You are currently viewing LOCAL BREAKING : ಮಹರ್ಷಿ ವಾಲ್ಮೀಕಿ ಮನುಕುಲ ಧರ್ಮದ ಪ್ರತಿಪಾದಕ : ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ

LOCAL BREAKING : ಮಹರ್ಷಿ ವಾಲ್ಮೀಕಿ ಮನುಕುಲ ಧರ್ಮದ ಪ್ರತಿಪಾದಕ : ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ

ಪ್ರಜಾ ವೀಕ್ಷಣೆ ಸುದ್ದಿ : 

LOCAL BREAKING : ಮಹರ್ಷಿ ವಾಲ್ಮೀಕಿ ಮನುಕುಲ ಧರ್ಮದ ಪ್ರತಿಪಾದಕ : ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ

ಕುಕನೂರು : ‘ಶ್ರೀ ಮಹರ್ಷಿ ವಾಲ್ಮೀಕಿಯವರು ಮನುಕುಲಧರ್ಮದ ಪ್ರತಿಪಾದಕರಾಗಿ, ಸಂಸ್ಕಾರದ ಪ್ರತಿಪಾದಕರಾಗಿ, ರಾಮಾಯಣದಲ್ಲಿ ಅನೇಕ ಪಾತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ಫಕೀರಪ್ಪ ವಜ್ರಬಂಡಿ ಹೇಳಿದರು.

ಇಂದು ಪಟ್ಟಣದಲ್ಲಿ ತಾಲೂಕು ಆಡಳಿತ ತಾಲೂಕ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಕುಕನೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ ಸಮಾರಂಭವನ್ನು ಪಟ್ಟಣದ ಕೋಳಿಪೇಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇಂದು ಬೆಳಗ್ಗೆ 9:30ರಿಂದ ಪಟ್ಟಣದ ರೈಲು ನಿಲ್ದಾಣದ ಹತ್ತಿರದ ಬೇಡರ ಕಣ್ಣಪ್ಪ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದ ಮಾರ್ಗವಾಗಿ ಕೋಳಿಪೇಟೆಯ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದವರೆಗೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಬೃಹತ್‌ ಮರೆವಣಿಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದವ ಡಾ.ಪಿ. ಜ್ರಬಂಡಿಯವರು, ‘ತ್ರೇತಾ ಯುಗದಲ್ಲಿ ಬೇಡರ ವಂಶದಲ್ಲಿ ಜನಿಸಿದ ರತ್ನಾಕರ, ವಾಲ್ಮೀಕಿಯಾಗಿ ಭಾರತದ ಮಹಾನ್‌ ಕಾವ್ಯ ರಾಮಾಯಣವನ್ನು ನೀಡಿದ ಆದಿಕವಿ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ವಿಶ್ವವ್ಯಾಪಿ ನೂರಾರು ಭಾಷೆಗಳಿಗೆ ಭಾಷಾಂತರವಾಗಿ ವಿಶ್ವ ಮಾನ್ಯತೆಯನ್ನು ಪಡೆದಿದ್ದು, ಮನುಕುಲದ ಎಲ್ಲಾ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರವನ್ನು ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ತೋರಿದ್ದಾರೆ ಎಂದರು.

‘ನಾಯಕ್ ಅಥವಾ ವಾಲ್ಮೀಕಿ ಸಮುದಾಯವೂ ಸೂರರು, ಧೀರರು, ಮಾಹಾನ್‌ ತ್ಯಾಗಿಗಳು ಆಗಿದ್ದರು. ನಾವು ಅನ್ಯ ಸಮುದಾಯದವರನ್ನು ರಕ್ಷಿಸುವ ಮಹಾನ್‌ ರಕ್ಷಕರಾಗಿ ಬಾಳಿ ಬದುಕಿದ್ದೇವೆ. ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಜೀವನ ರೂಪಿಸುಕೊಳ್ಳುವ ಶಿಕ್ಷಣದ ಪದ್ದತಿಯ ಅವಶ್ಯಕತೆ ಇದೆ ಹಾಗಾಗಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವಂತರನ್ನಾಗಿ ಮಾಡಿ’ ಎಂದು ಕರೆ ನೀಡಿದರು.

ಬಳಿಕ ವಾಲ್ಮೀಕಿ ಸಮುದಾಯದ ಪ್ರತಿಭಾನ್ವೀತ ಮಕ್ಕಳಿಗೆ ಮಾನ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಶೀಲ್ದಾರ್ ಗ್ರೇಟ್ 2 ಮುರಳೀಧರ ರಾವ್, ಜೆಸ್ಕಾಂನ ಕಾರ್ಯ ಮತ್ತು ಪಾಲನಾ ವೃತ್ತ ಉಪ ವಿಭಾಗ ಕಚೇರಿ ಅಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ -ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಪೀರ್ ಸಾಬ್ ದಪೇದರ್ ಸಿ ಆರ್ ಪಿ ಶಿಕ್ಷಣ ಇಲಾಖೆ, ಸಮಾಜದ ಮುಖಂಡರಾದ ಅಜಯ್ ಕುಮಾರ್, ರಾಮಣ್ಣ ಯಡ್ಡೋಣಿ ನಗರ ಘಟಕ ಅಧ್ಯಕ್ಷರು, ಪ್ರಕಾಶ್ ತಾಲೂಕ ಉಪಾಧ್ಯಕ್ಷರು, ಸಮಾಜದ ಹಿರಿಯರಾದ ರಾಮಣ್ಣ ಮುಂದಲಮನಿ, ಸಂಜೀವಪ್ಪ ತಳವಾರ್ ಇಟಗಿ, ಬರಮಪ್ಪ ತಳವಾರ್, ಶಂಕ್ರಪ್ಪ ಬನ್ನಿಕೊಪ್ಪ, ಯಲ್ಲಪ್ಪ ಮುಂದಲಮನಿ, ಸಿದ್ದು ವಾಲ್ಮೀಕಿ, ಸುಭಾಷ್ ಪೂಜಾರ್, ಶ್ರೀಕಾಂತ್ ಬಿಳಗಿ, ಹನುಮಪ್ಪ ಮರಡಿ, ಶರಣಪ್ಪ ರಾಟಿಮನಿ, ನನ್ನಿಪ್ಪ ತಳವಾರ್, ರಾಮಪ್ಪ ಹಿರೇಮನಿ, ಶಿವಕುಮಾರ್, ಇತರರು.

Leave a Reply

error: Content is protected !!