್ಥಳೀಯರ ಒತ್ತಾಯ”
ಪ್ರಜಾ ವೀಕ್ಷಣೆ ಡಸ್ಕ್ ನ್ಯೂಸ್ :
ಗಂಗಾವತಿ : ಹಾವು ಕಡಿದು ಬಡ ಕೂಲಿ ಕಾರ್ಮಿಕ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಗಂಗಾವತಿ ತಾಲ್ಲೂಕಿನ ಮಲ್ಲಾಪೂರ ಗ್ರಾಮದ ರಾಂಪೂರ ಸೀಮಾದ ಹೊಲಯೊಂದರಲ್ಲಿ ಶನಿವಾರ ನಡೆದಿದೆ.
ಗ್ರಾಮದ ಭೋವಿ ವಡ್ಡರ್ ಸಮಾಜದ ನಿಂಗಮ್ಮ(37) ಗಂಡ ಭೋಜಪ್ಪ ಎನ್ನುವ ಮೃತರಾಗಿರುವ ಮಹಿಳೆ ತಿಳಿದು ಬಂದಿದೆ.
ಜೀವನ ನಿರ್ವಹಣೆಗಾಗಿ ಎಂದಿನಂತೆ ರಾಂಪೂರ ಸೀಮಾದ ಹೊಲದ ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಗದ್ದೆಯಲ್ಲಿ ಕಸ ಕೀಳುತ್ತಿರುವಾಗ ಬೃಹತ್ ಗಾತ್ರದ ನಾಗರ ಹಾವುಯೊಂದು ಏಕಾಏಕಿ ಕಾಲಿಗೆ ಕಚ್ಚಿದೆ. ಕಚ್ಚಿದ ಕೂಡಲೇ ಗಮನಕ್ಕೆ ಬಂದಿದ್ದು, ಗಾಬರಿಗೊಂಡ ಮಹಿಳೆ ತಡವರಿಸುತ್ತಾ ತನ್ನ ಜೊತೆಗೆ ಇದ್ದ ಮಹಿಳೆಯರಿಗೆ ದೂರ ಓಡುವಂತೆ ಹೇಳಿದ್ದಾಳೆ ಎನ್ನಲಾಗಿದೆ.
ಬಳಿಕ ಅದೇ ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಗಾಬರಿಗೊಂಡು ಓಡೋಡಿ ಬಂದಿದ್ದರು. ಆ ಮಹಿಳೆಯರಿಗೆ ಇಲ್ಲಿ ದೂರ ಹೋಗಿ ನನ್ನ ಬಳಿ ಯಾರು ಬರಬೇಡಿ ಇಲ್ಲಿ ದೊಡ್ಡ ನಾಗರಹಾವು ಇದ್ದು ಅದು ನನಗೆ ಕಚ್ಚಿದೆ. ನೀವು ಹತ್ತಿರ ಬಂದರೇ ನಿಮಗೂ ಕಚ್ಚುತ್ತೆ . ನಾನಂತು ಬದುಕುಳೀವುದು ಕಷ್ಟ ಹತ್ತಿರ ಯಾರು ಬರಬೇಡಿ ಎಂದು ಮೃತ ನಿಂಗಮ್ಮ ಅಲ್ಲಿದ್ದವರಿಗೆ ಎಚ್ಚರಿಸಿದ್ದಾಳೆ.
ನಾಗರಹಾವು ಅಲ್ಲಿಂದ ಹೋಗಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳೀಯರು. ಬಳಿಕ ಮಹಿಳೆಯನ್ನು ಹೊರಗೆ ಕರೆ ತಂದು ಆಸ್ಪತ್ರೆಗೆ ಸಾಗಿಸುವ ಮಧ್ಯೆದಲ್ಲೇ ನಿಂಗಮ್ಮ ಮಹಿಳೆ ಅಸುನಿಗಿದ್ದಾಳೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ತಿಳಿದು ಬಂದಿದೆ.
ಬಡ ಭೋವಿ ವಡ್ಡರ್ ಸಮಾಜದ ಮಹಿಳೆ ನಿಂಗಮ್ಮ :
ನಿಂಗಮ್ಮನಿಗೆ ಒಂದು ಗಂಡು ,ಎರಡು ಹೆಣ್ಣು ಮಕ್ಕಳಿದ್ದು, ಇನ್ನೂ ಮಕ್ಕಳು ಚಿಕ್ಕವರಿದ್ದು, ಮಹಿಳೆ ಹಾವು ಕಚ್ಚಿ ಮೃತಳಾದ ಸುದ್ದಿ ತಿಳಿದ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಕಂದಮ್ಮಗಳನ್ನು ಬಿಟ್ಟು ಅಗಲಿದ ಮಕ್ಕಳನ್ನು ಕಂಡು ಗ್ರಾಮಸ್ಥರು ಮಮ್ಮಲು ಮರುಗುವ ದೃಶ್ಯ ಕಂಡುಬಂದಿತು.
ಮಹಿಳೆಯ ಕುಟುಂಬವು ತುಂಬಾ ಸಂಕಷ್ಟದಲ್ಲಿದ್ದು ಇವರು ಜನತಾ ಮನೆಯಲ್ಲಿ ವಾಸವಾಗಿದ್ದು, ಕಿತ್ತು ತಿನ್ನುವ ಬಡತನದ ಮಧ್ಯೆ ದಂಪತಿಗಳು ಕೂಲಿ, ನಾಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಾ ಮೂವರು ಮಕ್ಕಳನ್ನು ಸಾಕಿ ಸಲುಹುತ್ತಿದ್ದರು.
ಮೃತ ನಿಂಗಮ್ಮನ ಕುಟುಂಬಕ್ಕೆ ಇಲ್ಲಿಯವರೆಗೆ ಯಾವುದೇ ಸೌಲಭ್ಯವಿಲ್ಲದೇ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದು, ಮೃತ ಮಹಿಳೆಯ ಕುಟುಂಬಕ್ಕೆ ಗಂಗಾವತಿ ಶಾಸಕ ಜನಾರ್ಧನ್ ರೆಡ್ಡಿಯವರು ಹಾಗೂ ಅವರ ಸಮಾಜದವರೇ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಬಡ ಕುಟುಂಬಕ್ಕೆ ಸರಕಾರದಿಂದ ಹಾಗೂ ವೈಯಕ್ತಿಕ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
“ನಿಂಗಮ್ಮ ಕುಟುಂಬದವರು ತುಂಬಾ ಬಡ ಕುಟುಂಬದವರಾಗಿದ್ದು,ಪ್ರತಿ ನಿತ್ಯ ಕೂಲಿ ಕೆಲಸದಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಡ ಭೋವಿ ಸಮಾಜದವರಾಗಿದ್ದು, ಅವರ ಸಮಾಜದವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದು, ಈ ಘಟನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಬಡ ಕುಟುಂಬಕ್ಕೆ ವೈಯಕ್ತಿಕ ಹಾಗೂ ಸರ್ಕಾರದಿಂದ ಪರಿಹಾರ ಒದಗಿಸಬೇಕು”.