You are currently viewing LOCAL NEWS : ‘ಶಾಸಕರ ಬಗ್ಗೆ ಹಗುರ ಮಾತು ಸಹಿಸಲ್ಲ’ : ಜಮೀನು ವಿಚಾರಕ್ಕೆ ತಾಂಡಾದ ಜನರನ್ನ ಬಳಿಸಿಕೊಳ್ಳಬೇಡಿ : ಕಾಂಗ್ರೆಸ್ ವಕ್ತಾರ ಯಮನೂರಪ್ಪ ಕಟ್ಟಿಮನಿ

LOCAL NEWS : ‘ಶಾಸಕರ ಬಗ್ಗೆ ಹಗುರ ಮಾತು ಸಹಿಸಲ್ಲ’ : ಜಮೀನು ವಿಚಾರಕ್ಕೆ ತಾಂಡಾದ ಜನರನ್ನ ಬಳಿಸಿಕೊಳ್ಳಬೇಡಿ : ಕಾಂಗ್ರೆಸ್ ವಕ್ತಾರ ಯಮನೂರಪ್ಪ ಕಟ್ಟಿಮನಿ

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ‘ಶಾಸಕರ ಬಗ್ಗೆ ಹಗುರ ಮಾತು ಸಹಿಸಲ್ಲ’ : ಜಮೀನು ವಿಚಾರಕ್ಕೆ ತಾಂಡಾದ ಜನರನ್ನ ಬಳಿಸಿಕೊಳ್ಳಬೇಡಿ : ಕಾಂಗ್ರೆಸ್ ವಕ್ತಾರ ಯಮನೂರಪ್ಪ ಕಟ್ಟಿಮನಿ

ಕುಕನೂರು : ‘ಅರ್ಥಹೀನ ವಿಚಾರಕ್ಕೆ ವಿರೋಧ ವ್ಯಕ್ತಪಡಿಸುವ ಬದಲು ಬಿಜೆಪಿಗರು ಅಭಿವೃದ್ಧಿಯಲ್ಲಿ ಕೈಜೋಡಿಸಲಿ ಎಂದು ತಾಲೂಕ ಕಾಂಗ್ರೆಸ್ ವಕ್ತಾರ ಹಾಗೂ ಬಂಜಾರ ಸಮಾಜದ ಯುವ ನಾಯಕ ಯಮನೂರಪ್ಪ ಕಟ್ಟಿಮನಿ ಬಿಜೆಪಿಗರಿಗೆ ನೇರ ಟಕ್ಕರ ನೀಡಿದರು.

ಕಳೆದ ನವಂಬರ್ 7 ರಂದು ಪಟ್ಟಣದಲ್ಲಿ ಗುದ್ದೇಶ್ವರ ದೇವಸ್ಥಾನದ ಜಮೀನು ಉಳಿವಿಗಾಗಿ ನಮ್ಮ ಹೋರಾಟ ಎಂಬ ಧ್ಯಯದೊಂದಿಗೆ ಪ್ರತಿಭಟನೆ ನಡೆದಿತ್ತು, ಈ ವೇಳೆಯಲ್ಲಿ ಬಿಜೆಪಿಯ ನಾಯಕರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಬಸವರಾಜ ರಾಯರೆಡ್ಡಿಯವರಿಗೆ ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಕನೂರು ತಾಲೂಕ ಕಾಂಗ್ರೆಸ್ ವಕ್ತಾರ ಹಾಗೂ ಬಂಜಾರ ಸಮಾಜದ ಯುವ ನಾಯಕ ಯಮನೂರಪ್ಪ ಕಟ್ಟಿಮನಿಯವರು ಪ್ರಜಾ ವೀಕ್ಷಣೆ ಡಿಜಿಟಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

‘ನೂತನ ಕುಕನೂರ ತಾಲೂಕ ಕಟ್ಟಡಗಳ ನಿರ್ಮಾಣ ವಿಷಯದಲ್ಲಿ ಕೆಲವರು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಹಾಗೂ ಇದರಿಂದ ತಾಲೂಕಿನ ಅಭಿವೃದ್ಧಿ ಕುಂಠಿತಗೊಳ್ಳುವ ಸಂಭವ ಹೆಚ್ಚಾಗಿದ್ದು. ತಾಲೂಕಿನ ಆಡಳಿತಾತ್ಮಕ ಕಾರ್ಯಾಲಯಗಳ ಕಟ್ಟಡ ನಿರ್ಮಾಣ ಮಾಡೋದು ಸಾರ್ವಜನಿಕರ ಅನುಕೂಲಕ್ಕಾಗಿ, ತಾಲೂಕಿನ ಎಲ್ಲರ ಜನರ ಹಿತಕ್ಕಾಗಿ. ಈ ವಿಷಯಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಾ ಶಾಸಕ ಬಸವರಾಜ ರಾಯರೆಡ್ಡಿಯವರ ಹೆಸರು ಎಳೆದು ತರುವುದು ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕ ಬಸವರಾಜ ರಾಯರೆಡ್ಡಿ ಅಭಿವೃದ್ಧಿ ಪರ ಚಿಂತಕರು ಜನಪರ ಯೋಜನೆಗಳ ಸರದಾರರು ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ಅವರು ರಾಜ್ಯದಲ್ಲೇ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ, ಆದ್ದರಿಂದ ಸುಖಾ ಸುಮ್ಮನೆ ಜನರನ್ನು ಎತ್ತಿ ಕಟ್ಟಿ, ಗೊಂದಲ ಸೃಷ್ಟಿಸುವುದು, ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಪಡಿಸಿದಂತಾಗುತ್ತದೆ, ಈ ಹಿಂದೆ ಕೆಲವರು ಗುದ್ನೇಪ್ಪನ ಅಜ್ಜನ ಜಮೀನನ್ನು ಉದ್ಯಮ ಮಾಡಲು, ಈ ಜಮೀನನ್ನು ಅದೇ ಗ್ರಾಮದವರು ಮಾರಿಕೊಂಡಿದ್ದಾರೆ ಎಂಬುದು ಸತ್ಯ. ಆದರೆ ಆವಾಗ ಯಾರು ತಂಟೆ ತಕರಾರು ಮಾಡಲಿಲ್ಲ ಆದರೆ ಈಗ ಅಭಿವೃದ್ಧಿ ಕಾರ್ಯಮಾಡಲು ಈ ರೀತಿ ಅಡ್ಡಿಪಡಿಸುವುದು ವಿಪರ್ಯಾಸವೇ ಸರಿ ಎಂದರು.

‘ಶುಕ್ರವಾರ ಕುಕನೂರು ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲವರು ಯಾರನ್ನೂ ಮೆಚ್ಚಿಸಲು ಹೋಗಿ ಹಿರಿಯ ಶಾಸಕರಿಗೆ ಬಾಯಿಗೆ ಬಂದಂತೆ ಮಾತನಾಡೋದು ಸರಿ ಅಲ್ಲ, ತಾನು ಬಿಜೆಪಿಪರ ಪ್ರತಿಭಟನೆಯಲ್ಲಿ ಭಾಗಿ ಆಗಿರಬಹುದು, ಆದರೆ ಮುಗ್ಧ ಕಕ್ಕಿಹಳ್ಳಿ ತಾಂಡಾದ ಜನರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿರುವುದು ಅವರ ಮುರ್ಖತನ ಮಾತಾಗಿದೆ ಎಂದು ಹೇಳಿದರು.

‘ಮೊದಲು ಸರಿಯಾಗಿ ಮಾತನಾಡೋದನ್ನ ಕಲಿಯಲಿ, ಈ ರೀತಿ ಇನ್ನೊಂದು ಸಾರಿ ಮಾತನಾಡಿದರೆ ಸರಿ ಇರಲ್ಲ, ಇಷ್ಟಕ್ಕೆ ಎಚ್ಚೆತ್ತುಕೊಂಡರೆ ಒಳ್ಳೆಯದು. ಒಣ ರಾಜಕೀಯ, ಒಣ ಪ್ರತಿಷ್ಠೆ ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಲಿ ಗುದ್ನೇಪ್ಪಜ್ಜನ ಆಶೀರ್ವಾದದಿಂದ ಆದಷ್ಟು ಬೇಗನೆ ನೂತನ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ’ ಎಂದು ಕಾಂಗ್ರೆಸ್ ವಕ್ತಾರ ಯಮನೂರಪ್ಪ ಕಟ್ಟಿಮನಿ ನೇರವಾಗಿ ಬಿಜೆಪಿಗರಿಗೆ ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!