ಮುದಗಲ್ಲ ವರದಿ..
DSS ಸಂಘಟನೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ 69ನೇ ಪರಿನಿರ್ವಾಣ ದಿನಾಚರಣೆ..

ಮುದಗಲ್ಲ:- ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ 69ನೇ ಪರಿನಿರ್ವಾಣ ದಿನಾಚರಣೆ ನಿಮಿತ್ತ ಅಂಬೇಡ್ಕರ್ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಸ್ಥಳೀಯ ಪೋಲಿಸ್ ಠಾಣೆಯ ಪಿಎಸ್ ಐ ವೆಂಕಟೇಶ್ ಮಾಡಗೇರಿ ಅವರು ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿ ಕ್ಯಾಡಲ್ ಹಚ್ಚುವ ಮೂಲಕ ನಮನ ಸಲ್ಲಿಸುವ ಮುಖಾಂತರ ಕಾಯ೯ಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡಿ, ಸಂವಿಧಾನ ಶಿಲ್ಪಿ ಹಾಗೂ ಭಾರತ ರತ್ನ ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದು ಎಲ್ಲ ಜಾತಿ ವರ್ಗ, ಧರ್ಮದವರು ಸಮಾನ ಅವಕಾಶ ಕಲ್ಪಿಸಿಕೊಡುವ ಆಶಯ ಹೊಂದಿದೆ. ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ, ಆಶಯ ಮತ್ತು ಬರೆದಿರುವ ಸಂವಿಧಾನ ರಕ್ಷಣೆ ಮಾಡುವ ಹೊಣೆ ದಲಿತ ಪರ ಸಂಘಟನೆಗಳಿಗೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆರಾದ ಶಿವ ಶಂಕರ್ ಗೌಡ ಅವರು ನಾಮ ಫಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ರು ಅಂಬೇಡ್ಕರ್ ಅವರು ಸಂಘರ್ಷದ ಹಾದಿ ತುಳಿಯದೆ ಸಾಮರಸ್ಯದ ಮೂಲಕ ಸಮಾಜವು ಒಗ್ಗೂಡುವಂತೆ ಮಾಡಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.

ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕು ಮತ್ತು ಜವಾಬ್ದಾರಿ ನೀಡಲಾಗಿದೆ. ನಾಗರಿಕರ ಹಕ್ಕುಗಳನ್ನು ಪ್ರತಿಪಾದಿಸುವುದರ ಜತೆಗೆ ಗುರುತರ ಜವಾಬ್ದಾರಿ ನಿರ್ವಹಿಸಬೇಕಿದೆ. ಯುವಜನರು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಲಿಂಗಸೂರು ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಮಾತನಾಡಿದ್ದರು , ‘ಅಂಬೇಡ್ಕರ್ ಅವರ ಹೆಸರು ಹೇಳುವುದೇ ರೋಮಾಂಚನ ಉಂಟು ಮಾಡುತ್ತದೆ. ಸಮಾನತೆ ದೃಷ್ಟಿಯಲ್ಲಿ ಸಂವಿಧಾನ ರಚಿಸಿದ ಮಹಾನ್ ಚೇತನ. ನಾವೆಲ್ಲರೂ ಜೀವನದಲ್ಲಿ ಅವರ ಚಿಂತನೆ ಅಳವಡಿಸಿ ಕೊಳ್ಳಬೇಕಿದೆ’ ಎಂದರು.

ಭಾರತೀಯ ದಲಿತ ಪ್ಯಾಂಥರ್ ನಗರ ಘಟಕದ ಅಧ್ಯಕ್ಷರು ಕೃಷ್ಣ ಚಲವಾದಿ ಮಾತನಾಡಿ ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ದಲಿತರು, ಶೋಷಿತರು, ಹಿಂದುಳಿದ ವರ್ಗದವರು ಸೇರಿದಂತೆ ಸರ್ವರಿಗೂ ಸಮಾನ ಹಕ್ಕು ನೀಡಿದ್ದಾರೆ. ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಶ್ಯಾಮಣ್ಣ ಕಟ್ಟಿಮನಿ, ರಾಘವೇಂದ್ರ ಕುದುರೆ,ಅಮೀರ್ ಬೇಗ್ ಉಸ್ತಾದ್, ದುರಗಪ್ಪ ಕಟ್ಟಿಮನಿ,ರಘುವೀರ್ ಮುದಗಲ್ಲ ,ಬಸವರಾಜ ಬಂಕದಮನೆ , ಮೋಹನ್ ಬಂಡಾರಿ, ಹನುಮಂತ ಬಡಿಗೇರ್, ಅಬ್ದುಲ್ ಖದೀರ್ ಬಸವರಾಜ್ ಜಲ್ಲಿ , ಗಫರ್ ಖಾನ್, ಮಹಮ್ಮದ್ ಕೋರಿ. , ನ್ಯಾಮತ್ ಖಾದ್ರಿ. ರಾಮಪ್ಪ ಬಂಕದಮನೆ ,ಇತರರು ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕುಂಬಾರ