ಗಂಗಾವತಿ : ಇಂದು ನಗರದ ಈದ್ಗಾ ಮೈದಾನದಲ್ಲಿ ನಡೆದ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ರೆಡ್ಡಿಯವರು ಭಾಗವಹಿಸಿ ಸೌಹಾರ್ದ ಮೆರೆದರು.
ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿಯವರು ಇಂದು ನಗರದ ಜಯನಗರ ರಸ್ತೆಯಲ್ಲಿರುವ ಈದ್ಗಾ ಕಲ್ಯಾಣ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ರಂಜಾನ್ ಹಬ್ಬವು ಮುಸ್ಲಿಂ ಸಮುದಾಯದ ಬಹು ದೊಡ್ಡ ಹಬ್ಬವಾಗಿದ್ದು ಈ ಹಬ್ಬ 30 ದಿನಗಳ ಕಾಲ ಕಟ್ಟುನಿಟ್ಟಾಗಿ ಉಪವಾಸವಿದ್ದು ಆಚರಣೆ ಮಾಡುವುದು ಅಷ್ಟು ಸುಲಭ. ಹಬ್ಬವನ್ನು ಮುಸ್ಲಿಂ ಬಾಂಧವರು, ಶಾಂತಿ ನೆಮ್ಮದಿ ಹಾಗೂ ಸೌಹಾರ್ಧತೆಯಿಂದ ಆಚರಣೆ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ. ಜೊತೆಗೆ ಸರ್ವ ಧರ್ಮ ಸಮುದಾಯದೊಂದಿಗೆ ಮುಸ್ಲಿಂ ಬಾಂಧವರು ಸ್ನೇಹ ಸಹೋದರತ್ವ ಭಾವನೆಯಿಂದ ಬೆರೆತಿರುವುದು ಸಂತಸದ ವಿಷಯ.
ಮುಂದಿನ ದಿನಗಳಲ್ಲಿ ಗಂಗಾವತಿಯ ಇಡೀ ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆ, ನೆಮ್ಮದಿ ಕಾಪಾಡಿಕೊಳ್ಳುವ ಮೂಲಕ ಇಡೀ ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿ ಮಾಡುವ ಭರವಸೆ ನೀಡುತ್ತದೆ.
ಈ ಸಂದರ್ಭದಲ್ಲಿ ಜನಾರ್ಧನ ರೆಡ್ಡಿಯವರ ಆಪ್ತ ಸರವಣ, ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಗರ ಪ್ರಚಾರ ಸಮಿತಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ಗ್ರಾಮೀಣ ಘಟಕದ ಬೆಟದಪ್ಪ ಚಿಕ್ಕಬೆಣಕಲ್, ಅಲ್ಪಸಂಖ್ಯಾತ ಶಕ್ತಿ ಘಟಕದ ಅಧ್ಯಕ್ಷ ಸೈಯದ್ ಮೀರಾ, ನಗರ ಪ್ರಚಾರ ಸಮಿತಿ ನಗರದ ಸಂಚಾಲಕ ಸೈಯದ್ ಅಲಿ ಮುಖಂಡರಾದ ಸೈಯದ್ ಜಿಲಾನ್ ಪಾಷಾ ಖಾದ್ರಿ, ಬಿಚ್ಚಕತ್ತಿ ಕುಟುಂಬದ ಜಾರ್ಕಿರ್, ಅಸೀಫ್, ಜೋಗದ ದುರಗಪ್ಪ ನಾಯಕ, ನಗರಸಭೆ ಸದಸ್ಯರಾದ ಉಸ್ಮಾನ್ ಬಿಚ್ಕತ್ತಿ, ಅಬ್ದುಲ್ ಜಬ್ಬಾರ್ ಬಿಚ್ಕತ್ತಿ ರವರು ಸಾಥ್.