You are currently viewing LOCAL NEWS : ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಸೆರೆ..!
ಕುಕನೂರು ತಾಲೂಕಿನ ಗಾವರಾಳ ಗ್ರಾಮದ ಕಲ್ಲುಕ್ವಾರಿಗಳ ಬಳಿ ಸೆರೆ ಸಿಕ್ಕ ಚಿರತೆ.

LOCAL NEWS : ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಸೆರೆ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ ಚಿರತೆ ಸೆರೆ..!

ಕುಕನೂರು ತಾಲೂಕಿನ ಗಾವರಾಳ ಗ್ರಾಮದ ಕಲ್ಲುಕ್ವಾರಿಗಳ ಬಳಿ ಸೆರೆ ಸಿಕ್ಕ ಚಿರತೆ.

ಕುಕನೂರು : ತಾಲೂಕಿನ ಗಾವರಾಳ ಗ್ರಾಮದ ಕಲ್ಲು ಕ್ವಾರಿಯಲ್ಲಿ ವಾಸವಿದ್ದ ಚಿರತೆಯನ್ನು ಇಂದು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬರೀ ಕಲ್ಲು ಕ್ವಾರಿಗಳಲ್ಲದೇ ತೋಟಗಳಲ್ಲಿ ಹಾಗೂ ಕೃಷಿ ಜಮೀನುಗಳಲ್ಲಿ, ಅಲ್ಲದೆ ಗ್ರಾಮದ ಸಮೀಪದ ಮನೆಗಳಿಗೆ ಸಮೀಪದ ಸಹ ಚಿರತೆ ಕಾಣಿಸುತ್ತಿತ್ತು. ಚಿರತೆ ಕಂಡು ಗ್ರಾಮಸ್ಥರು ಭಯ ಬೀತರಾಗಿದ್ದರು. ಚಿರತೆ ಕಾಟಕ್ಕೆ ಹೆದರಿ ಕೃಷಿ ಕೆಲಸ ಮಾಡದೆ ಕೈ ಬಿಟ್ಟಿದ್ದರು. ಗಾವರಾಳ ಗ್ರಾಮದ ಕಲ್ಲು ಕ್ವಾರಿಗಳು ಕಲ್ಲಿನ ಗುಂಪೆಗಳಲ್ಲಿ ಚಿರತೆ ಮನೆ ಮಾಡಿಕೊಂಡು ವಾಸವಿತ್ತು.

ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ ಸಹ ಅಳವಡಿಸಿದ್ದರು. ಗದಗಿನ ಪ್ರಾಣಿ ಸಂಗ್ರಹಾಲಯದ ಅರಣ್ಯ ಇಲಾಖೆ ಸಿಬ್ಬಂಧಿಗಳ ಸಹಾಯದಿಂದ ಚಿರತೆಗೆ ಮದ್ದು ಬರುವ ಇಂಜಕ್ಷನ್ ನೀಡಿ ಚಿರತೆಯನ್ನು ಬಲೆ ಹಾಕುವ ಮೂಲಕ ಸೆರೆ ಹಿಡಿದಿದ್ದಾರೆ. ಸೆರೆ ಸಿಕ್ಕ ಹೆಣ್ಣು ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿದೆ.

ಗ್ರಾಮಸ್ಥರಲ್ಲಿ ಇನ್ನು ಚಿರತೆಯ ಭಯ ಹೋಗಿಲ್ಲ..!!

ಈಗಾಗಲೇ ಎರಡೂ ಮೂರು ಚಿರತೆಗಳನ್ನು ಈ ಸ್ಥಳದಲ್ಲಿಯೇ ಸೆರೆ ಹಿಡಿಯಲಾಗಿದೆ. ಚಿರತೆಗಳು ಮರಿಗಳನ್ನು ಹಾಕಿ ಇಲ್ಲಿಯೇ ವಾಸವಾಗಿವೆ. ಗಾವರಾಳ ಗ್ರಾಮಸ್ಥರದಲ್ಲಿ ಚಿರತೆಗಳ ಬಗ್ಗೆ ಭಯ ಹೆಚ್ಚಾಗಿದೆ. ಇದರ ಬಗ್ಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಪರಿಶೀಲಿಸಿ ಶಾಶ್ವತ ಕ್ರಮಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

Prajavikshane

Chandru R Bhanapaur

Leave a Reply

error: Content is protected !!