ಮುದಗಲ್ಲ ತಾಲೂಕು ರಚನೆ: ಅಧಿವೇಶನದಲ್ಲಿ ಗಮನ ಸೆಳೆಯಲು ಶರಣಪ್ಪ ಕಟ್ಟಿಮನಿ ಆಗ್ರಹ..‌

ಮುದಗಲ್ಲ ವರದಿ…
ಮುದಗಲ್ಲ ತಾಲೂಕು ರಚನೆ: ಅಧಿವೇಶನದಲ್ಲಿ ಗಮನ ಸೆಳೆಯಲು ಶರಣಪ್ಪ ಕಟ್ಟಿಮನಿ ಆಗ್ರಹ..‌
ಮುದಗಲ್ಲ ತಾಲೂಕು ಘೋಷಣೆ ಬಗ್ಗೆ ಡಿಸೆಂಬರ್ 8 ರಿಂದ 10 ನಡೆಯುವ ಅಧಿವೇಶನದಲ್ಲಿ ಚಚೆ೯ ಮಾಡಿ : ದಲಿತ ಸಂಘರ್ಷ ಸಮಿತಿಯ ಲಿಂಗಸೂರು ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ…
ಮುದಗಲ್ಲ ನೂತನ ತಾಲೂಕು ಘೋಷಣೆಗೆ ಈ ಭಾಗದ ಜನ ನಾಲ್ಕು ದಶಕಗಳಿಂದ ಕಾಯುತ್ತಿದ್ದಾರೆ. ಮುದಗಲ್‌ ಹೋಬಳಿ 1952 ರಿಂದ 2008 ರವರೆಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 2008 ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ವೇಳೆ ಲಿಂಗಸುಗೂರು ಕ್ಷೇತ್ರಕ್ಕೆ ಸೇರಿಸಲಾಯಿತು.
 ಈ ಹೋಬಳಿಯವರು ವಿವಿಧ ಕೇತ್ರಗಳನ್ನು ಪ್ರತಿನಿಧಿಸಿ ಗೆದ್ದು ಶಾಸಕರು, ಸಚಿವರಾಗಿದ್ದಾರೆ. ಆದರೆ ಮುದಗಲ್‌ ತಾಲೂಕು ಕೇಂದ್ರವನ್ನಾಗಿ ಮಾಡಿಸಲು ಯಾರೂ ಮನಸ್ಸು ಮಾಡಿಲ್ಲ 
ಮುದಗಲ್ ಪಟ್ಟಣಕ್ಕೆ ತಾಲೂಕು ಘೋಷಣೆಗೆ ಇರಬೇಕಾದ ಎಲ್ಲ ಅರ್ಹತೆಗಳೂ ಇವೆ. ಭೌಗೋಳಿಕವಾಗಿ ಪಟ್ಟಣ ದೊಡ್ಡದಾಗಿದೆ. ಈಗಾಗಲೇ ಇಲ್ಲಿ ಅನೇಕ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಎಪಿಎಂಸಿ, ಉಪ ತಹಶೀಲ್ದಾರ್‌, ರೈತ ಸಂಪರ್ಕ ಕೇಂದ್ರ ಹಾಗೂ ಖಜಾನೆ ಇಲಾಖೆ ಕಚೇರಿಗಳು ಇಲ್ಲಿವೆ.
ಕೃಷ್ಣಾ ನದಿ ಹತ್ತಿರದಲ್ಲಿದ್ದರೂ ಈ ಹೋಬಳಿ ನೀರಾವರಿಯಿಂದ ವಂಚಿತವಾಗಿದೆ. ದಶಕದ ಹಿಂದೆ ಹೊಸ ತಲೆಮಾರಿನ ಯುವಜನತೆ ಮತ್ತೆ ತಾಲೂಕು ರಚನೆಗಾಗಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ರಚಿಸಿ ಹೋರಾಟ ಪ್ರಾರಂಭಿಸಿದ್ದರು. ಇವರ ಹೋರಾಟಕ್ಕೆ , ಹಲವು ಸಂಘಟನೆಗಳು ಬೆಂಬಲ ನೀಡಿವೆ ಆದರಿಂದ ನಡೆಯುವ ಅಧೀನದಲ್ಲಿ ಮುದಗಲ್ಲ ತಾಲೂಕು ಘೋಷಣೆ ಬಗ್ಗೆ ಸ್ಥಳೀಯ ಲಿಂಗಸೂರು ಶಾಸಕರಾದ ಮಾನಪ್ಪ ವಜ್ಜಲ್ ಹಾಗೂ ರಾಯಚೂರು ಹಾಗೂ ಕೊಪ್ಪಳದ  MLC ಶರಣಗೌಡ ಪಾಟೀಲ್  ಬಯ್ಯಾಪುರ ಡಿಸೆಂಬರ್ 8ರಿಂದ 10 ವರಗೆ ಬೆಳಗಾವಿ ನಡೆಯುವ  ಅಧಿವೇಶನದಲ್ಲಿ ಚಚೆ೯ ಮಾಡಿ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ರಾದ ಶರಣಪ್ಪ ಕಟ್ಟಿಮನಿ   ಹಾಗೂ ದಲಿತ ಪರ ಸಂಘಟನೆಗಳು ನಡೆಯುವ ಅಧಿವೇಶನದಲ್ಲಿ ಚಚೆ೯ ಮಾಡಿ ಒತ್ತಾಯ ಮಾಡಿದರು..
 ವರದಿ: ಮಂಜುನಾಥ ಕುಂಬಾರ..

Leave a Reply

error: Content is protected !!