ಪ್ರಜಾ ವೀಕ್ಷಣೆ ಸುದ್ದಿ :
FLASH NEWS : ಪ್ರಾ.ಕೃ.ಪ.ಸ.ಸಂಘದ ಚುನಾವಣೆ ಫಲಿತಾಂಶ ಪ್ರಕಟ : ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಗೆಲುವು, ಕೇವಲ 1 ಬಿಜೆಪಿ…!

ಕುಕನೂರು : ಕುಕನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಳೆದ 2024ರ ಡಿಸೇಂಬರ್ 29 ರಂದು ಜರುಗಿದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ, ಸಾಲಗಾರರ ಸಾಮಾನ್ಯ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ‘ಆ’ & ‘ಬ’, ಮಹಿಳಾ ಮತ ಕ್ಷೇತ್ರಗಳಿಂದ ಹಾಗೂ ಸಾಲಗಾರರಲ್ಲದ ಸಾಮಾನ್ಯ ಮತ ಕ್ಷೇತ್ರದಿಂದ ಇದರ ಅಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ ಫಲಿತಾಂಶ ಘೋಷಣೆ ಮಾಡಲಾಗಿದ್ದು, ಈ ಚುನಾವಣೆ ಫಲಿತಾಂಶದಲ್ಲಿ ಬಹುತೇಕ ಕಾಂಗ್ರೆಸ್ ಬೆಂಬಲಿತ ಜಯ ಗಳಿಸಿದ್ದಾರೆ.
ಕುಕನೂರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸತತ ಒಂದು ವಾರ ಹೈಡ್ರಾಮಾ ನಡೆದಿತ್ತು. ಈ ಫಲಿತಾಂಶವೂ ಬರೋಬ್ಬರಿ 10 ತಿಂಗಳ ಬಳಿಕ ಘೋಷಣೆ ಆಗಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅದರಲ್ಲಿ 11 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲವು ಕಂಡಿದ್ದಾರೆ. ಕೇವಲ ಒಂದು ಸ್ಥಾನವು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ.

‘ಸಾಲಗಾರರ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಿದ್ದಯ್ಯ ಶಂಕ್ರಯ್ಯ ಕಳ್ಳಿಮಠ, ಕಳಕಪ್ಪ ಸಂಗಪ್ಪ ಕುಂಬಾರ, ದಸ್ತಗೀರಸಾಬ ಗೈಬುಸಾಬ ರಾಜೂರ, ರಾಮಪ್ಪ ಭೀಮಪ್ಪ ಭಜಂತ್ರಿ, ಶ್ರೀನಿವಾಸರಾವ್ ಹನುಮಂತರಾವ್ ದೇಸಾಯಿ
ಎಸ್ ಸಿ ಮೀಸಲು ಕ್ಷೇತ್ರದಲ್ಲಿ ಗುದ್ನೇಪ್ಪ ಸಣ್ಣ ಈರಪ್ಪ ಚಲವಾದಿ, ಸಾಲಗಾರರ ಪರಿಶಿಷ್ಟ ಪಂಗಡದಲ್ಲಿ ಭರಮಪ್ಪ ಬಸಪ್ಪ ತಳವಾರ, ಸಾಲಗಾರರ ಹಿಂ.ವ. ‘ಆ’ ಬಸವರಾಜ ವೀರಪ್ಪ ನೋಟಗಾರ, ಸಾಲಗಾರರ ಹಿಂ.ವ. ‘ಬ’ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ನಾಗರಾಜ ಹಾದಿಯವರು, ಸಾಲಗಾರರ ಮಹಿಳಾ ಕ್ಷೇತ್ರದಲ್ಲಿ ರತ್ನಮ್ಮ ಸಂಗಪ್ಪ ಗದಗ, ಶಂಶಾದಬೇಗಂ ರಹಿಮಾನಸಾಬ ಕಟ್ಟಿಮನಿ ಗೆಲುವು ಸಾಧಿಸಿದ್ದಾರೆ’ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಯಲಬುರ್ಗಾ ರಿಟರ್ನಿಂಗ್ ಆಫೀಸರ್ ಹಾಗೂ ಚುನಾವಣೆ ಅಧಿಕಾರಿ ಚಂದ್ರಶೇಖರ್ ಕಾವಲಿ ತಿಳಿಸಿದರು.
