ಮುದಗಲ್ಲ ವರದಿ…
ಪಕ್ಷ ಸಂಘಟನೆಗೆ ಸಮರ್ಪಣಾ ಭಾವದಿಂದತೊಡಗಿಸಿಕೊಳ್ಳಿ : ಡಿ.ಎಸ್ ಹೂಲಿಗೇರಿ..

ಮುದಗಲ್ಲ :- ಅಲ್ಪಸಂಖ್ಯಾತ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾಜಿ ಶಾಸಕರ ನಿವಾಸದಲ್ಲಿ ಈ ಕಾರ್ಯಕ್ರಮ ಜರುಗಿತ್ತು ಕಾಯ೯ಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಲಿಂಗಸುಗೂರು ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಅವರು ಈ ಸಂದರ್ಭ ದಲ್ಲಿ ಮಾತನಾಡಿದ್ದರು ಕಾಂಗ್ರೆಸ್ ಪಕ್ಷದ ಗತವೈಭವವನ್ನು ಉಳಿಸುವಲ್ಲಿ ಮತ್ತು ಸಂಘಟಿಸುವ ನಿಟ್ಟಿನಲ್ಲಿ ಸಂಕಲ್ಪ, ಸಮರ್ಪಣಾ ಮನೋಭಾವದೊಂದಿಗೆ ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.
ಇಲ್ಲಿನ ಮಾಜಿ ಶಾಸಕರ ನಿವಾಸದಲ್ಲಿ ಈ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಶುಭಾಶಯ ಸಲ್ಲಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಬೆನ್ನೆಲುಬಿದ್ದಂತೆ, ಪಕ್ಷವು ಸದಾ ನಿಮ್ಮ ಜೊತೆಗಿದೆ. ಅಪಪ್ರಚಾರಕ್ಕೆ ಕಿವಿಗೊಡದೆ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ ಅವರು, ಪದಾಧಿಕಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡವರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶಂಕರಗೌಡ ಉಪ್ಪರನಂದಿಹಾಳ ಮಾತನಾಡಿ, ‘ಅಲ್ಪಸಂಖ್ಯಾತರ ಘಟಕವು ಅಲ್ಪಸಂಖ್ಯಾತರನ್ನು ಮಾತ್ರ ಸಂಘಟಿಸುವುದಲ್ಲದೆ, ಸಮಗ್ರ ಪಕ್ಷದ ಸಂಘಟನೆಯಲ್ಲಿ ಕೈಜೋಡಿಸಿ ಕಾರ್ಯ ಪ್ರವೃತ್ತರಾಗಬೇಕು’ ಎಂದರು.
ರಾಯಚೂರು ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷರಾದ ಸೈಯದ್ ಫಯಾಜುದ್ದೀನ ಕಾಂಗ್ರೆಸ್ ಪಕ್ಷ ಜನಪರ ಚಿಂತನೆಯ ಪಕ್ಷವಾಗಿದ್ದು. ಪಕ್ಷ ಸಂಘಟನೆ ಒಂದು ಸರಳ ಕೆಲಸವಲ್ಲ ಅದು ಒಂದು ಜವಾಬ್ದಾರಿಯ ಕೆಲಸ. ಈ ಜವಾಬ್ದಾರಿಯನ್ನು ನೂತನ ಅಧ್ಯಕ್ಷರು ಯುವಕರಾಗಿದ್ದು ಸಮರ್ಥವಾಗಿ ನಿಭಾಯಿ ಸುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿ ಶುಭ ಕೋರಿದರು.

ಮಾತನಾಡಿ, ಗೋವಿಂದ ನಾಯಕ ಅವರು ಮಾತನಾಡಿದ್ದರು ಅಬ್ದುಲ್ ಗಪೂರ ಖಾನ್ ಒಳ್ಳೆಯ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ಹೆಸರು ಇದೆ ವಿಶೇಷವಾಗಿದೆ. ಇವರ ಮೇಲೆ ಕಾಂಗ್ರೆಸ್ ಪಕ್ಷ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಪಕ್ಷ ಸಂಘಟಣೆ ಮಾಡಲು ಅವಕಾಶ ನೀಡಿದೆ. ಮಾಜಿ ಶಾಸಕರು ಹಾಗೂ ಎಲ್ಲ ಕಾಂಗ್ರೆಸ್ ನಾಯಕರ ವಿಶ್ವಾಸವನ್ನು ಗಳಿಸುತ್ತಾ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಸಂಘಟಣೆ ಮಾಡಬೇಕೆಂದು ಸಲಹೆ ನೀಡಿ ಮುಂದೆ ಬರುವ ಪಂಚಾಯಿತಿ ಹಾಗೂ ತಾಲೂಕ ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಸಂಘಟಣೆಯೊಂದಿಗೆ ಇನ್ನುಳಿದ ಹಿಂದುಳಿದ ಹಾಗೂ ಎಲ್ಲ ಸಮಾಜದ ನಾಯಕರ ಜೊತೆ ಕೂಡಿ ಪಕ್ಷ ಸಂಘಟಣೆ ಮಾಡಬೇಕೆಂದು ಹೇಳಿ ಸಂಘಟಣಾ ಪ್ರಯತ್ನಕ್ಕೆ ಪರಮಾತ್ಮನ್ನು ಸಫಲ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಲಿಂಗಸುಗೂರು ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ,ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶಂಕರಗೌಡ ಉಪ್ಪರನಂದಿಹಾಳ
ಗೋವಿಂದ ನಾಯಕ,ರಾಯಚೂರು ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷರಾದ ಸೈಯದ್ ಫಯಾಜುದ್ದೀನ , ನಿಕಟ ಪೂವ೯ ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ದಾವೂದ್ ಸಾಬ,ಅಬ್ದುಲ್ ಗಪೂರ ಖಾನ್ ,
ಎಸ್,ಆರ್ ರಸೂಲ್ ಸಾಬ, ಅಜ್ಮೀರ್ ಬೆಳ್ಳಿಕಟ್,ರಾಘವೇಂದ್ರ ಕುದರಿ ,ಖದೀರ್ ಪಾನ್ ವಾಲೆ, ಹಾಗೂ ಪದಾಧಿಕಾರಿಗಳಾದ ರಾಜಸಾಬ ಮೀಠಾಯಿ, ಅಬ್ದುಲ್ ಖಯ್ದುಂ ಷಾ,ಆರೋಗ್ಯಪ್ಪ ಕುರಿ, ರಹೀಮುದ್ದೀನ್ ಪಟೇಲ್ ,ಚಂದಪಾಷ ಜಮಾದಾರ, ತಸ್ಲಿಂ ಆಹ್ಮದ್ ಮುಲ್ಲಾ,ಅಮೀರ್ ಹುಸೇನ್, ಮಹ್ಮದ್ ಅಲೀಮ್ ,ಶಬ್ಬೀರ್ ಅಲಿ ಮಕಾನದಾರ ,ಜಾಕೀರ್ ಪಾಶ ಮಹ್ಮದ್ ಮೇಗಳಪೇಟೆ ,ಇಸ್ಮಾಯಿಲ್ ಜಂಬಾಳಿ, ಮಹಿಬೂಬಸಾಬ ಬೆಳ್ಳಿಕಟ್ , ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕುಂಬಾರ..