ಮುದಗಲ್ಲ :-ಮಟ್ಟೂರಿನಲ್ಲಿ ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ ಆಚರಣೆ…

ಮುದಗಲ್ಲ ವರದಿ…

ಮಟ್ಟೂರಿನಲ್ಲಿ ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ ಆಚರಣೆ…

ಮುದಗಲ್: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ 70 ನೇ ಕನ್ನಡ ರಾಜ್ಯೋತ್ಸವವನ್ನು ಶನಿವಾರ ಮಟ್ಟೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಪಟ್ಟಣ ಸಮೀಪದ ಮಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮುಂಭಾಗದಲ್ಲಿ ವಿಧ್ಯಾರ್ಥಿಗಳ ನೇತೃತ್ವದಲ್ಲಿ ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

 

ಶಾಲೆ ಮುಂಭಾಗದಿಂದ ಗ್ರಾಮದ ವಿವಿಧ ಬೀದಿಗಳಲ್ಲಿ ತಾಯಿ ಭುವನೇಶ್ವರಿ ಅವರ ಭಾವಚಿತ್ರ ಮೆರವಣಿಗೆ ಜರುಗಿತು. ನಂತರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇರುವ ಕರ್ನಾಟಕ ರಕ್ಷಣಾ ವೇದಿಕೆಯ ಧ್ವಜ ಕಟ್ಟಿಗೆ ತೆರೆಳಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಟ್ಟೂರು ಗ್ರಾಮದ ಕರವೇ ಅಧ್ಯಕ್ಷ ನಾಗರಾಜ್ ನಾಯಕ ಪೂಜೆ ಸಲ್ಲಿಸಿದರು.

ನಂತರ ಮುದಗಲ್ಲ ಪುರಸಭೆ ಯ ಸದಸ್ಯರಾದ ಮೈಬುಸಾಬ ಕಡ್ಡಿಪುಡಿ ಅವರು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ಕಾರ್ಯದರ್ಶಿ ಎಸ್.ಎನ್.ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್, ಜಮೀರ್ ಪಾಶ,ಅನೀಪ್,ಖಾನ್ ,ಜಮಾಲಿಸಾಬ,ರಹೇಮಾನ್ ದುಲಾ ಜಂಬಾಳಿ ಇಸ್ಮಾಯಿಲ್ ಬಳಿಗಾರ್, ಮಹಾಂತೇಶ ಚಟ್ಟರ್, ಶಾಲೆಯ ಮುಖ್ಯಗುರು ದೈಹಿಕ ಶಿಕ್ಷಕ ಸೇರಿದಂತೆ ವಿಧ್ಯಾರ್ಥಿಗಳು ಹಾಗೂ ಊರಿನ ಗಣ್ಯರು ಇದ್ದರು.

ವರದಿ: ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!