ಪ್ರಜಾ ವೀಕ್ಷಣೆಯ ಸೂಕ್ಷ್ಮ ನೋಟ @2 :
ಕುಕನೂರು : ತಾಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಲ್ಲಿ ಅಕ್ರಮ : ಯಾವ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಹಣ ಬಾಕಿ? ಇಲ್ಲಿದೆ ಮಾಹಿತಿ..
google.com, pub-2004113022507285, DIRECT, f08c47fec0942fa0

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್-ಕೊಪ್ಪಳ (ಸೆ.14) : ಜಿಲ್ಲೆಯ ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MAHATMA GANDHI NATIONAL RURAL EMPLOYMENT GUARANTEE SCHEME-MGNREGA)ಯಡಿ 2020 ರಿಂದ 2024ರ ಡಿಸೆಂಬರ್ 10ರ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಅಡಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣೆ ಮೊತ್ತವನ್ನು ಸರಕಾರಕ್ಕೆ ಜಮಾ ಮತ್ತು ತಿರುವಳಿ ಮಾಡದೇ ಸರಕಾರಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
*ಯಾವ ಗ್ರಾಮ ಪಂಚಾಯಿತಿ ಎಷ್ಟು ಹಣ? ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ….*
1) ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ರೂ.91,20,360, (91.20 ಲಕ್ಷ)
2) ರಾಜೂರು ಗ್ರಾಮ ಪಂಚಾಯಿತಿ ರೂ.35,06,807, (35.06 ಲಕ್ಷ)
3) ತಳಕಲ್ ಗ್ರಾಮ ಪಂಚಾಯಿತಿ ರೂ.9,69,601, (9.69 ಲಕ್ಷ)
4) ಶಿರೂರು ಗ್ರಾಮ ಪಂಚಾಯಿತಿ ರೂ.24,58,285, (24.58 ಲಕ್ಷ)
5) ಮಸಬಹಂಚಿನಾಳ ಗ್ರಾಮ ಪಂಚಾಯಿತಿ ರೂ.1,37,27,148,(1.37 ಕೋಟಿ)
6) ನೆಲಜೇರಿ ಗ್ರಾಮ ಪಂಚಾಯಿತಿ ರೂ.81,61,781, (81.61 ಲಕ್ಷ)
7) ಮಂಗಳೂರು ಗ್ರಾಮ ಪಂಚಾಯಿತಿ ರೂ.91,72,026, (91.72 ಲಕ್ಷ)
8) ಮಂಡಲಗೇರಿ ಗ್ರಾಮ ಪಂಚಾಯಿತಿ ರೂ.56,69,542, (56.69 ಲಕ್ಷ)
9) ಕುದರಿಮೋತಿ ಗ್ರಾಮ ಪಂಚಾಯಿತಿ ರೂ.1,51,22,333, (1.51 ಕೋಟಿ)
10) ಇಟಗಿ ಗ್ರಾಮ ಪಂಚಾಯಿತಿ ರೂ.34,49,881, (34.49 ಲಕ್ಷ)
11) ಭಾನಾಪುರ ಗ್ರಾಮ ಪಂಚಾಯಿತಿ ರೂ.72,30,525, (72.30 ಲಕ್ಷ)
12) ಹಿರೇಬೀಡನಾಳ ಗ್ರಾಮ ಪಂಚಾಯಿತಿ ರೂ.62,04,284, (62.39 ಲಕ್ಷ)
13) ಬೆಣಕಲ್ ಗ್ರಾಮ ಪಂಚಾಯಿತಿ ರೂ.42,39,351, (42.39 ಲಕ್ಷ)
14) ಬಳಗೇರಿ ಗ್ರಾಮ ಪಂಚಾಯಿತಿ ರೂ.17,10,658, (17.10 ಲಕ್ಷ)
15) ಯರೇಹಂಚಿನಾಳ ಗ್ರಾಮ ಪಂಚಾಯಿತಿ ರೂ.15,09,880 (15.09 ಲಕ್ಷ)
ಈ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ವಸೂಲಾತಿ ಮತ್ತು ಆಕ್ಷೇಪಣಾ ಮೊತ್ತ 9,22,52,362 ರೂಪಾಯಿ (9.22 ಕೋಟಿ) ಸರಕಾರಕ್ಕೆ ಜಮಾ ಆಗಬೇಕಿರುವ ಹಣದ ರಾಶಿ ಇದಾಗಿದೆ. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯಿತಿ ಹಂತದಲ್ಲಿ ಈ ಮೂರು ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರಬೇಕಾದ ಕೋಟ್ಯಂತರ ರೂಪಾಯಿ ಹಣ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒಳಗೊಂಡಂತೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು (ನರೇಗಾ) ಮತ್ತು ತಾಲೂಕು ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸಾಮೂಹಿಕ ಲೆಕ್ಕಪರಿಶೋಧನೆ ಇವರ ಜೇಬು ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.

ಸದರಿ ಕೋಟ್ಯಂತರ ರೂಪಾಯಿ ಹಣವನ್ನು ಇವರು ಕಾಮಗಾರಿ ನಿರ್ವಹಿಸದೇ ಹಣ ಪಾವತಿ, ನಿಗದಿಗಿಂತ ಹೆಚ್ಚುವರಿ ಸತ್ತವರ ಹೆಸರಿನಲ್ಲಿ ಕೂಲಿ ಹಣ ಪಾವತಿ, ಬೇರೆ ಯೋಜನೆಗೆ ನರೇಗಾ ಹಣ ಬಳಕೆ, ದೋಷಗಳಿದ್ದರೂ ಮಾಡಿದ ಪಾವತಿ, ಲೆಕ್ಕಪರಿಶೀಲನೆಗೆ ಒದಗಿಸಿದ ಕಡತಗಳು, ಪ್ರಕ್ರಿಯೆ ಉಲ್ಲಂಘನೆ ಪ್ರಕರಣಗಳು, ದೋಷಪೂರಿತ ವರದಿಗಳು ಈ ರೀತಿಯಾಗಿ ಹಲವಾರು ಹಂತಗಳಿಂದ ಸರಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂಬ ಅದಿಕೃತ ಮಾಹಿತಿ ಇದೆ ಎಂದು ದೂರುದಾರರು ಹೇಳುತ್ತಿದ್ದಾರೆ.

ಸದರಿ ಆಕ್ಷೇಪಣೆ, ವಸೂಲಾತಿ ಹಣ ಬಂದರೆ ಜಿಲ್ಲಾ ಪಂಚಾಯಿತಿ ಬೊಕ್ಕಸಕ್ಕೆ ಸಮೃದ್ಧಿಯಾಗುತ್ತದೆ. ರಾಜ್ಯ ಸರಕಾರಕ್ಕೆ ಸೇರಬೇಕಾದ ಹಣ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸದರಿ ಮೊತ್ತವನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 246 (1) ರಿಂದ (10)ರನ್ವಯ ಕ್ರಮಗಳನ್ನು ಕೈಗೊಂಡು ಅಡಹಾಕ್‌ನಲ್ಲಿ ವಸೂಲಿಯಾಗದ ಹಣವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮತ್ತು ಇನ್ನಿತರ ಅಧಿಕಾರಿಗಳಿಂದ ಭೂ ಕಂದಾಯ ಬಾಕಿಯೆಂದು ವಸೂಲಿ ಮಾಡಬೇಕು ಎನ್ನುವುದು ಕಾನೂನು ಹೇಳುತ್ತದೆ.

ಅವ್ಯವಹಾರದಲ್ಲಿ ಭಾಗಿಯಾದ ಗುತ್ತಿಗೆ ಆಧಾರದ ಸಿಬ್ಬಂದಿಗಳ ವಿರುದ್ಧ ಮೆನರೇಗಾ ಅಡಿಟ್ ಆಫ್ ಸ್ಟೀಮ್ ನಿಯಮಗಳು 2011, ನಿಯಮ 7(3)(ಸಿ)(ಎಫ್) ಅಡಿಯಲ್ಲಿ ಕ್ರಮಕೈಗೊಳ್ಳಬೇಕು. ಗಂಭೀರ ಸ್ವರೂಪ ಆರ್ಥಿಕ ಅವ್ಯವಹಾರದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆಸ್ತಿ ವಿವರವನ್ನು ಬಹಿರಂಗಗೊಳಿಸಬೇಕು ಮತ್ತು ಅಡಹಾಕ್ ಸಮಿತಿಯ ಅಧ್ಯಕ್ಷರಿಂದ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳಿಗೆ 2020 ರಿಂದ 2024ರ ಡಿಸೆಂಬರ್ ವರೆಗೆ ವಸೂಲಾತಿ ಆದೇಶವನ್ನು ಹಾಗೂ ನೋಟೀಸ್‌ಗಳನ್ನು ಹೊರಡಿಸಲಾದ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂಬುದು ನಿಯಮವಾಗಿದೆ.
