BIG NEWS : “ಕರ್ನಾಟಕ ಸಾಧಕ ಶ್ರೇಷ್ಠ ರತ್ನ” ಪ್ರಶಸ್ತಿಗೆ ಆಯ್ಕೆಯಾದ ಕಳಕಪ್ಪ ಕಂಬಳಿ..!!

You are currently viewing BIG NEWS : “ಕರ್ನಾಟಕ ಸಾಧಕ ಶ್ರೇಷ್ಠ ರತ್ನ” ಪ್ರಶಸ್ತಿಗೆ ಆಯ್ಕೆಯಾದ ಕಳಕಪ್ಪ ಕಂಬಳಿ..!!

BIG NEWS : “ಕರ್ನಾಟಕ ಸಾಧಕ ಶ್ರೇಷ್ಠ ರತ್ನ” ಪ್ರಶಸ್ತಿಗೆ ಆಯ್ಕೆಯಾದ ಕಳಕಪ್ಪ ಕಂಬಳಿ..!!

ಪ್ರಜಾ ವೀಕ್ಷಣೆ ಸುದ್ದಿ : 

ಕೊಪ್ಪಳ : ಜಿಲ್ಲೆಯ ಕುಕನೂರು ಪಟ್ಟಣದ ಸಮಾಜ ಸೇವಕ ಕಳಕಪ್ಪ ಕಂಬಳಿಯವರು “ಕರ್ನಾಟಕ ಸಾಧಕ ಶ್ರೇಷ್ಠ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ.) ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಬೆಂಗಳೂರು ಇವರಿಂದ ಉತ್ತಮ ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವ ದೃಷ್ಟಿಯಿಂದ ನೀಡಲ್ಪಡುವ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ಪ್ರಶಸ್ತಿಗೆ ಜಿಲ್ಲೆಯ ಕುಕನೂರು ಪಟ್ಟಣದ ಕಳಕಪ್ಪ ಕಂಬಳಿ ಆಯ್ಕೆಯಾಗಿದ್ದು, ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ದ್ವನಿ (ರಿ) ಭಟ್ಕಳ ತಾಲೂಕ ಘಟಕ ಉತ್ತರ ಕನ್ನಡ ಜಿಲ್ಲೆ ಇವರು ಆಯೋಜಿಸಿರುವ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಭಟ್ಕಳ ನಗರದ ನಾಗಯಕ್ಕೆ ಧರ್ಮಾರ್ಥ ಸಭಾಭವನದಲ್ಲಿ ಇದೇ ದಿನಾಂಕ 28 ಜನವರಿ 2026ರಂದು ಕಳಕಪ್ಪ ಕಂಬಳಿ ಅವರ ನಿರಂತರ ಸಮಾಜಮುಖಿ ಕಾರ್ಯ, ಶೋಷಿತರ ಸೇವೆ ಹಾಗೂ ಜನಪರ ಕಾಳಜಿಯನ್ನು ಗುರುತಿಸಿ ಅವರಿಗೆ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!