ಮುದಗಲ್ಲ :-ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ಕ್ರೀಸ್ತ ಜಯಂತಿ ಆಚರಣೆ…

ಮುದಗಲ್ಲ ವರದಿ..

ಶಿಕ್ಷಕರ ಪ್ರಾಮಾಣಿಕತೆ ವಿದ್ಯಾರ್ಥಿ ಗಳಿಗೆ ಮಾದರಿ : ಫಾದರ್ ಆರೋಗ್ಯ ನಾಥನ್…

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ಕ್ರೀಸ್ತ ಜಯಂತಿ ಆಚರಣೆ…

ಮುದಗಲ್ಲ :- ಪಟ್ಟಣದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಯಲ್ಲಿ ವಾರ್ಷಿಕೋತ್ಸವ ಸಮಾರಂಭ ವನ್ನು ದೀಪ ಬೆಳಗುವ ಮೂಲಕ ಫಾದರ್ ಆರೋಗ್ಯ ನಾಥನ್ , ಫಾದರ್ ಡಾ!! ವಿಜಯ್ ಕುಮಾರ್ ಹಾಗೂ ಗಣ್ಯರಾದ ತಮ್ಮಣ್ಣ ಗುತ್ತಿಗೆದಾರ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ,ಶಶಿಕಲಾ ಎಸ್ .ಬೋವಿ ,ಪಾದರ್ ಅನಿಲ್ ಕಮಾರ್ ಜಿ,ಸಿಸ್ಟರ್ ಮೆರಿಯ ಪನ್ನೂರ್ ಹಾಗೂ ಗಣ್ಯರು ಸುಂದರ ವಾದ ಸಮಾರಂಭ ಉದ್ಘಾಟನೆ ಮಾಡಿದರು.

ಉದ್ಘಾಟನೆ ಮಾಡಿ ಮಾತನಾಡಿದ ಪಾದರ್ ಆರೋಗ್ಯ ನಾಥನ್
ಪ್ರತಿಯೊಬ್ಬ ಶಿಕ್ಷಕನಲ್ಲೂ ಪ್ರಾಮಾಣಿಕತೆ ಇದ್ದಾಗ ವಿದ್ಯಾರ್ಥಿಗಳು ಮಾದರಿಯಾಗಿ ಬೆಳೆ ಯಲು ಸಾಧ್ಯ. ಶಾಲೆಯುಯ ಪ್ರತಿ
ಯೊಬ್ಬರು ಮಕ್ಕಳ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಹಾಗೂ ಸರ್ಟಿಫಿಕೆಟ್‌ಗಿಂತ ಸಂಸ್ಕಾರ ಮುಖ್ಯ. ಶಿಕ್ಷಣವು ಸಂಸ್ಕಾರಭರಿತ ಮನಸ್ಸನ್ನು ಕಟ್ಟುವ ಪ್ರಕ್ರಿಯೆ ಎಂದು ಇಂಗ್ಲಿಷ್ ಮಾಧ್ಯಮ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಫಾದರ್ ಸುನಿಲ್ ಪೊನ್ನಸ್ವಾಮಿ ನಂತರ ಮಾತನಾಡಿ ಪೋಷಕರು ಈ ಶಾಲೆಯ ಬೆನ್ನೆಲುಬು ಎಂದು ಹೇಳಿ ದೇವರ ಆಶೀರ್ವಾದ ಅವರ ಮೇಲಿರಲಿ ಹೇಳುತ್ತಾ “ವಿದ್ಯಾರ್ಥಿಗಳು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸಾಧಕರಾಗಬೇಕು. ಒಬ್ಬ ವಿದ್ಯಾರ್ಥಿ ತನ್ನ ಜೀವನವನ್ನು ರೂಪಿಸಿಕೊಳ್ಳ ಬೇಕಾದರೆ ಅದಕ್ಕೆ ಉತ್ತಮ ವಾತವರಣ ಬೇಕು. ಅಂತಹ ಅತ್ಯುತ್ತಮ ವ್ಯಾಸಂಗದ ವಾತವರಣವನ್ನು ನೀಡುತ್ತಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಜೀವನದ ಉತ್ತುಂಗ ಶಿಖರವನ್ನು ತಲುಪಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ” ಎಂದು ಇವರು
ಅಭಿಪ್ರಾಯ ಪಟ್ಟರು ಹಾಗೂ ನಮ್ಮ ಜೀವನದಲ್ಲಿ ಎರಡು ದಿನಗಳು ಮುಖ್ಯವಾಗುತ್ತದೆ. ಒಂದು ನಾವು ಹುಟ್ಟಿದ ದಿನ ಇನ್ನೊಂದು ನಮ್ಮ ಬದುಕಿನ ಕಾರಣವನ್ನು ತಿಳಿದುಕೊಂಡ ದಿನ ಎಂದರು.

ಯಶಸ್ವಿ ಜೀವನದಲ್ಲಿ ಶಿಕ್ಷಣ ಕೇವಲ ಶೇ. 15 ರಷ್ಟು ಪರಿಣಾಮ ಬೀರಿದರೆ ಧನಾತ್ಮಕ ಚಿಂತನೆ ಶೇ. 85 ರಷ್ಟು ಪರಿಣಾಮ ಬೀರುತ್ತದೆ .ನಾವು ನಮ್ಮನ್ನು ಪ್ರಪಂಚದ ಶ್ರೇಷ್ಠ ಸೃಷ್ಟಿಯೆಂದು ತಿಳಿದುಕೊಳ್ಳಬೇಕು. “ನಿನ್ನ ಹಾಗೆ ಹಿಂದೆ ಯಾರೂ ಹುಟ್ಟಲಿಲ್ಲ. ಮುಂದೆ ಯಾರೂ ಹುಟ್ಟಲಾರರು. ಕೋಟಿ ಹಣ ಖರ್ಚು ಮಾಡಿದರೂ ನಿನ್ನಂತೆ ಇನ್ನೊಬ್ಬರನ್ನು ಸೃಷ್ಟಿಸಲು ಸಾಧ್ಯವಿಲ್ಲ. ನಿನ್ನ ಬೆರಳಚ್ಚು ಜಗತ್ತಿನ ಇನ್ನಾರಲ್ಲೂ ಇಲ್ಲ. ನಿನಗೆ ನೀನೇ ಸಾಟಿ” ಎಂದರು.

ನಂತರ ಮಾತನಾಡಿದ ಫಾದರ್ ಡಾ!! ವಿಜಯ ಕುಮಾರ ಪಿ ಅವರು ಮಾತನಾಡಿ ಈಗಿನ ಮಕ್ಕಳು ಕಲಿಕೆ, ಗ್ರಹಿಕೆಯಲ್ಲಿ ಮುಂದೆ ಇದ್ದಾರೆ: ಈಗಿನ ಮಕ್ಕಳು ಕಲಿಕೆ ಮತ್ತು ಗ್ರಹಿಕೆಯಲ್ಲಿ ತುಂಬಾ ಬುದ್ಧಿವಂತರಿದ್ದಾರೆ. ಯೋಚನಾ ಶಕ್ತಿ ಹೆಚ್ಚಿರುತ್ತದೆ. ಇದ್ದನು ಬೇಕಾದ ರೀತಿಯಲ್ಲಿ ಪಾಲನೆ ಪೋಷಣೆ
ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ. ಮೊಬೈಲ್ ನ್ನು ಮಕ್ಕಳಿಂದ ದೂರವಿರಿಸಿ. ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಈ ಶಾಲೆಯ ಮೇಲೆ ನಂಬಿಕೆ ಇಟ್ಟಿದ್ದೀರಿ. ಮುಂದಿನ ದಿನಗಳಲ್ಲಿ ಶಾಲೆ ಅಭಿವೃದ್ಧಿ ಹೊಂದಲಿದೆ ಮಕ್ಕಳು ಕುಟುಂಬಕ್ಕೆ ಶಾಲೆಗೆ, ಸಮಾಜಕ್ಕೆ ಆಸ್ತಿ ಮಕ್ಕಳು ದೇವರ ಕಾಣಿಕೆ ನೀವು ಕುಟುಂಬಕ್ಕೆ ಶಾಲೆಗೆ, ಸಮಾಜಕ್ಕೆ ಆಸ್ತಿ. ನೀವು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಒಳ್ಳೆಯ ಭವಿಷ್ಯವನ್ನು ಪಡೆಯಿರಿ.

ಸನ್ಮಾನ :- ಸಮಾರಂಭದಲ್ಲಿ ಆಗಮಿಸಿದ ಗಣ್ಯರಿಗೆ ಹಾಗೂ ಪತ್ರಕರ್ತ ರಿಗೆ ಶಾಲೆಯ ಪರವಾಗಿ ಶಾಲು ಹಾರ ,ಸ್ಮರಣಿಕೆ, ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಫಾದರ್ ಪೊನ್ನ ಸ್ವಾಮಿ, ಫಾದರ್ ಅನಿಲ್ ಕುಮಾರ್, ಪಾದರ್, ಆಲ್ಪೋನ್ಸ್ ಜಾಜ್೯ , ಸಿಸ್ಟರ್ ಮರಿಯ ಪನ್ನೂರ್ , ಹಾಗೂ ಕಾಂಗ್ರೆಸ್ ಮುದಗಲ್ಲ ಘಟಕ ಅಧ್ಯಕ್ಷ ರಾದ ಶಿವಶಂಕರ ಗೌಡ , ತಮ್ಮಣ್ಣ ಗುತ್ತಿಗೆದಾರ, ಅಬ್ದುಲ್ ಗಫೂರ್ ಖಾನ್, ನ್ಯಾಮತುಲ್ಲಾ ಖಾದ್ರಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ , ನಾಗರಾಜ ತಳವಾರ , ಶಶಿಕಲಾ ಭೋವಿ,ಶಿಕ್ಷಕರು ಗಣ್ಯರುಉಪಸ್ಥಿತರಿದ್ದರು

ವರದಿ:- ಮಂಜುನಾಥ ಕುಂಬಾರ..

Prajavikshane

Chandru R Bhanapaur

Leave a Reply

error: Content is protected !!